Crime News

ಪರಸ್ಪರ ಕಾರುಗಳ ಡಿಕ್ಕಿ

ತುಮಕೂರು ತಾಲೋಕಿನ ತುರುವೆಕೆರೆ ನಿವಾಸಿ ಎಂ.ನರಸಿಂಹ ಮೂರ್ತಿ ಹಾಗು ಪತ್ನಿ ದಿನಾಂಕ 22-8-2020 ರಂದು ತಮ್ಮ ತಮ್ಮ ಕಾರಿನಲ್ಲಿ ಚಾಲಕನೊಂದಿಗೆ ಸುಳ್ಯಕ್ಕೆ ಬಂದು ಮರಳಿ ತುರುವೆಕೆಗೆ ಹೋಗುತ್ತಿದ್ದಾಗ ಮದೆನಾಡು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಎದುಗುಗಡೆಯಿಂದ ಬಂದು ಕಾರು ಡಿಕ್ಕಿಯಾದ ಕಾರಣ ಎರಡೂ ಕಾರುಗಳು ಜಖಂಗೊಂಡಿದ್ದು ಅಲ್ಲದೆ ಕಾರಿನಲ್ಲಿದ್ದ ಎಂ.ನರಸಿಂಹ ಮೂರ್ತಿ ಹಾಗು ಅವರ ಪತ್ನಿ ಶ್ರೀಮತಿ ಪದ್ಮಾವತಿಯವರು ಗಾಯಗೊಂಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವ್ಯಕ್ತಿಯ ಶವ ಪತ್ತೆ

ಭಾಗಮಂಡಲ ಪೊಲೀಸ್ ಠಾಣಾ ಸರಹದ್ದಿನ ತಣ್ಣಿಮಾನಿ ಗ್ರಾಮದ ಕುಡಿಯರ ಮಿಟ್ಟು ಎಂಬವರ ಮನೆಯ ಹತ್ತಿರದ ರಸ್ತೆ ಬದಿಯಲ್ಲಿ  ಒಬ್ಬ ಅಪರಿಚಿತ ವ್ಯಕ್ತಿಯು ನೇಣುಬಿಗಿದು ಕೊಂಡಿರುವ ಸ್ಥಿತಿಯಲ್ಲಿ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ತಲಕಾವೇರಿ ಉಪ ಅರಣ್ಯಾಧಿಕಾರಿ ಎಂ.ಎ. ಆನಂದರವರು ನೀಡಿದ ದೂರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣಿಮಾನಿ ಗ್ರಾಮದ ನಿವಾಸಿ ಕೆ.ಎಂ. ಚೆನ್ನಯ್ಯ ಎಂಬವರ ಮಗ ಕೆ.ಸಿ. ಮೊನೀಷ್ ಎಂಬವರು ದಿನಾಂಕ 23-8-2020 ರಂದು ತಮ್ಮ ವಾಸದ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆರೆಗೆ ಬಿದ್ದು ವ್ಯಕ್ತಿ ಸಾವು

ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅಮ್ಮತ್ತಿ ಕಾರ್ಮಾಡು ಗ್ರಾಮದ ಕುಟ್ಟಂಡ ಕೃಷ್ಙರವರ ಲೈನು ಮನೆಯಲ್ಲಿ ವಾಸವಾಗಿರುವ ಶ್ರೀಮತಿ ಪಣಿಎರವರ ನಾಗಿ ಎಂಬವರ ಗಂಡ ಶಂಕರ ಎಂಬವರು ದಿನಾಂಕ 23-8-2020 ರಂದು ಲೈನು ಮನೆಯಿಂದ ದೂರದಲ್ಲಿರುವ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಆಕಸ್ಮಿಕ ಕಾಲು ಜಾರಿ ಕೆರೆಗೆ ಬಿದ್ದು ಸಾವನಪ್ಪಿದ್ದು ಈ ಸಂಬಂಧ ಮೃತರ ಪತ್ನಿ ಪಣಿಎರವರ ನಾಗಿರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ವ್ಯಕ್ತಿಯ ಕೊಲೆ

