Crime News

ಗುಂಡೇಟಿಗೆ ವ್ಯಕ್ತಿ ಸಾವು

ದಿನಾಂಕ 14/08/2020ರಂದು ಕರ್ಣಂಗೇರಿ ಗ್ರಾಮದ ದೇವಯ್ಯ, ಮಕಕ್ಕಂದೂರು ಬಳಿಯ ಉದಯಗಿರಿ ನಿವಾಸಿ ಶರಣು, ಹೊನ್ನಯ್ಯ ಮತ್ತು ಕೆ.ಕೆ.ಶಿವು ಎಂಬವರು ಉದಯಗಿರಿಯಲ್ಲಿ ಕಾಡಿಗೆ ರಾತ್ರಿ ವೇಳೆ ಬೇಟೆಗೆಂದು ಹೋಗಿದ್ದು ಬೇಟೆಯ ಸಮಯದಲ್ಲಿ ಯಾವುದೋ ಕಾಡು ಪ್ರಾಣಿ ಎಂದುಕೊಂಡು ದೇವಯ್ಯನು ಕೋವಿಯಿಂದ ಹಾರಿಸಿದ ಗುಂಡು ಶಿವುರವರ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ತಗುಲಿದ ಪರಿಣಾಮ ಶಿವುರವರು ಸ್ಥಳದಲ್ಲೇ ಮೃತರಾಗಿದ್ದು ಜೊತೆಗಿದ್ದ ಶರಣುರವರ ಕಾಲುಗಳಿಗೆ ಗುಂಡು ತಾಗಿ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ತಲಕಾವೇರಿ ಭೂಕುಸಿತ; ಮೃತದೇಹ ಪತ್ತೆ

ದಿನಾಂಕ 06/08/2020ರಂದು ಸುರಿದ ವಿಪರೀತ ಮಳೆಯಿಂದಾಗಿ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದ ಪರಿಣಾಮ ತಲಕಾವೇರಿಯ ಪ್ರಧಾನ ಅರ್ಚಕ ಟಿ.ಎಸ್.ನಾರಾಯಣಾಚಾರ್ ಸೇರಿದಂತೆ ಐವರು ಕಾಣೆಯಾಗಿದ್ದು ಜಿಲ್ಲಾಡಳಿತ, ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ಮತ್ತು ಪೊಲೀಸ್ ಇಲಾಖೆಯ ವತಿಯಿಂದ ನಡೆಯುತ್ತಿರುವ ಶೋಧ ಕಾರ್ಯದಲ್ಲಿ ದಿನಾಂಕ 15/08/2020ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್‍ ಬಳಿಯ ಪಳ್ಳಿಗೆ ಗ್ರಾಮದ ನಿವಾಸಿ ರವಿಕಿರಣ್ ಎಂಬವರ ಮೃತ ದೇಹವು ಪತ್ತೆಯಾಗಿದ್ದು ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 15/08/2020ರಂದು ಪಾಲಿಬೆಟ್ಟದ ನಿವಾಸಿ ಮುರುಗನ್ ಎಂಬವರು ಅವರ ಸ್ನೇಹಿತರಾದ ಪವನ್, ಪ್ರಸಾದ್ ಮತ್ತು ವಿಷ್ಣು ಎಂಬವರೊಡನೆ ಪಾಳಿಬೆಟ್ಟದ ಮುನೀರ್ ಹೋಟೆಲಿನ ಬಳಿ ಇರುವಾಗ ಅಲ್ಲಿಗೆ ಬಂದ ಸಂದೀಪ್, ಸಂಪತ್, ಅರುಣ ಮತ್ತು ಮಂಜುನಾಥ್ ಎಂಬವರು ಹಳೆ ದ್ವೇಷದಿಂದ ಜಗಳವಾಡಿ ದೊಣ್ಣೆಯಿಂದ ಮುರುಗನ್, ಪವನ್, ಪ್ರಸಾದ್‍ ಮತ್ತು ವಿಷ್ಣುರವರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 14/08/2020ರ ರಾತ್ರಿ ವೇಳೆ ಸೋಮವಾರಪೇಟೆ ಬಳಿಯ ಮಾದಾಪುರದ ಮಾದಾಪುರ ೆಸ್ಟೇಟಿನ ನಿವಾಸಿ ಐವನ್ ಎಸ್‍.ಜಿ. ಎಂಬವರು ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಡಿರುವ ಘಟನೆ ನಡೆದಿದೆ. ಮೃತ ಐವನ್‍ರವರ ಪತ್ನಿ ಹಿಲ್ಡಾರವರು ಐವನ್‍ರವರಿಂದ ವಿಚ್ಛೇದನ ಪಡೆದುಕೊಂಡ ಕಾರಣಕ್ಕೆ ಜುಗುಪ್ಸೆಗೊಂಡು ಐವನ್‍ರವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.