Crime News

ಅಂತರ ಜಿಲ್ಲಾ ಅಕ್ರಮ ಗಾಂಜಾ ಮಾರಾಟಗಾರರ ಬಂಧನ:

ಕೊಡಗು ಅಕ್ರಮವಾಗಿ ಮಾರಾಟ ಮಾಡಲು ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ವಿರಾಜಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ದಿನಾಂಕ 27-06-2020 ರಂದು ವಿರಾಜಪೇಟೆ ನಗರಕ್ಕೆ ಆಟೋ ರಿಕ್ಷಾದಲ್ಲಿ ಮಾರಾಟಕ್ಕೆ ಗಾಂಜಾವನ್ನು ತರುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ರವರು ಸಿಬ್ಬಂದಿಯವರೊಡನೆ ವಿರಾಜಪೇಟೆ ನಗರದ ಹೊರ ವಲಯದ ಕಾವೇರಿ ಕಾಲೇಜು ಬಳಿ ಆಟೋ ನಂಬರ್ ಕೆ.ಎ-12-ಎ-2439 ರಲ್ಲಿ ಅಕ್ರಮಾವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳಾದ 1) ಮೈಸೂರು ನಗರದ ಕಲ್ಯಾಣಗಿರಿ ನಿವಾಸಿ ಡಿ.ಐ ಮಹಮ್ಮದ್ ಇಲಿಯಾಸ್ ಅಹಮ್ಮದ್, ಮತ್ತು 2) ಪಿರಿಯಾಪಟ್ಟಣ ತಾಲ್ಲೂಕು ಪಂಚವಳ್ಳಿ ಗ್ರಾಮದ ನಿವಾಸಿ ಜಬಿಉಲ್ಲಾಖಾನ್ ಎಂಬುವವರನ್ನು ವಶಕ್ಕೆ ಪಡೆದು 33000 ರೂ ಬೆಲೆ ಬಾಳುವ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾವನ್ನು ವಶಪಡಿಸಿಕೊಂಡು ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಈ ಪ್ರಕರಣದ ಕಾರ್ಯಚರಣೆಯಲ್ಲಿ ವಿರಾಜಪೇಟೆ ನಗರ ಪೊಲೀಸ್ ಠಾಣಾ ಪಿ.ಎಸ್.ಐ ಹೆಚ್.ಎಸ್ ಬೋಜಪ್ಪ, ಪ್ರೋಬೆಷನರಿ ಪಿ.ಎಸ್.ಐ ರವರುಗಳಾದ ವಿನಯ್ ಕುಮಾರ್. ಸಿ, ಎಸ್.ಅಭಿಜಿತ್, ಎ.ಎಸ್.ಐ ರವರುಗಳಾದ ಸಿ.ವಿ ಶ್ರೀಧರ್, ಸಿಬ್ಬಂದಿಯವರಾದ ಮುಸ್ತಾಫ, ಪಿ.ಯು ಮುನೀರ್, ಎನ್.ಎಸ್ ಲೊಕೇಶ, ಗಿರೀಶ, ಈರಪ್ಪ ವಠಾರ, ಯೋಗೇಶ್ ರವರುಗಳು ಪಾಲ್ಗೊಂಡಿರುತ್ತಾರೆ.  ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

ಅಕ್ರಮ ಅಕ್ಕಿ ಶೇಖರಣೆ ಪ್ರಕರಣ

ದಿನಾಂಕ: 27-06-2020 ರಂದು ವಿರಾಜಪೇಟೆ ತಾಲ್ಲೂಕು ಆಹಾರ ನಿರೀಕ್ಷಕರಾದ ಚಂದ್ರನಾಯ್ಕ್ ರವರಿಗೆ ದೊರೆತ ಖಚಿತ ಮಾಹಿತಿ ಮೇರೆ ಸಿದ್ದಾಪುರ ಗ್ರಾಮದ ಮೈಸೂರು ರಸ್ತೆಯ ಬಳಿ ನಿಂತಿದ್ದ ಕೆಎ-13-7580 ರ ಲಾರಿಯನ್ನು ಪರಿಶೀಲಿಸಿದಾಗ ಗುಹ್ಯ ಗ್ರಾಮದ ನಿವಾಸಿ ರಶೀದ್ ಎಂಬುವವರು ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳೀಗೆ ಸರ್ಕಾರದ ವತಿಯಿಂದ ವಿತರಿಸಲಾಗುವ ಸುಮಾರು 3 ಟನ್ ನಷ್ಟು ಅಕ್ಕಿಯನ್ನು ಅಕ್ರಮವಾಗಿ ಶೇಖರಿಸಿರುವುದು ಕಂಡು ಬಂದಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

