Crime News

ವ್ಯಕ್ತಿ ಆತ್ಮಹತ್ಯೆ

ದಿನಾಂಕ 24/08/2020ರಂದು ಚೆಟ್ಟಳ್ಳಿ ಬಳಿಯ ಚೇರಳ ಶ್ರೀಮಂಗಲ ಬಳಿಯ ನಿವಾಸಿ ಬಿ.ಎ.ರಘು ಎಂಬವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ರಘುರವರ ಮಗ ಹತ್ತನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಕಾರಣಕ್ಕೆ ಜುಗುಪ್ಸೆಗೊಂಡು ರಘುರವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 24/08/2020ರಂದು ಮಡಿಕೇರಿ ನಿವಾಸಿ ದಿಗ್ವಿಜಯ್ ಎಂಬವರು ಅವರ ಕಾರಿನಲ್ಲಿ ಕುಟುಂಬದೊಂದಿಗೆ ಮೈಸೂರಿನಿಂದ ಮಡಿಕೇರಿಗೆ ಬರುತ್ತಿರುವಾಗ ಇಬ್ನಿವಳವಾಡಿ ಗ್ರಾಮದ ಸಿಂಕೋನ ತೋಟದ ಬಳಿ ಮಡಿಕೇರಿ ಕಡೆಯಿಂದ ಒಂದು ಪಿಕ್‍ಅಪ್ ವಾಹನವನ್ನು ಅದರ ಚಾಲಕ ಕಾಶಿ ಯಾನೆ ಕಾವೇರಪ್ಪ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಳಿಸಿದ ಪರಿಣಾಮ ದಿಗ್ವಿಜಯ್‍ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರನಿಲ್ಲಿದ್ದ ದಿಗ್ವಿಜಯ್ ಅವರ ಪತ್ನಿ ಮತ್ತು ಮಗನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ವ್ಯಕ್ತಿ ಆತ್ಮಹತ್ಯೆ

ದಿನಾಂಕ 23/08/2020ರಂದು ಪೊನ್ನಂಪೇಟೆ ಬಳಿಯ ಬೇಗೂರು ಗ್ರಾಮದ ಚೀನಿವಾಡ ನಿವಾಸಿ ಬಾಬು ಎಂಬವರು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 24/08/2020ರಂದು ಗೋಣಿಕೊಪ್ಪ ನಗರದ ನಿವಾಸಿ ನಾಗೇಶ ಎಂಬವರೊಂದಿಗೆ ಅವರಿಗೆ ಪರಿಚಯವಿರುವ ಚೆನ್ನರಾಜು ಎಂಬವರು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಬೆಂಕಿ ಆಕಸ್ಮಿಕ, ಮಹಿಳೆ ಸಾವು

ದಿನಾಂಕ 18/08/2020ರಂದು ಸೋಮವಾರಪೇಟೆ ಬಳಿಯ ತಲ್ತರೆಶೆಟ್ಟಳ್ಳಿ ನಿವಾಸಿ ಚಂದ್ರಕಲಾ ಎಂಬವರು ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟ ಗಾಯಗಳೊಂದಿಗೆ ಮೈಸೂರಿನ ಕೆ.ಆರ್. ಆಶ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 24/08/2020ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ವ್ಯಕ್ತಿ ಆತ್ಮಹತ್ಯೆ

ದಿನಾಂಕ 24/08/2020ರಂದು ಕುಶಾಲನಗರದ ಬ್ಯಾಡಗೊಟ್ಟ ನಿವಾಸಿ ಸಂಜು ಎಂಬವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಪತ್ನಿ ದೂರು ನೀಡಿದ್ದು ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಣ ವಂಚನೆ ಪ್ರಕರಣ

ಕಡಂಗ ಬಳಿಯ ಅರಪಟ್ಟು ನಿವಾಸಿ ಶರ್ಮಿಳಾ ಎಂಬವರಿಗೆ ದಿನಾಂಕ 17/08/2020ರಂದು ಒಂದು ಪಾರ್ಸೆಲ್ ಬಂದಿದ್ದು ಅದರಲ್ಲಿ ಶರ್ಮಿಳಾರವರು ನಾಪ್‍ತಾಲ್ ಕಂಪೆನಿಯ ರೂ. 12 ಲಕ್ಷ ಬಹುಮಾನ ಬಂದಿದ್ದು ಅದನ್ನು ಪಡೆಯಲು ಅದರಲ್ಲಿನ ಮೊಬೈಲ್ ಸಂಖ್ಯೆಗೆ ಕರೆ ಮಾಡುವಂತೆ ತಿಳಿಸಿದ್ದು ಅದರಂತೆ ಶರ್ಮಿಳಾರವರು ಆ ಮೋಬೈಲಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ವ್ಯಕ್ತಿಯು ವಿವಿಧ ಕಾರಣಗಳನ್ನು ನೀಡಿ ಶರ್ಮಿಳಾರವರಿಂದ ಸುಮಾರು ರೂ. 75,000/- ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಂಡು ನಂತರ ಯಾವುದೇ ಬಹುಮಾನ ನೀಡದೆ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿಯ ಸಿಇಎನ್ ಠಾಣೆಯ ಪೊಲೀಸರು ಪ್ರಕರಣ ದಾಖಲಸಿ ತನಿಖೆ ಕೈಗೊಂಡಿದ್ದಾರೆ.

 

ಹಣ ವಂಚನೆ

ಕುಶಾಲನಗರದ ತ್ಯಾಗರಾಜ ರಸ್ತೆ ನಿವಾಸಿ  ಆರ್‍.ಕೆ. ನಾಗೇಂದ್ರ ಎಂಬವರಿಗೆ ಯಾರೋ ಅಪರಿಚಿತ ವ್ಯಕ್ತಿಗಳು ದೂರವಾಣಿ ಕರೆಮಾಡಿ ಅವರ ಆಕ್ಸಿಸ್ ಬ್ಯಾಂಕಿ ಕಾರ್ಡ್ ಬ್ಲಾಕ್‍ ಆಗಿದ್ದು ಅದನ್ನು ಚಾಲನೆಗೊಳಿಸಬೇಕಾಗಿ ನಂಬಿಸಿ ವಿವಿಧ ಒಟಿಪಿ ಗಳನ್ನು ಪಡೆದುಕೊಂಡು ನಾಗೇಂದ್ರರವರ ಖಾತೆಯಿಂದ ಸುಮಾರು ರೂ. 43,839/- ಹಣವನ್ನು ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿಯ ಸಿಇಎನ್ ಠಾಣೆಯ ಪೊಲೀಸರು ಪ್ರಕರಣ ದಾಖಲಸಿ ತನಿಖೆ ಕೈಗೊಂಡಿದ್ದಾರೆ.