Crime News

ಮಹಿಳೆ ಮೇಲೆ  ಹಲ್ಲೆ ಪ್ರಕರಣ ದಾಖಲು

ಮಡಿಕೇರಿ ನಗರದ ಕನ್ನಂಡಬಾಣೆಯ ನಿವಾಸಿ ಶ್ರೀಮತಿ ಪಿ.ಎಸ್. ಕವಿತ ಎಂಬವರು ಖರೀದಿಸಿದ ಜಾಗದಲ್ಲಿ ಲೈನು ಮನೆ ಇದ್ದು ಅದರಲ್ಲಿ ವಾಸವಾಗಿರುವ ಶಶಿ ಎಂಬವರನ್ನು ಮನೆ ಖಾಲಿ ಮಾಡಲು ಕೇಳಿಕೊಂಡಿದ್ದು, ಅದರಂತೆ ದಿನಾಂಕ 20-8-2020 ರಂದು ಶ್ರೀಮತಿ ಪಿ.ಎಸ್. ಕವಿತರವರು ಲೈನು ಮನೆಗೆ ಹೋದಾಗ ಶಶಿ ರವರು ಅವರ ಕೈ ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದು  ಅಲ್ಲದೆ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕೊಡಗು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಸಿದ್ದಾಪುರ ಠಾಣಾ ಸರಹದ್ದಿನ ಗುಹ್ಯ ಗ್ರಾಮದ ನಿವಾಸಿ ಶ್ರೀಮತಿ ವೈ.ಎ.ಜಾನು ಎಂಬವರ ಮಗ ದಿಲೀಪ ಎಂಬವರು ದಿನಾಂಕ 19-8-2020 ರಂದು ತಮ್ಮ ವಾಸದ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿದಿರಿನ ಕಣಿಲೆಗಳ ಕಳವು

ವಿರಾಜಪೇಟೆ ನಗರದ ನಿವಾಸಿ ಎಸ್.ಜೆ. ನಿಖಿಲ್ ರಾಮಮೂರ್ತಿರವರ ತಂದೆ ಎಸ್.ಆರ್.ಜಗದೀಶ್ ರವರ ಹೆಸರಿನಲ್ಲಿರುವ  ವಿರಾಜಪೇಟೆ ನಗರದ ಬ್ಲಾಕ್ ನಂ 3 ಸರ್ವೇ, ನಂ 12/2 ರಲ್ಲಿ ಒಟ್ಟು 91 ಸೇಂಟ್ ಜಾಗವಿದ್ದು ಇದರಲ್ಲಿ ನಿಖಿಲ್ ರವರು ಕೃಷಿ ಉತ್ಪನ್ನವಾದ ಸುಮಾರು 25 ಬಗೆಯ ಬಿದಿರುಗಳನ್ನು ಬೆಳೆದಿದ್ದು,ಸುಮಾರು 15 ದಿನಗಳ ಇಚೆಗೆ ಈ ಬಿದಿರಿನ ಕಣಿಲೆಗಳನ್ನು ಯಾರೋ ಕಳ್ಳರು ಕಡಿದು ಕೊಂಡು ಹೋಗಿದ್ದು ಅದರ ಬೆಲೆ ಅಂದಾಜು 20,000 ರೂ. ಗಳಾಗಬಹುದೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಕಾಣೆ

ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ದೇವನೂರು ಗ್ರಾಮದ ನಿವಾಸಿ ಸರಸ್ವತಿ (75) ಎಂಬವರು ದಿನಾಂಕ 28-8-2020 ರಂದು ರಾತ್ರಿ ಬಾತ್ ರೂಂಗೆ ಹೋಗಿ ಬರುವುದಾಗಿ ಮಲಗಿದ್ದಲ್ಲಿಂದ ಎದ್ದು ಹೋದವರು ಮತ್ತೆ ಬಾರದೆ ಕಾಣೆಯಾಗಿದ್ದು ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನೆ ಕಳವು

ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಪಂಪ್ ಹೌಸ್ ಬಳಿ ಇರುವ ಅಬ್ಬಾಸ್ ಎಂಬವರ ವಾಸದ ಮನೆಗೆ ದಿನಾಂಕ 15-8-2020 ರಿಂದ 19-8-2020ರ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನುಗ್ಗಿ ಕಬ್ಬಿಣದ ಕಪಾಟಿನಿಂದ 18,000 ರೂ ಬಲೆಬಾಳುವ ಚಿನ್ನದ ಉಂಗುರ ಹಾಗು 6000 ರೂ ಬೆಲೆಬಾಳುವ  ಮೊಬೈಲ್ ಸೆಟ್ ಮತ್ತು ಅದಕ್ಕೆ ಸಂಬಂಧಿಸಿದ ಪಕರಣಗಳನ್ನು ಕಳವುಮಾಡಿಕೊಂಡು ಹೋಗಿದ್ದು, ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.