Crime News

ಹಲ್ಲೆ ಪ್ರಕರಣ

ದಿನಾಂಕ 30/07/2020ರಂದು ಶನಿವಾರಸಂತೆ ಬಳಿಯ ಚಿಕ್ಕಕಣಗಾಲು ಗ್ರಾಮದ ನಿವಾಸಿ ಪುರಂಧರ ರಾಜು ಎಂಬವರು ಅವರ ಪತ್ನಿ ದೇವಕ್ಕಿರವರೊಂದಿಗೆ ಗದ್ದೆಯಲ್ಲಿ ಕೆಲಸ ಮಾಡಿ ಮನೆಗೆ ಹೋಗುತ್ತಿರುವಾಗ ಪುರಂಧರರಾಜುರವರ ತಮ್ಮ ಚಂಗಪ್ಪರವರು ಕ್ಷುಲ್ಲಕ ಕಾರಣಕ್ಕೆ ಪುರಂಧರ ರಾಜುರವರೊಂದಿಗೆ ಜಗಳವಾಡಿ ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 30/07/2020ರ ರಾತ್ರಿ ವೇಳೆ ಗೋಣಿಕೊಪ್ಪ ಬಳಿಯ ಬಿ.ಶೆಟ್ಟಿಗೇರಿ ನಿವಾಸಿ ಜೇನು ಕುರುಬರ ರಾಜೇಶ ಎಂಬಾತನು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತನ ಪತ್ನಿ ಆತನೊಂದಿಗೆ ಜಗಳವಾಡಿ ಮನೆಯಿಂದ ಹೋಗಿರುವ ಕಾರಣಕ್ಕೆ ತಾನು ಅವಳಿಲ್ಲದೆ ಬದುಕುವುದಿಲ್ಲ ಂಬುದಾಗಿ ನೆರೆಹೊರೆಯವರ ಮುಂದೆ ಹೇಳಿದ್ದು ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 31/07/2020ರಂದು ಸಂಜೆ ವೇಳೆ ಗೋಣಿಕೊಪ್ಪ ನಗರದ ಎರಡನೇ ವಿಭಾಗದ ಆರ್‍ ರವಿ ಎಂಬವರಿಗೆ ಒಂದನೇ ವಿಭಾಗದ ನಿವಾಸಿ ಶಿವರಾಜು ಎಂಬವರು ಹಣದ ವಿಚಾರಕ್ಕೆ ಜಗಳವಾಡಿ ಕಬ್ಬಿಣದ ರಾಡಿನಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ; ಸಾವು

ದಿನಾಂಕ 31/07/2020ರಂದು ಹಾಸನ ಜಿಲ್ಲೆಯ ಕೊಣನೂರು ನಿವಾಸಿ ದಿಲೀಪ್‍ ಕುಮಾರ್ ಎಂಬವರು ಅವರ ಕಾರು ಸಂಖ್ಯೆ ಕೆಎ-51-ಎಂಹೆಚ್-7094 ರಲ್ಲಿ ಮಡಿಕೇರಿಗೆ ಹೋಗುತ್ತಿರುವಾಗ ಮಡಿಕೇರಿ ನಗರದ ಕಮಾನು ಗೇಟಿನ ಬಳಿ ಇರುವ ಹನಿ ಕೋಂಬ್ ಹೋಂ ಸ್ಟೇಗೆ ಹೋಗುವ ರಸ್ತೆಯ ಬಳಿ ಮಡಿಕೇರಿ ಕಡೆಯಿಂದ ಕೆಎ-12-ಕ್ಯು-4397 ನ್ನು ನಂಜರಾಐಪಟ್ಟಣದ ಶ್ರೇಯಸ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ದಿಲೀಪ್‍ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರ್ ಚಾಲಿಸುತ್ತಿದ್ದ ಶ್ರೇಯಸ್ ಸ್ಥಳದಲ್ಲೇ ಮೃತರಾಗಿದ್ದು ಹಿಂಬದಿ ಸವಾರ ಶಿಬಿನ್ ಎಂಬವರಿಗೆ ಗಾಯಗಳಾಗಿರುವುದಾಗಿ ದೂರು ನೀಡಲಾಗಿದೆ. ಅದೇ ರೀತಿ ಕಾರು ಚಾಲಕ ದಿಲೀಪ್‍ ಕುಮಾರ್ ರವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ಶ್ರೇಯಸ್ ಚಾಲಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಶ್ರೇಯಸ್ ಮೃತರಾಗಿರುವುದಾಗಿ ನಂಜರಾಯಪಟ್ಟಣದ ನಿವಾಸಿ ಕೆ.ಎಸ್.ಸುರೇಶ ಎಂಬವರು ಪ್ರತಿ ದೂರು ನೀಡಿದ್ದು ಮಡಿಕೇರಿ ಸಂಚಾರಿ ಪೊಲೀಸರು ಎರಡೂ ದೂರುಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ

ದಿನಾಂಕ 31/07/2020ರ ಸಂಜೆ ವೇಳೆ ಸೋಮವಾರಪೇಟೆ ಬಳಿಯ ಗೋಣಿಮರೂರು ಗ್ರಾಮದ ನಿವಾಸಿ ಮಂಜುನಾಥ ಎಂಬವರು ಅವರ ದಿನಸಿ ಅಂಗಡಿಯ ಮುಂದೆ ಅಕ್ರಮವಾಗಿ ಸರ್ಕಾರದ ಪರವಾನಗಿ ಇಲ್ಲದೆ ಜನರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ದೊರೆತ ಸುಳಿವಿನ ಮೇರೆಗೆ ಸೋಮವಾರಪೇಟೆ ಠಾಣೆಯ ಪಿಎಸ್‍ಐ ಶಿವಶಂಕರ್‍ರವರು ಸ್ಥಳಕ್ಕೆ ಧಾಳಿ ನಡೆಸಿ ಕೃತ್ಯವನ್ನು ಪತ್ತೆ ಹಚ್ಚಿ ಮಂಜುನಾಥರವರನ್ನು ಬಂಧಿಸಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.