Crime News

ಗುಂಡು ಹಾರಿಸಿಕೊಂಡು ವ್ಯಕ್ತಿಯ ಆತ್ಮಹತ್ಯೆ

ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ಕುಕ್ಲೂರು ಗ್ರಾಮದಲ್ಲಿ ವರದಿಯಾಗಿದೆ. ಕುಕ್ಲೂರು ಗ್ರಾಮದ ನಿವಾಸಿಯಾದ ಕರುಂಬಯ್ಯನವರು ಶ್ವಾಸಕೋಶದ ಖಾಯಿಲೆಯಿಂದ ಬಳಲುತ್ತಿದ್ದು ಇದೇ ವಿಚಾರದಲ್ಲಿ ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 16-06-2018 ರಂದು ಮನೆಯಲ್ಲಿ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ತಾಯಿ ಲೀನಾರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

ದಿನಾಂಕ 15-06-2018 ರಂದು ಕುಶಾಲನಗರ ಮುಳ್ಳುಸೋಗೆಯ ನಿವಾಸಿಯಾದ ದರ್ಶನ್ ಎಂಬುವವರು ಹೆಬ್ಬಾಲೆಯಿಂದ ಕೂಡಿಗೆಯ ಕಡೆಗೆ ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ ಎದುರುಗಡೆಯಿಂದ ಟಾಟಾ ಮ್ಯಾಕ್ಷಿಮಾ ವಾಹನವನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿ ಪಡಿಸಿದ ಪರಿಣಾಮ ದರ್ಶನ್ ರವರಿಗೆ ಗಾಯವಾಗಿದ್ದು ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

ಮಡಿಕೇರಿ ನಗರದಲ್ಲಿರುವ ಕೊಡಗು ಮೀಟಿಯಾ ಸರ್ವಿಸಸ್ ಎಂಬ ಕೇಬಲ್ ನೆಟ್ ವರ್ಕ್ ಸಂಸ್ಥೆಯಲ್ಲಿ ಸೀನಿಯರ್ ಟೆಕ್ನಿಕಲ್ ಎಕ್ಷಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿರುವ ಸುನಿಲ್ ರಾಜ್ ಎಂಬುವವರು ಮಾಲಿಕರಿಗೆ ಗೊತ್ತಾಗದಂತೆ ಕೇಬಲ್ ಗೆ ಸಂಬಂದಿಸಿದ ವಸ್ತುಗಳನ್ನು ಕಳವು ಮಾಡಿ ಬೇರೆ ಕೇಬಲ್ ನೆಟ್ ವರ್ಕ್ ನವರಿಗೆ ಮಾರಾಟ ಮಾಡಿ ಸುಮಾರು 7 ಲಕ್ಷ ರೂಗಳಷ್ಟು ಮೋಸ ಮಾಡಿರುವುದಾಗಿ ಮಾಲಿಕರಾದ ಪೂವಯ್ಯನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

ದಿನಾಂಕ 16-06-2018 ರಂದು ಕುಶಾಲನಗರದ ಕೂಡುಮಂಗಳೂರು ಗ್ರಾಮದ ನಿವಾಸಿಯಾದ ಸೋಮಶೇಖರ್ ಎಂಬುವವರು ಮೋಟಾರು ಸೈಕಲನ್ನು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಕೂಡಿಗೆ ಕಡೆಯಿಂದ ಮಾರುತಿ ಕಾರನ್ನು ಚಾಲಕ ದಿಲೀಪ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಸೋಮಶೇಖರ್ ರವರಿಗೆ ಗಾಯಗಳಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.