Crime News

ಪತಿ-ಪತ್ನಿ ಜಗಳ, ಪ್ರಕರಣ ದಾಖಲು

ಮಡಿಕೇರಿ ತಾಲೋಕು ಬಿಳಿಗೇರಿ ಗ್ರಾಮದ ನಿವಾಸಿ ಕೆ.ಎಂ. ಮುದ್ದಪ್ಪ ಎಂಬವರ ಕಾಫಿತೋಟದ ಲೈನು ಮನೆಯಲ್ಲಿ ಅಣ್ಣು ಹಾಗು ಆಕೆಯ ಪತ್ನಿ ಶಾಂತಿರವರು ವಾಸವಾಗಿದ್ದು, ಇವರಿಗೆ ಪ್ರತಿ ದಿನ ಮದ್ಯಪಾನ ಮಾಡುವ ಅಭ್ಯಾಸವಿದ್ದು, ದಿನಾಂಕ 21-8-2020 ರಂದು ಕೂಲಿ ಹಣ ಪಡೆದುಕೊಂಡು ಮಡಿಕೇರಿ ಹೋಗಿ ಮದ್ಯಪಾನ ಮಾಡಿ ಮಧ್ಯಾಹ್ನ ಮರಳಿ ಮನೆಗೆ ಬಂದು  ಮದ್ಯದ ಅಮಲಿನಲ್ಲಿ ಅಣ್ಣು ತನ್ನ ಪತ್ನಿಯ ಮೇಲೆ ಹಲ್ಲೆ ಮಾಡಿದಾಗ ಪತ್ನಿ ಕತ್ತಿಯಿಂದ ಪತಿ ಅಣ್ಣುರವರ ಮೇಲೆ ಹಲ್ಲೆ ಮಾಡಿ ಗಾಯಪಡಿಸಿದ್ದು. ಈ ಸಂಬಂಧ ಕೆ.ಎಂ. ಮುದ್ದಪ್ಪನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.