Crime News

ಕಳವು ಪ್ರಕರಣ

ಪೊನ್ನಂಪೇಟೆ ಬಳಿಯ ಕಾನೂರು ನಿವಾಸಿ ಸಿ.ಟಿ.ನಾಣಯ್ಯ ಎಂಬವರಿಗೆ ಸೇರಿದ ಕಾನೂರು ಚೈನ್‌ಗೇಟ್ ಬಳಿಯ ತೋಟದ ಮನೆಯ ಬಾಗಿಲಿನ ಚೌಕಟ್ಟು ಮತ್ತು ಕಿಟಕಿಗಳ ಚೌಕಟ್ಟುಗಳನ್ನು ದಿನಾಂಕ 08/07/2020 ರಿಂದ 09/07/2020ರ ನಡುವೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.