ದಿನಾಂಕ: 26-06-2020 ರಂದು ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪ ಗ್ರಾಮದ ಹರಿಶ್ಚಂದ್ರಪುರ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-03-ಎಂಡಿ-4535 ರ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುಗಡೆಯಿಂದ  ಬರುತ್ತಿದ್ದ ಕೆಎ-12-ಪಿ-4999 ರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ನಂಬುಡಮಾಡ ಪವನ್ ಮತ್ತು ಸಂತೋಷ್ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಕಳವು ಪ್ರಕರಣ

ದಿನಾಂಕ: 23-06-2020 ರಂದು ವಿರಾಜಪೇಟೆ ತಾಲ್ಲೂಕು ಬೇಗೂರು ಗ್ರಾಮದ ನಿವಾಸಿ ಮಾಚಯ್ಯ ಎಂಬುವವರ ಮನೆಯ ಮೇಲ್ಚಾವಣಿ ಹಂಚನ್ನು ತೆಗೆದು ಯಾರೋ ಕಳ್ಳರು ತೆಗೆದು ಒಳನುಗ್ಗಿ ಬೀರುವಿನಲ್ಲಿಟ್ಟಿದ್ದ 42,000 ಮ್ಔಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದಿ: 27-06-2020 ರಂದು ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 27-06-2020 ರಂದು ವಿರಾಜಪೇಟೆ ತಾಲ್ಲೂಕು ಬೇಗೂರು ಗ್ರಾಮದ ನಿವಾಸಿ ರಶೀದ್ ಎಂಬುವವರು ಅವರ ಸ್ನೇಹಿತನೊಂದಿಗೆ ಆಟೋರಿಕ್ಷಾದಲ್ಲಿ ಹಳ್ಳಿಗಟ್ಟು ಗ್ರಾಮದ ಬಳಿ ರಸ್ತೆಯಲ್ಲಿ ಹೋಗುತ್ತಿರುವಾಗ ಎದುರುಗಡೆಯಿಂದ ಪಿಕ್ ಅಪ್ ವಾಹನದಲ್ಲಿ ಬಂದ ಹುದೂರು ಗ್ರಾಮದ ನಿವಾಸಿಗಳಾದ ಜಲೀಲ್ ಮತ್ತು ಅನೀಸ್ ಎಂಬುವವರು ಹಳೆಯ ವೈಷಮ್ಯದಿಂದ ಆಟೋರಿಕ್ಷಾವನ್ನು ಅಡ್ಡಗಟ್ಟಿ ನಿಲ್ಲಸಿ ಹೊರಗೆ ಎಳೆದು ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿ ನೋವುಪಡಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅತಿಕ್ರಮ ಪ್ರವೇಶಿಸಿ ವೃದ್ದ ದಂಪತಿಗಳಿಗೆ ಬೆದರಿಕೆ 

ದಿನಾಂಕ: 27-06-2020 ರಂದು ಸೋಮವಾರಪೇಟೆ ತಾಲ್ಲೂಕು ಕುಶಾಲನಗರ ಪಟ್ಟಣದ 3ನೇ ಬ್ಲಾಕ್ ಬಾಪೂಜಿ ಬಡಾವಣೆ ನಿವಾಸಿ ಶ್ರೀಮತಿ ಮುತ್ತಮ್ಮ ಎಂಬುವವರ ನ್ಯಾಯಾಲಯದಲ್ಲಿ ವ್ಯಾಜ್ಯವಿರುವ ಜಾಗಕ್ಕೆ ಅದೇ ಬಡಾವಣೆಯ ನಿವಾಸಿಗಳಾದ ರಾಧಾಕೃಷ್ಣ ಎಂಬುವವರು ಅತಿಕ್ರಮ ಪ್ರವೇಶ ಮಾಡಿ ಕಾಂಪೌಂಡ್ ಒಡೆದು ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.