Crime News

ಅಕ್ರಮ ಪ್ರವೇಶ:

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣ ಸರಹದ್ದಿನ ಕೂಡ್ಲೂರು ಗ್ರಾಮದ ನಿವಾಸಿ ಕೆ.ಕೆ. ಮಂಜುನಾಥ್ ಎಂಬವರ ನಿವೇಶನದ ಜಾಗಕ್ಕೆ ದಿನಾಂಕ 17-6-2018 ರಂದು ಆರೋಪಿಗಳಾದ ಹಂಚಪ್ಪ, ಸಂತೋಷ, ನಾಗಮ್ಮ, ಧರ್ಮ ಹಾಗು ಮರೀಗೌಡ ಎಂಬವರುಗಳು ಅಕ್ರಮ ಪ್ರವೇಶ ಮಾಡಿ ಹೋಳ ಕೃಷಿಯನ್ನು ನಾಶಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾಣೆಯಾದ ವ್ಯಕ್ತಿ ಮೃತ ದೇಹ ಪತ್ತೆ:

ಕುಶಾಲನಗರ ಜನತಾ ಕಾಲೋನಿಯಲ್ಲಿ ವಾಸವಾಗಿದ್ದುಕೊಂಡು ಆಟೋ ರಿಕ್ಷಾವನ್ನು ಇಟ್ಟು ಜೀವನ ಸಾಗಿಸುತ್ತಿದ್ದ ಹೆಚ್.ಸಿ. ರಾಮು ಎಂಬ ವ್ಯಕ್ತಿ 10-6-2018 ರಿಂದ ಕಾಣೆಯಾಗಿದ್ದು ಈ ಸಂಬಂಧ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಿನಾಂಕ 17-6-2018 ರಂದು ಕೂಡ್ಲೂರು ಗ್ರಾಮದ ಕಾವೇರಿ ಹೊಳೆಯಲ್ಲಿ ಸದರಿಯವರ ಮೃತದೇಹ ಪತ್ತೆಯಾಗಿದ್ದು, ಈ ಸಂಬಂಧ ಕುಶಾಲನಗರ ಗ್ರಾಮಾಂಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ:

ಗೋಣಿಕೊಪ್ಪ ಠಾಣಾ ಸರಹದ್ದಿನ ಭಾಸ್ಕರ್ ಟಯರ್ ಶಾಫ್ ಮುಂಭಾಗ ದಿನಾಂಕ 17-6-2018 ರಂದು ಒಬ್ಬ ಅಪರಿಚಿತ ಗಂಡಸಿನ ಅಂದಾಜು 55-60 ವರ್ಷ ಪ್ರಾಯದ ಮೃತದೇಹ ಪತ್ತೆಯಾಗಿದ್ದು, ವಿ ಭಾಸ್ಕರ್, ಅರುವತ್ತೋಕ್ಲು ಗ್ರಾಮ ಇವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜಾಗಕ್ಕೆ ಅಕ್ರಮ ಪ್ರವೇಶ, ಕಾಫಿ ಕಳ್ಳತನ:

ಸಿದ್ದಾಪುರ ಠಾಣಾ ಸರಹದ್ದಿನ ಹೊಸೂರು ಬೆಟ್ಟಗೇರಿ ಗ್ರಾಮದಲ್ಲಿರುವ ದುಬಾರಿ ಎಸ್ಟೇಟ್ ಇದ್ದು ಸದರಿ ತೋಟಕ್ಕೆ 2016-17 ಮತ್ತು 2017-18 ಸಾಲಿನಲ್ಲಿ ಚೆಟ್ಟಿನಾಡ್ ಪ್ಲಾಂಟೇಶನ್ ಪ್ರೈ.ಲಿ. ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಅಕ್ರಮ ಪ್ರವೇಶ ಮಾಡಿ ಕಾಫಿಯನ್ನು ಕಳ್ಳತನ ಮಾಡಿ ಮಾರಾಟ ಮಾಡಿರುತ್ತಾರೆಂದು ನೀಡಿದ ದೂರಿನಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.