Crime News

ವ್ಯಕ್ತಿ ಆತ್ಮಹತ್ಯೆ

ದಿನಾಂಕ: 12-07-2020 ರಂದು ಮಡಿಕೇರಿ ತಾಲ್ಲೂಕು ಚೇರಂಗಾಲ ಗ್ರಾಮದ ನಿವಾಸಿ ಯತೀಶ್‍ ಎಂಬುವವರು ಯಾವುದೋ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷ ಸೇವಿಸಿ ಅಸ್ವಸ್ಥಗೊಂಡವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 19-07-2020 ರಂದು ಮೃತಪಟ್ಟಿದ್ದು ಈ ಬಗ್ಗೆ ಜಯಪ್ರಕಾಶ್‍ ಎಂಬುವವರು ನೀಡಿದ ದೂರಿನ ಮೇರೆ ಭಾಗಮಂಡಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ವ್ಯಕ್ತಿಯ ಶವ ಪತ್ತೆ

ದಿನಾಂಕ: 19-07-2020 ರಂದು ವಿರಾಜಪೇಟೆ ತಾಲ್ಲೂಕು ಕಿರುಮಕ್ಕಿ ಆರ್ಜಿ‍ ಗ್ರಾಮದ ನಿವಾಸಿ ಪುಂಡರಿಕಾಕ್ಷ ಎಂಬುವವರು ಅವರ ಗದ್ದೆಗೆ ಹೋಗಿದ್ದಾಗ ಕೆರೆಯ ಬಳಿ ಯಾವುದೋ ಪ್ರಾಣಿ ಸತ್ತ ವಾಸನೆ ಬರುತ್ತಿದ್ದುದನ್ನು ನೋಡಲು ಹೋದಾಗ ಕೆರೆಯ ನೀರಿನಲ್ಲಿ ಒಬ್ಬ ವ್ಯಕ್ತಿಯ ಶವ ತೇಲುತ್ತಿದ್ದು  ಮೃತ ವ್ಯಕ್ತಿಯ ವಿಳಾಸ ತಿಳಿಯದೇ ಇದ್ದು ಅಂದಾಜು 30 ರಿಂದ 40 ವರ್ಷ ಪ್ರಾಯದ ವ್ಯಕ್ತಿಯಾಗಿದ್ದು ಮೈಮೇಲೆ ಬಿಳಿ ಬಣ‍್ಣದ ಶರ್ಟ್ ಮತ್ತು ಕಾಫಿ ಬಣ್ಣದ ಪ್ಯಾಂಟ್‍ ಧರಿಸಿದ್ದು ಈ ಬಗ್ಗೆ ವಿರಾಜಪೇಟೆ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.