Crime News

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಕೊಲೆಗೆ ಯತ್ನ

ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ಕೊಟ್ಟಗೇರಿ ಗ್ರಾಮದ ನಿವಾಸಿ ಹೆಚ್.ಆರ್.ಧರಣೇಶ್ ಎಂಬವರು ದಿನಾಂಕ 12-8-2020 ರಂದು ಬಾಳೆಲೆ ಪಟ್ಟಣಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಬಾಳೆಲೆ ಗ್ರಾಮದ ನಿವಾಸಿ ಚಟ್ಟಿಮಾಡ ಮೋಕ್ಷಿತ್ ಎಂಬವರು ತಡೆದು ಕೆಲಸಕ್ಕೆ ಬಾರದ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ನಡೆಸಿದ್ದೂ ಅಲ್ಲದೆ ಚಾಕುವಿನಿಂದ ತಿವಿದು ಕೊಲೆಗೆ ಯತ್ನಿಸಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ಹಲ್ಲೆ, ಜೀವ ಬೆದರಿಕೆ

ಪೊನ್ನಂಪೇಟೆ ಠಾಣಾ ಸರಹದ್ದಿನ ಬಾಳೆಲೆ ಗ್ರಾಮದ ನಿವಾಸಿ ಸಿ.ಸಿ.ಮೋಕ್ಷಿತ್ ಎಂಬವರು ದಿನಾಂಕ 12-8-2020 ರಂದು ಬಾಳೆಲೆ ನಗರದ ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ ಅಲ್ಲಿ ಕೊಟ್ಟಗೇರಿ ಗ್ರಾಮದ ಗುಣಮತ್ತು ಇತರೆ 8 ಜನರು ಸೇರಿಕೊಂಡು ಮದ್ಯಸೇವನೆ ಮಾಡಿಕೊಂಡಿದ್ದು ದಾರಿಯನ್ನು ಬಿಡುವಂತೆ ಕೇಳಿಕೊಂಡಾಗ ಅವಾಚ್ಯ ಶಬ್ದಗಳಿಂದ ಬೈದು ಚಾಕುವಿನಿಂದ ತಿವಿಯಲು ಬಂದು ನಂತರ ದೊಣ್ಣೆಯಿಂದ ಹಲ್ಲೆ ನಡೆಸಿ ಕಾರಿನಿಂದ ಒಂದು ವಾಚ್ ಮತ್ತು ಮೊಬೈಲ್ ಹಾಗು 20,000 ರೂ. ನಗದನ್ನು ದೋಚಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೋಟದ ಬೇಲಿ ಕಿತ್ತು ಹಾನಿ, ಕೊಲೆ ಬೆದರಿಕೆ

ಕುಟ್ಟ ಪೊಲೀಸ್ ಠಾಣಾ ಸರಹದ್ದಿನ ಕೋತೂರು ಗ್ರಾಮದ ನಿವಾಸಿ ಶ್ರೀಮತಿ ಕೆ.ಎಂ.ಹರಿಣಿ ಎಂಬವರಿಗೆ ಸೇರಿದ ಕಾಫಿ ತೋಟದ ಬೇಲಿಯನ್ನು ಅದೇ ಗ್ರಾಮದ ಮಾಣಿಯಪಂಡ ಕಿಶು ಮತ್ತು  ಮಾಣಿಯಪಂಡ ಮಂಜು ಕಿತ್ತು ನಷ್ಟ ಪಡಿಸಿದ್ದು ಅಲ್ಲದೆ ಆ ಬಗ್ಗೆ ವಿಚಾರಿಸಿದ ಕೆ.ಎಂ. ಹರಿಣಿಯವರನ್ನು ಅವಾಚ್ಯ ಶಬ್ದಗಳಿಂದ ಬೈದು ಕೊಲೆಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.