Crime News

ರಸ್ತೆ ಅಪಘಾತ

ದಿನಾಂಕ 19/08/2020ರಂದು ಬಾಳೆಲೆ ಬಳಿಯ ನಿಟ್ಟೂರು ನಿವಾಸಿ ಅಪ್ಪಂಡೇರಂಡ ಮಾಚಯ್ಯ ಎಂಬವರು ಮೋಟಾರು ಬೈಕಿನಲ್ಲಿ ಮನೆಗೆ ದಿನಸಿ ತರಲೆಂದು ನಿಟ್ಟೂರಿಗೆ ಹೋಗುತ್ತಿರುವಾಗ ನಿಟ್ಟೂರು ಸೇತುವೆ ಬಳಿ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬೈಕು ಮಾಚಯ್ಯನವರ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿಕೊಂಡು ಮಾಚಯ್ಯನವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 22/08/2020ರ ರಾತ್ರಿ ವೇಳೆ ಗೋಣಿಕೊಪ್ಪ ನಗರದ ಪಾಲಿಬೆಟ್ಟ ಜಂಕ್ಷನ್ ಬಳಿ ನೂರೆರ ಬೋಪಣ್ಣ ಎಂಬವರು ಅವರ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಹೋಗಿ ರಸ್ತೆ ಬದಿ ನಿಲ್ಲಿಸಿದ್ದ ಒಂದು ರಿಕ್ಷಾ ಮತ್ತು ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿಪಡಿಸಿ ಹಾನಿಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಬೈಕ್ ಕಳವು ಪ್ರಕರಣ

ದಿನಾಂಕ 21/08/2020ರಂದು ಶನಿವಾರಸಂತೆ ಬಳಿಯ ಗುಡುಗಳಲೆ ನಿವಾಸಿ ಸಂದೀಪ್ ಎಂಬವರು ಅವರ ಮಾವನ ಬೈಕನ್ನು ತೆಗೆದುಕೊಂಡು ಹೋಗಿದ್ದು ರಾತ್ರಿ ವೇಳೆ ಎಂದಿನಂತೆ ಅಂಗಡಿಗೆ ಬಾಗಿಲು ಹಾಕಿ ಅಂಗಡಿಯ ಮುಂದೆ ಬೈಕನ್ನು ನಿಲ್ಲಿಸಿ ಮನೆಗೆ ಹೋಗಿದ್ದು 22/08/2020ರ ಬೆಳಿಗ್ಗೆ ಅಂಗಡಿತೆರೆಯಲು ಬಂದಾಗ ಅಲ್ಲಿ ನಿಲ್ಲಿಸಿದ್ದ ಬೈಕು ಕಾಣೆಯಾಗಿದ್ದು ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.