Crime News

ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿ ಸಾವು

ದಿನಾಂಕ: 05-07-2020 ರಂದು ವಿರಾಜಪೇಟೆ ತಾಲ್ಲೂಕು ಕೊಳ್ತೋಡು ಬೈಗೋಡು ಗ್ರಾಮದ ನಿವಾಸಿ ಮಾದು ಎಂಬುವವರು ಅವರ ಪಕ್ಕದ ಮನೆಯ ವಾಸಿ ಮಣಿ ಎಂಬುವವರೊಂದಿಗೆ ಅಂಗಡಿಗೆ ಹೋಗಿ ವಾಪಾಸ್ಸು ಮನೆಗೆ ಹೋಗುತ್ತಿರುವಾಗ ತೋಟದ ಬಳಿ ರಸ್ತೆ ಮಧ್ಯದಲ್ಲಿ  ಕಾಡಾನೆಯೊಂದು ನಿಂತಿದ್ದು ಅದನ್ನು ಕಂಡು ಹಿಂದಕ್ಕೆ ಓಡಲು ಪ್ರಯತ್ನಿಸಿದಾಗ ಕಾಡಾನೆಯು ಏಕಾಏಕಿ ಮಾದುರವರ ಮೇಲೆ ದಾಳಿ ಮಾಡಿದ್ದರಿಂದ ತೀವ್ರ ಗಾಯಗೊಂಡ ಮಾದುವ ರವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಚಿಕಿತ್ಸೆ ಫಲಕಾರಿಯಾಗದೇ ಮಾದು ರವರು ಮೃತಪಟ್ಟಿದ್ದು ಈ ಬಗ್ಗೆ ಮೃತರ ಪತ್ನಿ ನೀಡಿದ ಪುಕಾರಿನ ಮೇರೆ ವಿರಾಜಪೇಟ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.