Crime News

ಲಾಕ್ ಡೌನ್ ನಿಯಮ ಉಲ್ಲಂಘನೆ  ಪ್ರಕರಣ

ವಿರಾಜಪೇಟೆ ನಿವಾಸಿ ಶರ್ಪುದ್ದೀನ್ ಎಂಬುವವರು ಕಳೆದ 5 ದಿನಗಳ ಹಿಂದೆ ವಿದೇಶದಿಂದ ಪ್ರಯಾಣಿಸಿ ಪಟ್ಟಣದ ಮೀನುಪೇಟೆಯ ಮನೆಯಲ್ಲಿ ವಾಸಿದ್ದರು. ವಿದೇಶದಿಂದ ಬಂದಿದ್ದರೂ ಸಹಾ ಸ್ಥಳೀಯ ಆಡಳಿತದ ಯಾವುದೇ ಕಛೇರಿಗೆ ಮಾಹಿತಿ ನೀಡದೇ ವಾಸವಿದ್ದವರನ್ನು  ದಿನಾಂಕ: 28-06-2020 ರಂದು  ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್-19 ಸೋಂಕು ದೃಡಪಟ್ಟಿರುತ್ತದೆ. ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ತರರಿಗೆ ಹರಡುವ ಸಂಭವವಿದ್ದರೂ ಸಹಾ ನಿರ್ಲಕ್ಷತೆ ವಹಿಸಿದ್ದು ವಿದೇಶದಿಂದ ಜಿಲ್ಲೆಗೆ ಬಂದು ನಿಯಮ ಉಲ್ಲಂಘಿಸಿರುವ ಬಗ್ಗೆ ವಿರಾಜಪೇಟೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯವರು ನೀಡಿದ ಪುಕಾರಿನ ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ ಪ್ರಕರಣ

ದಿನಾಂಕ: 28-06-2020 ರಂದು ಸೋಮವಾರಪೇಟೆ ತಾಲ್ಲೂಕು ಶನಿವಾರಸಂತೆ ಹುಲುಸೆ ಗ್ರಾಮದ ಸೋಮಶೇಖರ್ ಎಂಬುವವರ ಮನೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ ಪ್ರಕರಣವನ್ನು ಶನಿವಾರಸಂತೆ ಠಾಣೆ ಪಿ.ಎಸ್.ಐ ದೇವರಾಜ್ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.