Crime News

ಮನುಷ್ಯ ಕಾಣೆ:

ಕುಶಾಲನಗರ ಪಟ್ಟಣ ಠಾಣಾ ವ್ಯಾಪ್ತಿಯ ಮುಳ್ಳುಸೋಗೆ ಗ್ರಾಮದ ನಿವಾಸಿ ಆರ್. ಮಹೇಶ ಎಂಬವರ ತಂದೆ 64 ವರ್ಷ ಪ್ರಾಯದ ಹೆಚ್.ಸಿ. ರಾಮು ಎಂಬವರು ದಿನಾಂಕ 10-6-2018 ರಂದು 2-30 ಪಿ.ಎಂ. ಗೆ ಮನೆಯಿಂದ ಹೊರಗಡೆ ಹೋಗಿ ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಆರ್. ಮಹೇಶ್ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿಗೆ ಕಾರು ಡಿಕ್ಕಿ ಇಬ್ಬರಿಗೆ ಗಾಯ:

ಕೂಡಿಗೆ ಗ್ರಾಮದ ನಿವಾಸಿ ಕೆ.ಸಿ. ಮಂಜುನಾಥ ಎಂಬವರು ದಿನಾಂಕ 13-6-2018 ರಂದು ಸಂಜೆ 7-20 ಗಂಟೆಗೆ ತಮ್ಮ ಬಾಪ್ತು ಲಾರಿಯಲ್ಲಿ ಸುಂಟಿಕೊಪ್ಪದ ಕಡೆಗೆ ಹೋಗುತ್ತಿದ್ದಾಗ ಕುಶಾಲನಗರದ ಸಮೀಪದ ಬಸವನಳ್ಳಿ ಗ್ರಾಮದ ಆನೇಕಾಡು ಎಂಬಲ್ಲಿ ಎದುರುಗಡೆಯಿಂದ ಬಂದ ಕಾರು ಡಿಕ್ಕಿಯಾಗಿದ್ದುಮ ಸದರಿ ಕಾರಿನಲ್ಲಿದ್ದ ಮಹಳೆಯೊಬ್ಬರಿಗೆ ಗಾಯಗಳಾಗಿದ್ದು ಆಕೆಯನ್ನು ಚಿಕಿತ್ಸೆಗೆ ಮಡಿಕೇರಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮದ್ಯೆ ಮೃತಪಟ್ಟಿದ್ದು ಈ ಸಂಬಂಧ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿ ಡಿಕ್ಕಿ ಪಾದಚಾರಿ ಸಾವು:

ಸುಳ್ಯದ ನಿವಾಸಿ ಬಾಬು ಎಂಬವರು ದಿನಾಂಕ 12-6-2018 ರಂದು 8-45 ಪಿ.ಎಂ.ಗೆ ಮಡಿಕೇರಿ ಸಮೀಪಕ ಕಾಟಕೇರಿ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಲಾರಿಯೊಂದನ್ನು ಅದರ ಚಾಲಕ ಅತೀ ವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿ ಸದರಿ ಬಾಬುರವರಿಗೆ ಡಿಕ್ಕಿಪಡಿಸಿ ಲಾರಿಯನ್ನು ನಿಲ್ಲಿಸದೇ ಹೋಗಿದ್ದು ಪರಿಣಾಮ ಬಾಬುರವರು ತೀವ್ರವಾಗಿ ಗಾಯಗೊಂಡು ಅವರನ್ನು ಚಿಕಿತ್ಸೆಗೆ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿ, ಚಿಕಿತ್ಸೆ ಫಲಕಾರಿಯಾಗದೆ ಸದರಿ ಬಾಬುರವರು ದಿನಾಂಕ 13-6-2018 ರಂದು ಮೃತಪಟ್ಟಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬ್ಯಾಟರಿ ಕಳವು:

