Crime News

ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅರಪಟ್ಟು ಗ್ರಾಮದ ನಿವಾಸಿ ಆರ್.ರಮೇಶ್ ಎಂಬವರ ಪತ್ನಿ ಜಾನು ಎಂಬವರು ಕೆಲವು ದಿವಸಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ದಿನಾಂಕ 10-8-2020 ರಂದು ಮದ್ಯಸೇವಿಸಿ ಮನೆಯ ಪಕ್ಕದಲ್ಲಿದ್ದ ಕಾಫಿ ತೋಟದಲ್ಲಿದ್ದ ತಡರೆದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟಿ ಡಿಕ್ಕಿಯಾಗಿ ವ್ಯಕ್ತಿಗೆ ಗಾಯ

ದಿನಾಂಕ 10-8-2020 ರಂದು ಕುಶಾಲನಗರದ ಐಬಿ ರಸ್ತೆಯಲ್ಲಿರುವ ಮನು ಪ್ರೆಸ್ ಮಾಲೀಕ ಎನ್.ಕೆ. ಮೋಹನ್ ಕುಮಾರ್ ತಮ್ಮ ಸ್ನೇಹಿತನೊಂದಿಗೆ ಕುಶಾಲನಗರದ ಕೆನರಾ ಬ್ಯಾಂಕ್ ಸಮೀಪದ ನಿಸರ್ಗ ಹೋಟೇಲಿನಿಂದ ನಡೆದುಕೊಂಡು ಬರುತ್ತಿರುವಾಗ್ಗೆ ಮೈಸೂರು ಕಡೆಯಿಂದ ಬಂದ ಸ್ಕೂಟಿಯೊಂದು ಅವರಿಗೆ ಡಿಕ್ಕಿಯಾಗಿ ಅವರ ಎಡಕಾಲಿಗೆ ಗಾಯವಾಗಿದ್ದು, ಈ ಸಂಬಂಧ ಸ್ಕೂಟಿ ಸವಾರನ ವಿರುದ್ಧ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಿಕ್ಅಪ್ ವಾಹನ ಅಪಘಾತ

ದಿನಾಂಕ 10-8-2020 ರಂದು ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಹರದೂರು ಗ್ರಾಮದ ನಿವಾಸಿ ಕೆ.ಕೆ. ಚಂಗಪ್ಪ ಎಂಬವರ ಅಳಿಯ ತಮ್ಮ ಪಿಕ್ಅಪ್ ವಾಹನವನ್ನು ಕೊಡಗರಹಳ್ಳಿಯಲ್ಲಿ ಹೋಗುತ್ತಿದ್ದಾಗ ವಾಹನದ ನಿಯಂತ್ರಣ ಕಳೆದುಕೊಂಡ ಪರಿಣಾಮ ವಾಹನ ರಸ್ತೆಯ ಬದಿಯ ಮೋರಿಯ ಕಟ್ಟೆಗೆ ಡಿಕ್ಕಿಯಾಗಿ ಚಾಲಕ ಚಂದನ್ ರವರಿಗೆ ಗಾಯಗಳಾಗಿದ್ದು ಅವರನ್ನು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಗೆ ದಾಖಲು ಮಾಡಿದ್ದು, ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.