Crime News
ಹಲ್ಲೆ ಪ್ರಕರಣ
ದಿನಾಂಕ 10/08/2020ರಂದು ಸೋಮವಾರಪೇಟೆ ಬಳಿಯ ಗೋಣಿಮರೂರು ನಿವಾಸಿ ಜಿ.ಎಸ್.ನವೀನ ಎಂಬವರು ಕೆಲಸದ ನಿಮಿತ್ತ ಅವರಗದ್ದೆಯ ಕಡೆಗೆ ಹೋಗಿದ್ದಾಗ, ನವೀನ್ರವರ ನೆರೆಮನೆಯ ತ್ಯಾಗರಾಜು ಎಂಬವರು ಗದ್ದೆಗೆ ದನಗಳನ್ನು ಬಿಟ್ಟ ವಿಚಾರಕ್ಕೆ ಜಗಳವಾಡಿ ನವೀನ್ರವರ ಮೇಲೆ ಗುದ್ದಲಿಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹೊಳೆಯಲ್ಲಿ ಕೊಚ್ಚಿಹೋದ ಮಹಿಳೆಯ ಶವ ಪತ್ತೆ
ದಿನಾಂಕ 08/08/2020ರಂದು ಮಡಿಕೇರಿ ಬಳಿಯ ಬಿಳಿಗೇರಿ ನಿವಾಸಿ ಮೋಹನ್ ಎಂಬವರ ಮಗಳು ಕ್ಷುಲ್ಲಕ ಕಾರಣಕ್ಕೆ ತಾಯಿ ಉಷಾಳೊಂದಿಗೆ ಜಗಳವಾಡಿ ಪಕ್ಕದಲ್ಲಿ ಹರಿಯುತ್ತಿದ್ದ ತೋಮ್ಣ ಹೊಳೆಗೆ ಹಾರಿದ್ದು ಆಕೆಯನ್ನು ಕಾಪಾಡೆಲೆಂದು ಹೊಳೆಗೆ ಹಾರಿದ್ದ ತಾಯಿ ಉಷಾರವರ ಮೃತದೇಹವು ದಿನಾಂಕ 10/08/2020ರಂದು ಮನೆಯಿಂದ ಸುಮಾರು 700 ಮೀಟರ್ ದೂರದಲ್ಲಿ ಪತ್ತೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.