News

ಕೋವಿಡ್-19 ಗೆದ್ದು ಕರ್ತವ್ಯಕ್ಕೆ ಹಾಜರಾದ ಅಧಿಕಾರಿಗಳು

ಕೊಡಗು ಜಿಲ್ಲಾ ಪೊಲೀಸ್ ಘಟಕದ ಎ.ಹೆಚ್.ಸಿ ಅಶೋಕ್, ಡಿಎಆರ್ ಮತ್ತು ಪ್ರೊ.ಪಿ.ಎಸ್.ಐ ಜಗದೀಶ್ ಧೂಳಶೆಟ್ಟಿರವರಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸದರಿಯವರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಪೂರ್ಣ ಗುಣಮುಖರಾಗಿ ಕರ್ತವ್ಯಕ್ಕೆ ಮರಳಿದ್ದು, ಅವರುಗಳಿಗೆ ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಪೊಲೀಸ್ ಕಛೇರಿ ಆವರಣದಲ್ಲಿ ಸ್ವಾಗತ ಕೋರಲಾಯಿತು. ಈ ಸಂದರ್ಭದಲ್ಲಿ ಮಡಿಕೇರಿ ಉಪ ವಿಭಾಗದ ಡಿ.ವೈ.ಎಸ್.ಪಿ ಬಿ.ಪಿ.ದಿನೇಶ್ ಕುಮಾರ್, ಡಿಎಆರ್ ಪೊಲೀಸ್ ನಿರೀಕ್ಷಕರಾದ ಎಸ್. ರಾಚಯ್ಯ ಹಾಗು ಇತರೆ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದು ಸ್ವಾಗತಿಸಿದರು.


ಹಳೆ ದ್ವೇ಼ಷದಿಂದ ವ್ಯಕ್ತಿ ಮೇಲೆ ಹಲ್ಲೆ

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಹಳೆಗೋಟೆ ಗ್ರಾಮದ ನಿವಾಸಿ ಹೆಚ್.ಟಿ. ಜಗನ್ನಾಥ್ ಎಂಬವರು ದಿನಾಂಕ 24-7-2020 ರಂದು ಹೆಬ್ಬಾಲೆ ಗ್ರಾಮದ ಅಂಗಡಿಯೊಂದರ ಮುಂದೆ ನಿಂತುಕೊಂಡಿರುವಾಗ ಅದೇ ಗ್ರಾಮದ ಪುಟ್ಟೇಗೌದ ಹಾಗು ಅವರ ಅಣ್ಣನ ಮಗ ಅಲ್ಲಿಗೆ ಬಂದು ಹಳೇ ದ್ವೇಷವನ್ನಿಟ್ಟುಕೊಂಡು ಜಗಳ ಮಾಡಿ ದೊಣ್ಣೆಯಿಂದ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ದಾರಿತಡೆದು ಹಲ್ಲೆ:

ಸೋಮವಾರಪೇಟೆ ತಾಲೂಕು ಚಿಕ್ಕಅಳುವಾರ ಗ್ರಾಮದ ನಿವಾಸಿ ಟಿ.ಜಿ. ಸಂಜೀವಯ್ಯ ಎಂಬವರು ದಿನಾಂಕ 24-7-2020 ರಂದು ಚಿಕ್ಕಅಳುವಾರ ಗ್ರಾಮದ ರಾಜ ಎಂಬವರ ಅಂಗಡಿಗೆ ಹೋಗುತ್ತಿದ್ದಾಗ ಶ್ರೀನಿವಾಸ ಎಂಬವರು ಅವರ ದಾರಿ ತಡೆದು ತನ್ನ ಪತ್ನಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ ವಿಷಯದ ಬಗ್ಗೆ ಜಗಳ ಮಾಡಿ ಹಲ್ಲೆ ಮಾಡಿದ್ದು ಅಲ್ಲದೆ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಹೆಬ್ಬಾಲೆ ಗ್ರಾಮದ ನಿವಾಸಿ ಹೆಚ್.ಎನ್. ಪುಟ್ಟೇಗೌಡ ಹಾಗು ಅವರ  ಅಣ್ಣನ ಮಗನಾದ  ಸೂರ್ಯ ಎಂಬವರು   ಗ್ರಾಮ ಪಂಚಾಯಿತಿ ಕಚೇರಿ ಕಡೆಗೆ ಹೋಗುತ್ತಿರುವಾಗ್ಗೆ, ಹೆಬ್ಬಾಲೆ ಗ್ರಾಮದ ಸರ್ಕಲ್ ನಲ್ಲಿರುವ ಸತೀಶ್ ರವರ ಅಂಗಡಿಯ  ಮುಂದೆ ಜಗನ್ನಾಥ್ ಎಂಬವರು ಹೆಚ್.ಎನ್.ಪುಟ್ಟೇಗೌಡರವನ್ನು ದಾರಿಯಲ್ಲಿ  ತಡೆದು  ಹಳೇದ್ವೇಷದ ಹಿನ್ನೆಲೆಯಲ್ಲಿ ಜಗಳ ಮಾಡಿ ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆಯ ವಿಚಾರದಲ್ಲಿ ಜಗಳ

