Crime News

ಆನ್ ಲೈನ್ ವಂಚನೆ ಪ್ರಕರಣ

ದಿನಾಂಕ: 23-06-2020 ರಂದು ವಿರಾಜಪೇಟೆ ತಾಲ್ಲೂಕು ಪಾಲಿಬೆಟ್ಟ ಗ್ರಾಮದ ನಿವಾಸಿ ಜಯರಾಂ ಎಂಬುವವರಿಗೆ ಸುರೇಶ್ ಬಾಬು ಎಂಬುವವರು ಆಲ್ಟೋ ಕಾರನ್ನು 1,20,000 ರೂ ಬೆಲೆಗೆ ಮಾರಾಟ ಮಾಡುವುದಾಗಿ ಒಪ್ಪಿಕೊಂಡಿದ್ದು ನಂತರ ಹಂತ ಹಂತವಾಗಿ ಆತನು ಪೇಟಿಎಂ ಮೂಲಕ ಒಟ್ಟು 73,000 ಹಣ ಪಡೆದು ವಾಹನ ನೀಡದೇ ವಂಚನೆ ಮಾಡಿದ ಬಗ್ಗೆ ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಅಪರಾದ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಾರ್ವಜನಿಕರು ಆನ್ ಲೈನ್ ಮೂಲಕ ಉಪಯೋಗಿಸಿದ ವಾಹನ ಖರೀದಿಸಲು ಹೋಗಿ ವಂಚನೆಗೆ ಒಳಗಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಸಾರ್ವಜನಿಕರು ಆನ್ ಲೈನ್ ಮೂಲಕ ವಾಹನ ಅಥವಾ ಯಾವುದೇ ವಸ್ತಗಳನ್ನು ಖರೀದಿಸುವಾಗ ಮಾರಾಟ ಮಾಡುವ ವ್ಯಕ್ತಿಗಳ ಬಗ್ಗೆ ಸರಿಯಾಗಿ ಪರಿಶೀಲಿಸಿ, ವಸ್ತು ಅಥವಾ ವಾಹನಗಳನ್ನು, ದಾಖಲಾತಿಗಳನ್ನು ನೇರವಾಗಿ ನೋಡಿ ಪರಿಶೀಲಿಸಿ ನಂತರ ಹಣ ಪಾವತಿಸಿ ಖರೀದಿಸಲು ಸೂಚಿಸಲಾಗಿದೆ.

ಅಕ್ರಮ ಜೂಜಾಟ ಪ್ರಕರಣ

ದಿನಾಂಕ: 02-07-2020 ರಂದು ಸೋಮವಾರಪೇಟೆ ತಾಲ್ಲೂಕು ಶನಿವಾರಸಂತೆ ಕಿತ್ತೂರು ಗ್ರಾಮದ ಸೋಮಶೇಖರ್ ಎಂಬುವವರ ಮನೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ ಪ್ರಕರಣವನ್ನು ಶನಿವಾರಸಂತೆ ಠಾಣೆ ಪಿ.ಎಸ್.ಐ ದೇವರಾಜ್ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.