Crime News

ಕಳ್ಳಬಟ್ಟಿ ಮಾರಾಟ ಪ್ರಕರಣ

ದಿನಾಂಕ 16/08/2020ರಂದು ಸೋಮವಾರಪೇಟೆ ಬಳಿಯ ಗರ್ವಾಲೆ ಗ್ರಾಮದಲ್ಲಿ ಗೌಡಂಡ ಬೋಪಯ್ಯ ಎಂಬವರು ಅಕ್ರಮವಾಗಿ ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸಿ ಮಾರಾಟ ಮಾಡುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಸೋಮವಾರಪೇಟೆ ಠಾಣೆಯ ಪಿಎಸ್‍ಐ ಶಿವಶಂಕರ್ ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಧಾಳಿಮಾಡಿ ಆರೋಪಿ ಗೌಡಂಡ ಬೋಪಯ್ಯನವರ ಬಳಿಯಿಂದ ಅಕ್ರಮ ಕಳ್ಳಬಟ್ಟಿ ಸಾರಾಯಿ ತುಂಬಿದ್ದ ಸುಮಾರು 2.2.5 ಲೀಟರಿನ ರಡು ಬಾಟಲಿಗಳು ಮತ್ತು ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಂಡು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕಾಡಾನೆ ತುಳಿದು ಮಹಿಳೆ ಸಾವು

ದಿನಾಂಕ 15/08/2020ರ ಸಂಜೆ ಸುಂಟಿಕೊಪ್ಪ ಬಳಿಯ ಮೋದೂರು ಗ್ರಾಮದ ನಿವಾಸಿ ನೀನಾ ಮುತ್ತಣ್ಣ ಎಂಬವರು ಸಂಜೆ ವೇಳೆ ಮನೆಯ ಬಳಿ ಕಾಲು ದಾರಿಯಲ್ಲಿ ವಾಕಿಂಗ್ ಹೋಗಿದ್ದು ಸುಮಾರು ಸಮಯ ಕಳೆದರೂ ಮರಳಿ ಬಾರದ ಕಾರಣ ಮನೆಯವರು ಮತ್ತು ಇತರರು ಸೇರಿ ಹುಡುಕಾಡಿದಾಗ ಕಾಫಿ ತೋಟದ ಬಳಿಯ ಕಾಲು ದಾರಿಯಲ್ಲಿ ಕಾಡಾನೆ ತುಳಿದು ಸಾವಿಗೀಡಾದ ನೀನಾ ಮುತ್ತಣ್ಣರವರ ಮೃತದೇಹವು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ವಂಚನೆ ಪ್ರಕರಣ

ಮಡಿಕೇರಿಯ ಸುದರ್ಶನ ವೃತ್ತದ ಬಳಿಯ ಜಯನಗರ ನಿವಾಸಿ ಉಣ್ಣಿಕೃಷ್ಣನ್ ಎಂಬವರು ಕುಶಾಲನಗರದ ಕೂಡ್ಲೂರುವಿನಲ್ಲಿರುವ ಅವರ ಸ್ವರಾಜ್ ಮಜ್ದಾ ಲಾರಿಯ ಶೋ ರೂಂ ಹಾಗೂ ಅವರ ಹಾಲೋ ಬ್ರಿಕ್ಸ್ ತಯಾರಿಕಾ ಘಟಕಗಳನ್ನು 2018ನೇ ಇಸವಿಯಲ್ಲಿ ಹಾಸನದ ಮಧುಕುಮಾರ್ ಟಿ.ಪಿ. ಮತ್ತು ದಿವಾಕರ್ ಎಂಬವರಿಗೆ ರೂ.95,00,000/- ಗಳಿಗೆ ಮಾರಾಟ ಮಾಡುವ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದು ಅವರುಗಳು ಉಣ್ಣಿಕೃಷ್ಣನ್‍ರವರಿಗೆ ಕೇವಲ ರೂ.55,00,000/- ಗಳನ್ನು ಮಾತ್ರ ಪಾವತಿಸಿ ಉಳಿದ ಹಣವನ್ನು ನೀಡದೆ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 16/08/2020ರಂದು ಕುಶಾಲನಗರದ ನೆಹರೂ ಬಡಾವಣೆ ನಿವಾಸಿ ಬಿ.ಕೆ.ರಮೇಶ್ ಎಂಬವರು ಅವರ ಸ್ನೇಹಿತ ರಾಘವೇಂದ್ರರವರೊಂದಿಗೆ ಬೈಕಿನಲ್ಲಿ ಕುಶಾಲನಗರದಿಂದ ಗುಡ್ಡೆಹೊಸೂರು ಕಡೆಗೆ ಹೋಗುತ್ತಿರುವಾಗ ಹಿಂದಿನಿಂದ ಒಂದು ಕಾರನ್ನು ಅದರ ಚಾಲಕ ಸೋಮವಾರಪೇಟೆಯ ಎನ್‍.ಸಿ.ಪವನ್ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಮೇಶರವರು ಹೋಗುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕಿನಲ್ಲಿದ್ದ ರಮೇಶ ಮತ್ತು ರಾಘವೇಂದ್ರರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.