ಸೋಮವಾರಪೇಟೆ ತಾಲೋಕು ದೊಡ್ಡತೋಳೂರು ಗ್ರಾಮದ ನಿವಾಸಿ ಚಂಗಪ್ಪ ಎಂಬವರು ದಿನಾಂಕ 24-7-2020 ರಂದು ತಮ್ಮ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ  ಪುನಿತ್ ಮತ್ತು ಸಾಕ್ಷಿತ್ ರವರು   ಚಂಗಪ್ಪ ರವರನ್ನು ಅಡ್ಡಗಟ್ಟಿ  ರಸ್ತೆಯ ಗಲಾಟೆ ವಿಚಾರದಲ್ಲಿ  ಜಗಳ ಮಾಡಿ  ದೊಣ್ಣೆಯಿಂದ  ತಲೆಯ ಬಾಗಕ್ಕೆ ಹಲ್ಲೆ ನಡೆಸಿ  ಗಾಯಪಡಿಸಿದ್ದಲ್ಲದೇ, ಸಾಕ್ಷಿತ್ ರವರು  ಕೈಯಿಂದ ಹೊಡೆದಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನ್ ಲೈನ್ ಮೂಲಕ ವ್ಯಕ್ತಿಗೆ ವಂಚನೆ:

ಮಡಿಕೇರಿ ತಾಲೋಕು ಚೇರಂಬಾಣೆ ಸಮೀಪದ ಬೇಂಗೂರು ಗ್ರಾಮದ ಬಿ.ಸಿ. ಯೋಗೇಂದ್ರ ಎಂಬವರು  ಓಎಲ್‍ಎಕ್ಸ್ ನಲ್ಲಿ ದಿನಾಂಕ      13-7-2020 ರಂದು  ಅವರ ಚಿಕ್ಕಪ್ಪನವರಿಗೆ ಗೂಗಲ್ ಪೇ ಮೂಲಕ ರೂ. 31000/- ನಗದು ಹಣವನ್ನು  ವರ್ಗಾವಣೆ ಮಾಡಿದ್ದು, ಅವರ ಖಾತೆಗೆ ವರ್ಗಾವಣೆ ಆಗದ ಕಾರಣ ಗೂಗಲ್ ಪೇ ಕಸ್ಟಮರ್ ಕೇರ್ ನಂಬರ್ 7001661145 ನ್ನು ಸಂಪರ್ಕಿಸಿದಾಗ “ನಿಮ್ಮ ಹಣ ಪೆಂಡಿಂಗ್ ನಲ್ಲಿದೆ, ಅದನ್ನು ಹಿಂತಿರುಗಿಸಲು ಗೂಗಲ್ ಪೇ ಖಾತೆಯಲ್ಲಿ ಹಣ ಸರಿಯಾಗಿ ವರ್ಗಾವಣೆ ಆಗುತ್ತಿದೆಯೇ ಎಂಬುದನ್ನು ಚೆಕ್ ಮಾಡಬೇಕು ನಾವು ಹೇಳುವ ನಂಬರಿಗೆ ಗೂಗಲ್ ಪೇ ಮುಖಾಂತರ ವರ್ಗಾವಣೆ ಮಾಡಿ” ಎಂದು ತಿಳಿಸಿದ ಮೇರೆಗೆ ಅದನ್ನು ಲಲನ್ ಕುಮಾರ್ ಎಂಬುವವರ ಖಾತೆ ಸಂಖ್ಯೆ 7699393978 ಗೆ ರೂ 9999/- ಹಾಗೂ 9090/- ಮತ್ತು ಜಿತೆಂದ್ರರವರ ಖಾತೆ ಸಂಖ್ಯೆ 7318824789 ನಂಬರಿಗೆ ರೂ 4900/-, 4908/- ಮತ್ತು 4908/- ಹಣವನ್ನು ಕಳುಹಿಸಿದ್ದು, ಸದರಿ ಹಣ ಮತ್ತೆ ಬಿ.ಸಿ. ಯೋಗೇಂದ್ರರವರಿಗೆ ಮರುಪಾವತಿ ಮಾಡದೇ ಟ್ಟು ರೂ 33805/- ಗಳನ್ನು ವಂಚಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕೊಡಗು ಜಿಲ್ಲಾ ಸಿಇಎನ್ ಪಿಎಸ್ ನಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.