Crime News

ವಿದ್ಯುತ್ ಸ್ಪರ್ಷದಿಂದ ವ್ಯಕ್ತಿ ಸಾವು

ಮಡಿಕೇರಿ ತಾಲೋಕು ನಾಪೋಕ್ಲು ಗ್ರಾಮದ ನಿವಾಸಿ ಕಂಗಂಡ ರಾಣಾ ಅಯ್ಯಪ್ಪ ಎಂಬವರ ತಂದೆ ಕಂಗಂಡ ಬೆಳ್ಯಪ್ಪ ಎಂಬರು ದಿನಾಂಕ 14-8-2020 ರಂದು ತಮ್ಮ ತೋಟದಲ್ಲಿ ಕರಿಮೆಣಸು ಬಳ್ಳಿಗಳನ್ನು ಕಬ್ಬಿಣದ ಏಣಿಯ ಸಹಾಯದಿಂದ ಸರಿಪಡಿಸುತ್ತಿದ್ದಾಗ ಆಕಸ್ಮಿಕವಾಗಿ ಕಬ್ಬಿಣದ ಏಣಿ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಸ್ಪರ್ಷಗೊಂಡು ಬೆಳ್ಯಪ್ಪನವರು ಸಾವನಪ್ಪಿದ್ದು ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣಕಾಸಿನ ವ್ಯವಹಾರದಲ್ಲಿ ನಷ್ಟ, ವ್ಯಕ್ತಿ ಆತ್ಮಹತ್ಯೆ

ನಾಪೋಕ್ಲು ಠಾಣಾ ವ್ಯಾಪ್ತಿಯ ಬಲ್ಲಮಾವಟಿ ಗ್ರಾಮದ ನಿವಾಸಿ ಮಾದೇಯಂಡ ಸುಬ್ರಮಣಿ @ ರಘು ಎಂಬವರು ಹಣದ ವ್ಯವಹಾರದಲ್ಲಿ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಮನನೊಂದು ದಿನಾಂಕ 14-8-2020 ರಂದು ತಮ್ಮ ತೋಟದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪತಿಯಿಂದ ಪತ್ನಿಗೆ ಕಿರುಕುಳ

ಮಡಿಕೇರಿ ತಾಲೋಕು ಮೂರ್ನಾಡುವಿನ ಸುಭಾಷ್ ನಗರದ ನಿವಾಸಿ ಶ್ರೀಮತಿ ಉಮೈಮ ಎಂಬವರಿಗೆ ತನ್ನ ಪತಿ ರಜಾಕ್ ಎಂಬವರು ಮಾನಸಿಕ ಹಾಗು ದೈಹಿಕ ಕಿರುಕುಳ ನೀಡುತ್ತಿದ್ದು ದಿನಾಂಕ 11-8-2020 ರಂದು ವಿನಾಕಾರಣ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಮಾಡಿದ್ದು ಅಲ್ಲದೆ ದಿನಂಪ್ರತಿ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡುತ್ತಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯನ್ನು ತಡೆದು ಹಲ್ಲೆ

ವಿರಾಜಪೇಟೆ ನಗರದ ನೆಹರು ನಗರದ ನಿವಾಸಿ ಎಸ್. ಸುಬ್ರಮಣಿ ಎಂಬವರು ದಿನಾಂಕ 14-8-2020 ರಂದು ವಿಜಯನಗರದ ತಮ್ಮ ಜಾಗದಲ್ಲಿ ನಿಂತುಕೊಂಡಿರುವಾಗ್ಗೆ ಅಂಬಟ್ಟಿ ಗ್ರಾಮದ ಪುನೀತ್ ಹಾಗು ಪ್ರಶಾಂತ್ ನಾಯಕ್ ಎಂಬವರು ಅಲ್ಲಿಗೆ ಬಂದು ವಿನಾಕಾರಣ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು  ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜಾನುವಾರು ಕಳ್ಳತನ

ಶನಿವಾರಸಂತೆ ಠಾಣಾ ಸರಹದ್ದಿನ ಕೊಡ್ಲಿಪೇಟೆ ಗ್ರಾಮದ ನಿವಾಸಿ ಬಾಲಚಂದ್ರ ಎಂಬವರ ದನದ ಕೊಟ್ಟಿಗೆಯ ಹೊರಗಡೆ ದಿನಾಂಕ 14-8-2020 ರಂದು ಬೆಳಗಿನ ಜಾವ 4-00 ಗಂಟೆ ಸಮಯದಲ್ಲಿ ಎರಡು ಎತ್ತುಗಳನ್ನು ಕಟ್ಟಿದ್ದು ಬೆಳಿಗ್ಗೆ 7-00 ಗಂಟೆಗೆ ನೋಡುವಾಗ ಅವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು, ಸದರಿ ಎತ್ತುಗಳ ಬೆಲೆ ಅಂದಾಜು 48,500/- ಗಳಾಗಿರುತ್ತವೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.