Crime News

ಹಲ್ಲೆ ಪ್ರಕರಣ

ದಿನಾಂಕ: 25-06-2020 ರಂದು ವಿರಾಜಪೇಟೆ ತಾಲ್ಲೂಕು ಬೆಕ್ಕೆಸೊಡ್ಲೂರು ಗ್ರಾಮದ ನಿವಾಸಿ ಪ್ರಮೋದ್ ಎಂಬುವವರು ದನಗಳೊಂದಿಗೆ ಮನೆಗೆ ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿ ಭಜನ್ ದೇವಯ್ಯ ಎಂಬುವವರು ದಾರಿ ತಡೆದು ಕ್ಷುಲ್ಲಕ ಕಾರಣಕ್ಕೆ ಅವಾಚ್ಯ ಪದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ಮಾಡಿ ನೋವುಪಡಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 24-06-25020 ರಂದು ವಿರಾಜಪೇಟೆ ತಾಲ್ಲೂಕು ಕೆ.ಬಾಡಗ ಗ್ರಾಮದ ನಿವಾಸಿ ಪೊನ್ನಣ್ಣ ಎಂಬುವವರ ತೋಟಕ್ಕೆ ಅದೇ ಗ್ರಾಮದ ನಿವಾಸಿಗಳಾದ ಮೀದೇರಿರ ಪೆಮ್ಮಯ್ಯ ಮತ್ತು ತಿಮ್ಮಯ್ಯ ಎಂಬುವವರು ಅಕ್ರಮ ಪ್ರವೇಶ ಮಾಡಿ ಹಲವು ಬೆಳೆಗಳನ್ನು ನಾಸಪಡಿಸಿ ತೋಟದ ಕಾರ್ಮಿಕ ಬೊಗ್ಗ ಎಂಬುವವರಿಗೆ ಬೆದರಿಕೆ ಹಾಕಿದ್ದು ಈ ಬಗ್ಗೆ ಪೊನ್ನಣ್ಣ ಎಂಬುವವರು ನೀಡಿದ ಪುಕಾರಿನ ಮೇರೆ ಕುಟ್ಟ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.