Crime News

ಲಾಕ್‍ ಡೌನ್‍ ನಿಯಮ ಉಲ್ಲಂಘನೆ ಪ್ರಕರಣ

ದಿನಾಂಕ: 26-07-2020 ರಂದು ಮಡಿಕೇರಿ ನಗರದ  ರೇಸ್‍ಕೋರ್ಸ್‍ ರಸ್ತೆಯಲ್ಲಿರುವ ಹೊಟೇಲ್‍ ರಾಜ್‍ ರಾಗ್ಗಿಸ್‍ ಹೊಟೇಲ್‍ ನಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿ ಹೊರ ಜಿಲ್ಲೆಯ ಪ್ರವಾಸಿಗರಿಗೆ ಕೊಠಡಿಗಳನ್ನು ನೀಡಿ ತಂಗಲು ಅವಕಾಶ ಮಾಡಿರುತ್ತಾರೆ. ಸಾಂಕ್ರಾಮಿಕ ರೋಗ ಕೋವಿಡ್‍ 19 ಹರಡುವ ಸಂಭವವಿದ್ದರೂ ಸಹಾ ಹಾಗೂ ಕೋವಿಡ್-19 ಸಂಬಂದ ರಾಜ್ಯ ಸರ್ಕಾರದ ಮಾರ್ಗಸೂಚಿಯನುಸಾರ ಜಿಲ್ಲಾಡಳಿತವು ಹೊರ ಜಿಲ್ಲೆಯ ಪ್ರವಾಸಿಗರು ಜಿಲ್ಲೆಯಲ್ಲಿ ತಂಗುವುದನ್ನು ನಿಷೇದಿಸಿದ್ದರೂ ಸಹಾ ನಿಯಮ ಉಲ್ಲಂಘಿಸಿರುವ ಬಗ್ಗೆ ಮಡಿಕೇರಿ ನಗರ ಸಭೆ ಅಭಿಯಂತರರು ನೀಡಿದ ಪುಕಾರಿನ ಮೇರೆ ಹೊಟೇಲ್‍ ಮಾಲೀಕ ರಾಮರಾಜ್‍ ಮತ್ತು ಹೊಟೇಲ್‍ ಕೆಲಸಗಾರ ಅನ್ಸರ್ ಎಂಬುವವರ ವಿರುದ್ದ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ

ದಿನಾಂಕ: 26-07-2020 ರಂದು ವಿರಾಜಪೇಟೆ ತಾಲ್ಲೂಕು ಅರವತ್ತೊಕ್ಲು ಗ್ರಾಮದ ಕಾರೆಕಾಡು ಪೈಸಾರಿ ನಿವಾಸಿ ಪ್ರಭಾಕರ್‍ ಎಂಬುವವರಿಗೆ ಅದೇ ಗ್ರಾಮದ ನಿವಾಸಿ ರಘು ಎಂಬುವವರು ಕ್ಷುಲ್ಲಕ ಕಾರಣಕ್ಕೆ ದೊಣ್ಣೆಯಿಂದ ತಲೆಗೆ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.