Crime News

ಲ್ಯಾಪ್ ಟಾಪ್ ಕಳವು ಪ್ರಕರಣ

ದಿನಾಂಕಛ 18-062020 ರಂದು ವಿರಾಜಪೇಟೆ ತಾಲ್ಲೂಕು ಪಾಲಂಗಾಲ ಗ್ರಾಮದ ನಿವಾಸಿ ಗಣಪತಿ ಎಂಬುವವರು ಕೆಲಸದ ನಿಮಿತ್ತ ಅವರ ಜೀಪಿನಲ್ಲಿ ಕಡಂಗ ಗ್ರಾಮಕ್ಕೆ ಬಂದು ರಸ್ತೆ ಬದಿಯಲ್ಲಿ ಜೀಪನ್ನು ನಿಲ್ಲಿಸಿದ್ದರು. ಕೆಲಸ ಮುಗಿಸಿಕೊಂಡು ವಾಪಾಸ್ಸು ಬಂದು ನೋಡಿದಾಗ ಜೀಪಿನಲ್ಲಿ ಇಟ್ಟಿದ್ದ ಲ್ಯಾಪ್ ಟಾಪ್ ಮತ್ತು 5000 ರೂ ನಗದು ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕಛ 17-06-2020 ರಂದು ರಾತ್ರಿ ವಿರಾಜಪೇಟೆ ತಾಲ್ಲೂಕು ಕದನೂರು ಗ್ರಾಮದ ಬಸ್ ತಂಗುದಾಣದಲ್ಲಿ ಸುಮಾರು 45 ವರ್ಷ ಪ್ರಾಯದ ಅಪರಿಚಿತ ಪುರುಷನೊಬ್ಬ ನೇಣು ಬಿಗಿದುಕೊಂಡು ಆತ್ನಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಅನೂಪ್ ಎಂಬುವವರು ನೀಡಿದ ದೂರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆಕಸ್ಮಿಕವಾಗಿ ಕೆರೆಗೆ ಬಿದ್ದು ವ್ಯಕ್ತಿ ಸಾವು

ದಿನಾಂಕ: 18-06-2020 ರಂದು ಸೋಮವಾರಪೇಟೆ ತಾಲ್ಲೂಕು ಚೇರಳ ಶ್ರೀಮಂಗಲ ಗ್ರಾಮದ ನಿವಾಸಿ ರಮೇಶ್ ಎಂಬುವವರು ಅವರ ಮನೆಯ ಬಳಿ ಇರುವ ಕೆರೆಯಲ್ಲಿ ಕೈಕಾಲು ತೊಳೆಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದು ಈ ಬಗ್ಗೆ ಮೃತರ ತಂದೆ ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.