Crime News

ಹಾವು ಕಡಿತ, ಮಹಿಳೆ ಸಾವು.

ದಿನಾಂಕ: 23-06-2020 ರಂದು ಸೋಮವಾರಪೇಟೆ ತಾಲ್ಲೂಕು ಹಾನಗಲ್ಲು ಗ್ರಾಮದ ನಿವಾಸಿ ಶ್ರೀಮತಿ ಪಾರ್ವತಿ ಎಂಬುವವರು ದನಗಳಿಗೆ ಹುಲ್ಲು ಹಾಕಲು ಅವರ ಗದ್ದೆಯ ಬಳಿ ಇದ್ದ ಹುಲ್ಲು ಮೆದೆಯಿಂದ ಹುಲ್ಲನ್ನು ಎಳೆಯುವಾಗ ವಿಷಪೂರಿತ ಹಾವೊಂದು ಕಚ್ಚಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಮೃತರ ಸಹೋದರಿ ತಂಗಮ್ಮ ಎಂಬುವವರು ನೀಡಿದ ದೂರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆತ್ಮಹತ್ಯೆ ಪ್ರಕರಣ

ದಿನಾಂಕ: 23-06-2020 ರಂದು ಸೋಮವಾರಪೇಟೆ ತಾಲ್ಲೂಕು ಮಾದೇಗೋಡು ನಿವಾಸಿ ನಿವೃತ್ತ ಎ.ಎಸ್.ಐ ಈರಪ್ಪ ಎಂಬುವವರು ಕೌಟುಂಬಿಕ ಕಾರಣದಿಂದ ಜೀವನದಲ್ಲಿ ಜುಗುಪ್ಸೆಗೊಂಡು ಮನೆಯಲ್ಲಿ ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತರ ಪತ್ನಿ ನೀಡಿದ ದೂರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆತ್ಮಹತ್ಯೆ ಪ್ರಕರಣ

ದಿನಾಂಕ: 23-06-2020 ರಂದು ಮಡಿಕೇರಿ ತಾಲ್ಲೂಕು ನೆಲಜಿ ಗ್ರಾಮದ ನಿವಾಸಿ ಮೇದಪ್ಪ ಎಂಬುವವರು ಮದ್ಯಪಾನ ಮಾಡುವ ಅಭ್ಯಾಸವಿದ್ದು ವೈಯಕ್ತಿಕ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ನೇಣೂ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತರ ಪತ್ನಿ ನೀಡಿದ ದೂರಿನ ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು.

ದಿನಾಂಕ: 23-06-2020 ರಂದು ಮೈಸೂರು ಜಿಲ್ಲೆ ಹುಣಸೂರು ನಿವಾಸಿ ಸುಬ್ರಮಣಿ ಎಂಬುವವರು ಅವರ ತಂದೆ ಪುಣ್ಯತಿಥಿ ಪೂಜೆ ಸಲುವಾಗಿ ಮಡಿಕೇರಿ ತಾಲ್ಲೂಕು ಭಾಗಮಂಡಲದಲ್ಲಿರುವ ತ್ರಿವೇಣಿ ಸಂಗಮಕ್ಕೆ ಬಂದು ಸ್ನಾನ ಮಾಡಿ ಮೇಲೆ ಬರುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದು ಈ ಬಗ್ಗೆ ಮೃತರ ಸಹೋದರ ಮಣಿಕಂಠ ಎಂಬುವವರು ನೀಡಿದ ದೂರಿನ ಮೇರೆ ಭಾಗಮಂಡಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆನ್ ಲೈನ್ ವಂಚನೆ ಪ್ರಕರಣ

ಒ.ಎಲ್.ಎಕ್ಸ್ ಆನ್ ಲೈನ್ ಮಾರಾಟ ಜಾಲತಾಣದ ಮೂಲಕ ಬೈಕ್ ಖರೀದಿಸಲು ಹೋಗಿ ಹಣ ಕಳೆದುಕೊಂಡು ವಂಚನೆಗೆ ಒಳಗಾಗಿರುವ ಪ್ರಕರಣ ವರದಿಯಾಗಿರುತ್ತದೆ.