ಮಡಿಕೇರಿ ತಾಲೋಕು ಮದೆನಾಡು ಗ್ರಾಮದಲ್ಲಿ ಅಳವಡಿಸಿದ ಬಿ.ಎಸ್‍.ಎನ್‍.ಎಲ್. ಟವರ್ ಅಳವಡಿಸಿದ ಸುಮಾರು 24,000 ರೂ. ಬೆಲೆಬಾಳುವ ಬ್ಯಾಟರಿಗಳನ್ನು ದಿನಾಂಕ 12-6-2018 ರಂದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಸಂಬಂಧ ಬಿ.ಎಸ್‍.ಎನ್‍.ಎಲ್. ಸಬ್ ಡಿವಿಷನಲ್ ಇಂಜಿನಿಯರ್ ಶ್ರೀಮತಿ ಕೆ.ಸೀತೆ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಕಸ್ಮಿಕ ಬೆಂಕಿ ತಗುಲಿ ಮಹಿಳೆ ಸಾವು:

ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕೆದಮುಳ್ಳೂರು ಗ್ರಾಮದ ನಿವಾಸಿ ವೈ.ಎ. ಆಶಿಕ್ ಎಂಬವರ ತಾಯಿ ಕಾವೇರಿ ಎಂಬವರಿಗೆ ದಿನಾಂಕ 6-6-2018 ರಂದು ಬೆಳಗ್ಗೆ ಒಲೆಗೆ ಬೆಂಕಿ ಉರಿಸುವಾಗ ಆಕಸ್ಮಿಕವಾಗಿ ಅವರ ಮೈಗೆ ಬೆಂಕಿ ತಗುಲಿ ತೀವ್ರವಾಗಿ ಗಾಯಗೊಂಡು ಸದರಿಯವರನ್ನು ಚಿಕಿತ್ಸೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಿನಾಂಕ 12-6-2019 ರಂದು ಚಿಕಿತ್ಸೆ ಫಲಕಾರಿಯಾಗದೆ ಸದರಿ ಮಹಿಳೆ ಕಾವೇರಿಯವರು ಮೃತಪಟ್ಟಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೀರಿನಲ್ಲಿ ಬಿದ್ದು ವ್ಯಕ್ತಿ ದುರ್ಮರಣ:

ಕೇರಳ ರಾಜ್ಯದ ಇರಿಟಿ ನಿವಾಸಿ ಜೋಬಿಸೈಮನ್ ರವರು ದಿನಾಂಕ 12-6-2018 ರಂದು ಶರತ್ ಕುಮಾರ್ ಎಂಬವರೊಂದಿಗೆ ಲಾರಿಯಲ್ಲಿ ಕಲ್ಲುಗಳನ್ನು ತುಂಬಿಸಿಕೊಂಡು ಕೇರಳದ ಇರಟಿಯಿಂದ ವಿರಾಜಪೇಟೆಗೆ ತಂದು ಇರಟಿಗೆ ಲಾರಿಯಲ್ಲಿ ಮರಳುತ್ತಿದ್ದಾಗ ರಾತ್ರಿ 8-15 ಗಂಟೆಗೆ ವಿರಾಜಪೇಟೆ – ಮಾಕುಟ್ಟ ಮಾರ್ಗವಾಗಿ ಇರಟಿಗೆ ಹೋಗುತ್ತಿದ್ದಾಗ ರಾತ್ರಿ 9-00 ಗಂಟೆ ಸಮಯದಲ್ಲಿ ಹನುಮಾನ್ ದೇವಸ್ಥಾನದ ಬಳಿ ತಿರುವಿನಲ್ಲಿ ವಿಪರೀತ ಮಳೆಯಿಂದಾಗಿ ರಸ್ತೆಯಲ್ಲಿ ಮರ ಬಿದ್ದಿದ್ದು ಅದನ್ನು ಸದರಿ ಜೋಬಿಸೈಮನ್ ಹಾಗು ಶರತ್ ಕುಮಾರ್ ರವರು ತೆರವುಗೊಳಿಸುತ್ತಿದ್ದಾಗ ಒಮ್ಮೆಲೆ ರಸ್ತೆಬದಿಯ ಬರೆಯಿಂದ ಮಣ್ಣು ಕುಸಿದ ಪರಿಣಾಮ ಶರತ್ ಕುಮಾರ್ ರಸ್ತೆಬದಿಯ ಗುಂಡಿಗೆ ಬಿದ್ದು ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದು ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.