Crime News

ಹಲ್ಲೆ ಪ್ರಕರಣ  

ದಿನಾಂಕ: 06-07-2020 ರಂದು ವಿರಾಜಪೇಟೆ ತಾಲ್ಲೂಕು ತಿತಿಮತಿ ಗ್ರಾಮದ ನಿವಾಸಿ ಕೆ. ಸ್ವಾಮಿ ಎಂಬುವವರಿಗೆ ಅದೆ ಗ್ರಾಮದ ನಿವಾಸಿಗಳಾದ ನವೀನ್ , ಮಂಟಯ್ಯ, ಅರುಣ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.