ದಿನಾಂಕ: 22-06-2020 ರಂದು ಮಡಿಕೇರಿ ತಾಲ್ಲೂಕು ಭಾಗಮಂಡಲ ಗ್ರಾಮದ ನಿವಾಸಿ ಮಂಜುನಾಥ ನಾಯಕ ಎಂಬುವವರು ಓ.ಎಲ್.ಎಕ್ಸ್ ಆನ್ ಲೈನ್ ಮಾರಾಟ ತಾಣದಲ್ಲಿ ಬೈಕ್ ಮಾರಾಟದ  ಜಾಹೀರಾತನ್ನು ಗಮನಿಸಿ ಅದರಲ್ಲಿದ್ದ 8209744852 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ವಿಚಾರಿಸಿದಾಗ ಒಬ್ಬ ವ್ಯಕ್ತಿ ಮಾತನಾಡಿ ಶ್ರೀಜಿತ್ ಲಾಲ್ ಎಂದು ಹೇಳಿ ಆತನನ್ನು ಸೇನೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಎಂಬುದಾಗಿ ಪರಿಚಯಿಸಿಕೊಂಡು 70,000 ರೂ ಬೆಲೆಗೆ ವಾಹನ ಮಾರಾಟ ಮಾಡುವುದಾಗಿ ತಿಳಿಸಿರುತ್ತಾನೆ. ನಂತರ ಪೇಟಿಎಂ ಖಾತೆಗೆ ಹಣ ಕಳುಹಿಸಲು ಹೇಳಿದ್ದು ಒಟ್ಟು 1,09,250 ಹಣವನ್ನು ಶ್ರೀಜಿತ್ ಲಾಲ್ ಗೆ ಆನ್ ಲೈನ್ ಮೂಲಕ ಸಂದಾಯ ಮಾಡಿರುತ್ತಾರೆ. ನಂತರ ವಾಹನದ ಬಗ್ಗೆ ವಿಚಾರಿಸಲು ಕರೆ ಮಾಡಿದಾಗ ಪುನಃ 20,000 ಹಣವನ್ನು ನೀಡುವಂತೆ ಹೇಳಿದ್ದು, ಆತನು ಹಣ ಪಡೆದು ವಾಹನ ನೀಡದೇ ವಂಚನೆ ಮಾಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಅಪರಾದ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಾರ್ವಜನಿಕರು ಆನ್ ಲೈನ್ ಮೂಲಕ ಉಪಯೋಗಿಸಿದ ವಾಹನ ಖರೀದಿಸಲು ಹೋಗಿ ವಂಚನೆಗೆ ಒಳಗಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಸಾರ್ವಜನಿಕರು ಆನ್ ಲೈನ್ ಮೂಲಕ ವಾಹನ ಅಥವಾ ಯಾವುದೇ ವಸ್ತಗಳನ್ನು ಖರೀದಿಸುವಾಗ ಮಾರಾಟ ಮಾಡುವ ವ್ಯಕ್ತಿಗಳ ಬಗ್ಗೆ ಸರಿಯಾಗಿ ಪರಿಶೀಲಿಸಿ, ವಸ್ತು ಅಥವಾ ವಾಹನಗಳನ್ನು, ದಾಖಲಾತಿಗಳನ್ನು ನೇರವಾಗಿ ನೋಡಿ ಪರಿಶೀಲಿಸಿ ನಂತರ ಹಣ ಪಾವತಿಸಿ ಖರೀದಿಸಲು ಸೂಚಿಸಲಾಗಿದೆ.

ಅಕ್ರಮ ಮರಳು ಸಾಗಾಟ ಪ್ರಕರಣ

ದಿನಾಂಕ: 23-06-2020 ರಂದು ವಿರಾಜಪೇಟೆ ತಾಲ್ಲೂಕು ಬಾಳಾಜಿ ಗ್ರಾಮದ ಬಳಿ ಕೆಎ-12-ಎ-3713 ರ ಪಿಕ್ ಅಪ್ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಗೋಣಿಕೊಪ್ಪ ಠಾಣೆ ಪಿ.ಎಸ್.ಐ ಸುರೇಶ್ ಬೋಪಣ್ಣ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.