ವಿರಾಜಪೇಟೆ ತಾಲೋಕು ಮಾಯಮುಡಿ ಕಾಲೋನಿಯಲ್ಲಿ ವಾಸವಾಗಿದ್ದ   ರವಿ ಎಂಬವರು ಸುಮಾರು 5 ವರ್ಷಗಳ ಹಿಂದೆ  ಮದುವೆಯಾಗಿ ಗಂಡನ್ನನು ಬಿಟ್ಟು ಬೇರೆ ಇದ್ದ ತಾರಾಮಣಿ ಎಂಬವರೊಂದಿಗೆ ವಾಸಮಾಡಿಕೊಂಡಿದ್ದು,  ತಾರಾಮಣಿಯ   ಮಕ್ಕಳಾದ    ಪ್ರವೀಣ  ಎಂಬ  ಮಗ  ಮತ್ತು ಭುವನೇಶ್ವರಿ   ಎಂಬ ಮಗಳು  ಅವರೊಂದಿಗೆ ವಾಸವಾಗಿದ್ದರು.   ರವಿಗೆ ಮದ್ಯಪಾನ ಮಾಡುವ ಚಟವಿದ್ದು ತಾರಾಮಣಿಯೊಂದಿಗೆ ಜಗಳಮಾಡುತ್ತಿದ್ದು, ದಿನಾಂಕ  22/08/2020 ರಂದು ಗಣೇಶ  ಹಬ್ಬದ ದಿನದಂದು  ಮದ್ಯಸೇವಿಸಿ ಬಂದು  ತಾರಾಮಣಿಯೊಂದಿಗೆ  ಜಗಳ  ಮಾಡುತ್ತಿದ್ದಾಗ  ತಾರಾಮಣಿಯ ಮಗ  ಪ್ರವೀಣನು ದೊಣ್ಣೆಯಿಂದ ರವಿಯ ತಲೆಯ ಭಾಗಕ್ಕೆ ಹೊಡೆದಿದ್ದು ಇದರಿಂದ ತುಂಬಾ ಪೆಟ್ಟಾಗಿದ್ದ ರವಿಯು ಮನೆಯಲ್ಲೇ ರಾತ್ರಿ ಮಲಗಿದ್ದಲ್ಲೇ ಮೃತಪಟ್ಟಿದ್ದು  ಈ ಸಂಬಂಧ ಮೃತರ ತಾಯಿ  ಎರವರ ನಲ್ಲಿರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿನಾಕಾರಣ ಪತ್ನಿ ಮೇಲೆ ಪತಿಯಿಂದ ಹಲ್ಲೆ

ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಸಿದ್ದಲಿಂಗಪುರ ಅಳಿಲುಗುಪ್ಪೆ ಗ್ರಾಮದ ನಿವಾಸಿ ಶ್ರೀಮತಿ ಶಶಿಕಲಾ ರವರೊಂದಿಗೆ  ತನ್ನ ಗಂಡ ಗಣೇಶ್@ ಲೋಕೇಶ್ ರವರು ಸುಮಾರು  2 ತಿಂಗಳಿನಿಂದ ಸಣ್ಣ ಪುಟ್ಟ ವಿಚಾರಕ್ಕೆ ಗಲಾಟೆ ಮಾಡುತ್ತಿದ್ದು, ದಿನಾಂಕ  22-8-2020ರಂದು ಶಶಿಕಲಾರವರು  ಮನೆಯಲ್ಲಿರುವಾಗ್ಗೆ ಗಣೇಶ್ ರವರು ರಾತ್ರಿ  ಮದ್ಯಪಾನ ಮಾಡಿ ಮನೆಗೆ ಬಂದು ವಿನಾ ಕಾರಣ ಗಲಾಟೆ ಮಾಡಿ ಕೈಯಿಂದ ಮುಖಕ್ಕೆ  ಹಾತು  ದೊಣ್ಣೆಯಿಂದ ತಲೆಗೆ ಹೊಡೆದು  ನೋವು ಪಡಿಸಿದ್ದು ಅಲ್ಲದೆ  ಕಾಲಿನಿಂದ ಹೊಟ್ಟೆಯ ಭಾಗಕ್ಕೆ ಒದ್ದು,  ಚಾಕುವನ್ನು ತೋರಿಸಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಟಾರ್ ಸೈಕಲಿಗೆ ಕಾರು ಡಿಕ್ಕಿ

ದಿನಾಂಕ 23-08-2020 ರಂದು ಸಮಯ 07-30 ಪಿ.ಎಂ ಗೆ ಕುಶಾಲನಗರ ನಿವಾಸಿ ಸೌಮಿತ್ ವಿ.ಎಸ್. ಎಂಬವರು ಕುಶಾಲನಗರದಿಂದ ಮಾದಾಪಟ್ಟಣಕ್ಕೆ  ತಮ್ಮ ಕಾರಿನಲ್ಲಿ ಹೋಗುತ್ತಿರುವಾಗ ಗಂಧದಕೋಟೆ ದಾಟಿ ಮುಂದೆ ಹೋಗುವಷ್ಟರಲ್ಲಿ ನರ್ಸರಿಯ ಮುಂಭಾಗದಲ್ಲಿ ತಮ್ಮ ಕಾರಿನ ಹಿಂದಿನಿಂದ ಬಂದ KA-17-M-5636 ರ ಕಾರಿನ ಚಾಲಕನು ಸದರಿ ಕಾರನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿಕೂಂಡು ಬಂದು ವಿ.ಎಸ್. ಸೌಮಿತ್ ರವರ ಕಾರನ್ನು ಹಿಂದೆ ಹಾಕಿ ಮಾದಪಟ್ಟಣದ ಕಡೆಯಿಂದ ಬರುತ್ತಿದ್ದ KA-12-Q-7763 ರ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ  ಮೋಟಾರು ಸೈಕಲಿನಲ್ಲಿ ಹೋಗುತ್ತಿದ್ದ  ಪ್ರಜ್ವಲ್ ಎಂ.ಎನ್. ಹಾಗು ಮನೋಜ್ ಎಂಬವರು ಗಾಯಗೊಂಡಿದ್ದು, ಅಪಘಾತ ಪಡಿಸಿದ ಕಾರಿನ ಚಾಲಕ ಕಾರನ್ನು ನಿಲ್ಲಿಸದೇ ಹೋಗಿದ್ದು, ಈ ಸಂಬಂಧ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.