Crime News

ಮಹಿಳೆ ಆತ್ಮಹತ್ಯೆ

ವಿರಾಜಪೇಟೆ ಬಳಿಯ ತೋರ ಗ್ರಾಮದ ನಿವಾಸಿ ಸರಸ್ವತಿ ಎಂಬವರು ಎರಡು ಮೂರು ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು ನೋವು ಮರೆಯಲು ಮದ್ಯಪಾನ ಮಾಡುತ್ತಿದ್ದು ದಿನಾಂಕ 24/06/2020ರಂದು ಮನೆಯಲ್ಲಿ ಮದ್ಯಪಾನ ಮಾಡಿದ್ದು ನಂತರ ಹೊಟ್ಟೆನೋವು ಹೆಚ್ಚಾದ ಕಾರಣ ಯಾವುದೋ ಕಳೆನಾಶಕ ಔಷಧಿಯನ್ನು ಸೇವಿಸಿ ಅಸ್ವಸ್ಥರಾಗಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 26/06//2020ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

ದಿನಾಂಕ 25/06/2020ರ ರಾತ್ರಿ ವೇಳೆ ನಾಪೋಕ್ಲು ಬಳಿಯ ಕಡಂಗ ಅರಪಟ್ಟು ಗ್ರಾಮದ ಪಿ.ಎ.ಅಬ್ದುಲ್ಲಾ ಎಂಬವರ ಎಡಪಾಲ ಗ್ರಾಮದ ಎಲೆಕ್ಟ್ರಾನಿಕ್ಸ್ ಅಂಗಡಿಗೆ ಯಾರೋ ಕಳ್ಳರು ಅಂಗಡಿಯ ಷಟರ್‌ನ ಬೀಗ ಮುರಿದು ಒಳ ಪ್ರವೇಶಿಸಿ ಸುಮಾರು ರೂ.1,20,000/- ಮೌಲ್ಯದ ಟಿ.ವಿ., ಯುಪಿಎಸ್, ಫ್ಯಾನ್ ಮುಂತಾದ ವಸ್ತುಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 26/06/2020ರಂದು ಮಡಿಕೇರಿ ಬಳಿಯ ಅರುವತೊಕ್ಲು ನಿವಾಸಿ ತಮ್ಮಯ್ಯ ಎಂಬವರ ಜೊತೆಗೆ ಅದೇ ಗ್ರಾಮದ ನಿವಾಸಿಗಳಾದ ರೋಹನ್ ತಿಮ್ಮಯ್ಯ ಮತ್ತು ತಿಲನ್ ಎಂಬವರು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ದೊಣ್ಣೆಯಿಂದ ತಮ್ಮಯ್ಯನವರಿಗೆ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಕಾಣೆ ಪ್ರಕರಣ; ಶವ ಪತ್ತೆ

ಭಾಗಮಂಡಲ ಬಳಿಯ ಐವತೊಕ್ಲು ನಿವಾಸಿ ಬಿ.ಎ.ಪೂಣಚ್ಚ ಎಂಬವರು ದಿನಾಂಕ 25.06/2020ರಿಂದ ಮನೆಯಿಂದ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಕಾಣೆಯಾದ ಪೂಣಚ್ಚನವರನ್ನು ಮನೆಯವರು ಮತ್ತು ಇತರರು ಹುಡುಕಾಡುತ್ತಿರುವಾಗ ದಿನಾಂಕ 26/06/2020ರ ಸಂಜೆ ಐವತೊಕ್ಲು ಗ್ರಾಮದ ಬೋಪಣ್ಣನವರ ತೋಟದ ಪಕ್ಕ ಕಾವೇರಿ ಹೊಳೆಗೆ ಹೋಗುವ ದಾರಿಯಲ್ಲಿ ಪೂಣಚ್ಚನವರ ಶವ ಪತ್ತೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 26/06/2020ರಂದು ಸಿದ್ದಾಪುರ ಬಳಿಯ ಚೆನ್ನಯ್ಯನಕೋಟೆ ನಿವಾಸಿ ಸತೀಶ್‌ ಎಂಬಾತನು ಅದೇ ಗ್ರಾಮದ ನಿವಾಸಿ ಇಮ್ರಾನ್‌ ಎಂಬವರೊಡನೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಕತ್ತಿಯಿಂದ ಇಮ್ರಾನ್‌ರವರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.