Crime News
ಹಲ್ಲೆ ಪ್ರಕರಣ
ದಿನಾಂಕ: 07-07-2020 ರಂದು ಮಡಿಕೇರಿ ತಾಲ್ಲೂಕು ಹಾಕತ್ತೂರು ಗ್ರಾಮದ ನಿವಾಸಿ ಶ್ರೀಮತಿ ಆಯಿಷಾ ಎಂಬುವವರ ಮನೆಯ ಮೇಲ್ಭಾಗದಲ್ಲಿ ಮೂರ್ನಾಡು ಗ್ರಾಮದ ನಿವಾಸಿ ಹನೀಫ್ ಎಂಬುವವರ ಜಾಗವಿದ್ದು, ಅಲ್ಲಿಂದ ಮಳೆಯ ನೀರು ಮನೆಯ ಮೇಲೆ ಬೀಳುತ್ತಿರುವ ಬಗ್ಗೆ ವಿಚಾರಿಸಲು ಹೋದಾಗ ಜಗಳ ಮಾಡಿ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಅಕ್ರಮ ಮದ್ಯ ಮಾರಾಟ ಪ್ರಕರಣ
ದಿನಾಂಕ: 07-07-2020 ರಂದು ಮಡಿಕೇರಿ ತಾಲ್ಲೂಕು ಕೈಕಾಡು ಗ್ರಾಮದ ನಿವಾಸಿ ಬೊಳ್ಳಂಡ ನಾಣಯ್ಯ ಎಂಬುವವರು ಅವರ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿ ಮದ್ಯ ಸೇವನೆ ಮಾಡಲು ಅವಕಾಶ ಮಾಡುತ್ತಿದ್ದ ಪ್ರಕರಣವನ್ನು ನಾಪೋಕ್ಲು ಠಾಣೆ ಪಿಎಸ್ಐ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.