Crime News

ಚಿನ್ನಾಭರಣ ಪಡೆದು ವಂಚನೆ ಪ್ರಕರಣ

ವಿರಾಜಪೇಟೆ ತಾಲ್ಲೂಕು ಬಾಳುಗೋಡು ಗ್ರಾಮದ ನಿವಾಸಿ ಗುಡ್ಡಂಡ ಉತ್ತಪ್ಪ ಎಂಬುವವರು ವಿರಾಜಪೇಟೆ ಪಟ್ಟಣದ ನಿವಾಸಿ ಶಫೀಕ್ ಎಂಬುವವರೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದು ಆತನು ದಿನಾಂಕ: 23-08-2017 ರಂದು ಕುಟುಂಬದವರ ಮದುವೆ ಕಾರ್ಯಕ್ರಮದ ಸಲುವಾಗಿ ಎಂದು ಹೇಳಿ ನಂಬಿಸಿ 5,00,000 ರೂ ಮೌಲ್ಯದ ಚಿನ್ನಾಭರಣಗಳನ್ನು ಪಡೆದುಕೊಂಡು ಹೋಗಿರುತ್ತಾನೆ. ನಂತರ ಉತ್ತಪ್ಪ ರವರು ಮೃತಪಟ್ಟಿದ್ದು ಅವರ ಪತ್ನಿ ಶಫೀಕ್ ನಿಂದ ಚಿನ್ನಾಭರಣಗಳನ್ನು ಕೇಳಿದಾಗ ಸಬೂಬು ಹೇಳಿಕೊಂಡಿದ್ದನು. ದಿನಾಂಕ: 24-07-2019 ರೊಳಗೆ ಚಿನ್ನಾಭರಣ ವಾಪಾಸ್ಸು ಕೊಡುವುದಾಗಿ ಹೇಳಿ ನೋಟರಿ ವಕೀಲರ ಸಮಕ್ಷಮ ಮುಚ್ಚಳಿಕೆ ಬರೆದುಕೊಟ್ಟಿದ್ದನು. ನಂತರ ವಿಚಾರಿಸಿದಾಗ ಶಫೀಕ್ ನು ಚಿನ್ನಾಭರಣಗಳನ್ನು ಫೈನಾನ್ಸ್ ಹಾಗೂ ಗಿರವಿ ಮಳಿಗೆಯಲ್ಲಿ ಚಿನ್ನಾಭರಣ ಗಿರವಿ ಇಟ್ಟಿರುವುದು ತಿಳಿದುಬಂದಿರುತ್ತದೆ. ಸುಳ್ಳು ಹೇಳಿ ನಂಬಿಸಿ ಪಡೆದ ಚಿನ್ನಾಭರಣಗಳನ್ನು ಗಿರವಿ ಇಟ್ಟು ಇದುವರೆಗೂ ವಾಪಾಸ್ಸು ಬಿಡಿಸಿ ಕೊಡದೆ ನಂಬಿಕೆ ದ್ರೋಹ ಮಾಡಿರುವ ಬಗ್ಗೆ ದಿನಾಂಕ: 30-06-2020 ರಂದು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 30-06-2020 ರಂದು ಸೋಮವಾರಪೇಟೆ ತಾಲ್ಲೂಕು ಶಿರಂಗಾಲ ಗ್ರಾಮದ ನಿವಾಸಿ ಮನು ಎಂಬುವವರು ಅವರ ಜಮೀನಿನ ಕೆಲಸ ಮುಗಿಸಿ ವಾಪಾಸ್ಸು ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿ ವೆಂಕಟೇಶ್ ಎಂಬುವವರು ಏಕಾಏಕಿ ಬಂದು ದಾರಿ ತಡೆದು ಅವಾಚ್ಯ ಪದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 30-06-2020 ರಂದು ಸೋಮವಾರಪೇಟೆ ತಾಲ್ಲೂಕು ಕೊಡ್ಲಿಪೇಟೆ ಗ್ರಾಮದ ನಿವಾಸಿಗಳಾದ ಇದ್ರಿಸ್ ಪಾಷಾ ಮತ್ತು ಖುದ್ದೂಸ್ ಎಂಬುವವರ ವೈಯಕ್ತಿಕ ವಿಚಾರದಲ್ಲಿ ಪರಸ್ಪರ ಜಗಳ ಮಾಡಿಕೊಂಡು ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ಉಭಯ ಕಡೆಯವರು ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ:30-06-2020 ರಂದು ಸೋಮವಾರಪೇಟೆ ತಾಲ್ಲೂಕು ಐಗೂರು ಗ್ರಾಮದ ನಿವಾಸಿಗಳಾದ ಶಮಂತ್, ಪ್ರವೀಣ್, ನಿಕ್ಷೀತ್, ಪುನೀತ್, ಧರಣೇಶ್, ಮತ್ತು ಎಡವಾರೆ ಗ್ರಾಮದ ನಿವಾಸಿಗಳಾದ ರತೀಶ್ ರೈ, ಯತೀಶ್ ರೈ, ರಾಜ, ದರ್ಶನ್, ಸಂತೋಷ್, ದರ್ಶಿತ್, ಯೋಗೇಶ್, ಪುನೀತ್, ರಂಜಿತ್, ಬಿಪಿನ್ ಎಂಬುವವರು ಹಳ ವೈಷಮ್ಯದಿಂದ ಪರಸ್ಪರ ಜಗಳ ಮಾಡಿಕೊಂಡು ಕತ್ತಿ ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಪಡಿಸಿದ್ದು ಈ ಬಗ್ಗೆ ಉಭಯ ಕಡೆಯವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆಕಸ್ಮಿಕವಾರಿ ಕೆರೆಗೆ ಬಿದ್ದು ವ್ಯಕ್ತಿ ಸಾವು

ದಿನಾಂಕ: 30-06-2020 ರಂದು ಮಡಿಕೇರಿ ತಾಲ್ಲೂಕು ಕೊಳಕೇರಿ ಗ್ರಾಮದ ನಿವಾಸಿ ಪೂವಣ್ಣ ಎಂಬುವವರು ವಿರಾಜಪೇಟೆ ತಾಲ್ಲೂಕು ಹಾಲುಗುಂದ ಗ್ರಾಮದಲ್ಲಿರುವ ಅವರ ಕಾಫಿ ತೋಟಕ್ಕೆ ಹೋಗಿ ಕೆಲಸ ಮಾಡಿಕೊಂಡಿರುವಾಗ ತೋಟದಲ್ಲಿ ಇದ್ದ ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದು ಈ ಬಗ್ಗೆ ಮೃತರ ಸಹೋದರ ದಿನೇಶ್ ಕಾರ್ಯಪ್ಪ ಎಂಬುವವರು ನೀಡಿದ ದೂರಿನ ಮೇರೆ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.