Crime News

ವ್ಯಕ್ತಿ ಕಾಣೆ

ದಿನಾಂಕ: 28-07-2020 ರಂದು ಕೊಡಗು ಜಿಲ್ಲೆ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋದಕ ಆಸ್ಪತ್ರೆಗೆ ಪರೀಕ್ಷೆಗೆ ಕರೆತರಲಾಗಿದ್ದ ವಿರಾಜಪೇಟೆ ತಾಲ್ಲೂಕು ಶ್ರೀಮಂಗಲ ಗ್ರಾಮದ ನಿವಾಸಿ ಪೆಮ್ಮಯ್ಯ ಎಂಬುವವರು ಆಸ್ಪತ್ರೆಯಿಂದ ಕಾಣೆಯಾಗಿದ್ದು ಈ ಬಗ್ಗೆ ರಾಜ್‍ ಕುಮಾರ್‍ ಎಂಬುವವರು ನೀಡಿದ ದೂರಿನ ಮೇರೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ    

ದಿನಾಂಕ: 30-.07-2020 ರಂದು ಮಡಿಕೇರಿ ತಾಲ್ಲೂಕು ಕುಂಬಳದಾಳು ಗ್ರಾಮದ ನಿವಾಸಿ ಸಿದ್ದು ಎಂಬುವವರು ಮನೆಯಲ್ಲಿರುವಾಗ ಅವರ ಸಹೋದರ ರಂಜು  ಎಂಬುವವರು ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸ್ಕೂಟರ್‍ ಡಿಕ್ಕಿ, ಪಾದಚಾರಿಗೆ ಗಾಯ

ದಿನಾಂಕ: 30-07-2020 ರಂದು ಮಡಿಕೇರಿ ತಾಲ್ಲೂಕು ಮೂರ್ನಾಡು ಗ್ರಾಮದ ಬಳಿ ಮಡಿಕೇರಿ –ವಿರಾಜಪೇಟೆ ಮುಖ್ಯ ರಸ್ತೆಯಲ್ಲಿ ಕೆಎ-12-ಯು-1850 ರ ಸ್ಕೂಟರನ್ನು ಅದರ ಸವಾರ ಮುತ್ತಣ್ಣ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗಿ ಮೋಹನ  ಎಂಬುವವರಿಗೆ ಡಿಕ್ಕಿಪಡಿಸಿದ ಪರಿಣಾಮ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅನ್‍ಲೈನ್‍ ವಂಚನೆ ಪ್ರಕರಣ

ದಿನಾಂಕ: 29-07-2020 ರಂದು ಸೋಮವಾರಪೇಟೆ ತಾಲ್ಲೂಕು ಅಂದಗೋವೆ ಗ್ರಾಮದ ನಿವಾಸಿ ಜಯಚಂದ್ರನ್‍ ಎಂಬುವವರು ಕ್ಲಬ್‍ ಫ್ಯಾಕ್ಟರಿ ಆ್ಯಪ್‍ ಮುಖಾಂತರ ೊಂದು ಅಳತೆ ಮಾಪನ ಖರೀದಿಸಲು 510 ರೂ ಹಣ ಸಂದಾಯ ಮಾಡಿದ್ದರು. ಕೆಲವು ದಿನ ಕಳೆದರೂ ಖರೀದಿಸಿದ ವಸ್ತು ಬಾರದೇ ಇದ್ದುದರಿಂದ ಕ್ಲಬ್‍ ಫ್ಯಾಕ್ಟರಿಯವರನ್ನು ಸಂಪರ್ಕಿಸಲು ಗೂಗಲ್‍ ಕಸ್ಟಮರ್‍ ಕೇರ್‍ ನಂಬರ್‍ ಹುಡುಕಿದಾಗ ದೊರೆತ 8597843080 ಸಂಖ್ಯೆಗೆ  ಕರೆ ಮಾಡಿ ಮಾತನಾಡಿದಾಗ ಅಪರಿಚಿತ ವ್ಯಕ್ತಿ ತಿಳಿಸಿದಂತೆ ಎನಿಡೆಸ್ಕ್‍ ಎಂಬ ಅಪ್ಲಿಕೇಷನ್‍ ಮುಖಾಂತರ ಎಟಿಎಂ ಕಾರ್ಡ್‍ ಫೋಟೊ ಕಳುಹಿಸಿದಾಗ 24,999 ರೂ ಹಣ ಬ್ಯಾಂಕ್‍ ಖಾತೆಯಿಂದ ಕಡಿತಗೊಂಡಿರುತ್ತದೆ. ವಂಚನೆಯಿಂದ ಬ್ಯಾಂಕ್‍ ಖಾತೆಯಿಂದ ಹಣ ತೆಗೆದಿರುವ ಬಗ್ಗೆ ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.