Crime News

ಹಲ್ಲೆ ಪ್ರಕರಣ

ದಿನಾಂಕ: 12-07-2020 ರಂದು ವಿರಾಜಪೇಟೆ ತಾಲ್ಲೂಕು ಅರವತ್ತೊಕ್ಲು ಗ್ರಾಮದ ಜೋಡುಬೀಟಿ ನೆಹರು ಕಾಲೋನಿ ನಿವಾಸಿ ರೋಹಿತ್ ಎಂಬುವವರು ಅವರ ಸೋದರ ಪ್ರದೀಪ್  ಎಂಭುವವರೊಂದಿಗೆ ಮಾತನಾಡಿಕೊಂಡಿರುವಾಗ ಅನಿಲ್ ಮತ್ತು ಸುನಿಲ್ ಎಂಬುವವರು ವಿನಾ ಕಾರಣ ಜಗಳ ಮಾಡಿ ಕತ್ತಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಯುವಕ ಸಾವು

ದಿನಾಂಕ: 12-07-2020 ರಂದು ವಿರಾಜಪೇಟೆ ತಾಲ್ಲೂಕು ವೆಸ್ಟ್ ನೆಮ್ಮೆಲೆ ಗ್ರಾಮದ ನಿವಾಸಿ ಅಚಲ್ ಉತ್ತಪ್ಪ ಎಂಬುವವರು ಸಹೋದರನೊಂದಿಗೆ ಅವರ ತೋಟದ ಕೆರೆಯಲ್ಲಿ ಈಜುತ್ತಿರುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಈ ಬಗ್ಗೆ ಮೃತರ ತಂದ ನೀಡಿದ ದೂರಿನ ಮೇರೆ ಶ್ರೀಮಂಗಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನಿಯಮ ಉಲ್ಲಂಘಿಸಿ ಹೋಂ ಸ್ಟೇ ವಾಸ್ತವ್ಯ, ಪ್ರಕರಣ ದಾಖಲು.

ಮಡಿಕೇರಿ ತಾಲ್ಲೂಕು ಕತ್ತಲಡ ಕಾಡು ಗ್ರಾಮದ ಹೋಂ ಸ್ಟೇ ಯೊಂದರಲ್ಲಿ ಕೋವಿಡ್-19 ಸಂಬಂದ ಕೊಡಗು ಜಿಲ್ಲೆಯಲ್ಲಿ ಹೋಂಸ್ಟೇ, ವಸತಿ ಗೃಹಗಳಲ್ಲಿ ಪ್ರವಾಸಿಗರ ವಾಸ್ತವ್ಯ ನಿಷೇಧಿಸಿದ್ದರೂ ಸಹಾ ಮೈಸೂರು  ನಿವಾಸಿಗಳಾದ ದಿನೇಶ್, ಅನಿಲ್ ಮತ್ತು ಅವಿನಾಶ್ ಎಂಬುವವರು ನಿಯಮ  ಉಲ್ಲಂಘಿಸಿ ವಾಸ್ತವ್ಯ ಮಾಡಿರುತ್ತಾರೆ. ಸಾಂಕ್ರಾಮಿಕ ರೋಗವಾಗಿರುವ ಕೋವಿಡ್-19 ಹರಡುವ ಸಂಭವವಿದ್ದರೂ ಸಹಾ ನಿರ್ಲಕ್ಷತೆಯಿಂದ ವಾಸ್ತವ್ಯ ಮಾಡಿರುವ ಬಗ್ಗೆ ನೀಡಿದ ಪ್ರವಾಸೋದ್ಯಮ ಆಧಿಕಾರಿಗಳು ನೀಡಿದ ಪುಕಾರಿನ ಮೇರೆ ಹೋಂ ಸ್ಟೇ ಮಾಲೀಕರು ಹಾಗೂ ನಿಯಮ ಉಲ್ಲಂಘಿಸಿ ವಾಸ್ತವ್ಯವಿದ್ದರ ವಿರುದ್ದ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.