Crime News

ಆನ್‍ ಲೈನ್‍ ವಂಚನೆ ಪ್ರಕರಣ

ವಿರಾಜಪೇಟೆ ತಾಲ್ಲೂಕು ಕೊಟ್ಟೋಳಿ ಗ್ರಾಮದ ನಿವಾಸಿ ಬೋಪಣ್ಣ ಎಂಬುವವರ ಅರಿವಿಗೆ ಬಾರದಂತೆ ಅವರ ಎಸ್‍.ಬಿ.ಐ ಬ್ಯಾಂಕ್ ಖಾತೆಯಿಂದ ಯಾರೋ ಅಪರಿಚಿತರು ದಿನಾಂಕ: 23-04-2020 ರಿಂದ ಹಂತ ಹಂತವಾಗಿ 1,91,220 ರೂ ಹಣವನ್ನು ಡ್ರಾ ಮಾಡಿ ವಂಚನೆ ಮಾಡಿದ್ದು ಈ ಬಗ್ಗೆ ದಿನಾಂಕ: 26-08-2020 ರಂದು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್‍ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಫಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

ದಿನಾಂಕ: 19-08-2020 ರಂದು ವಿರಾಜಪೇಟೆ ತಾಲ್ಲೂಕು ನಿಟ್ಟೂರು ಗ್ರಾಮದ ನಿವಾಸಿ ಮಾಚಯ್ಯ ಎಂಬುವವರು ಕೆಎ-12-ಆರ್‍-5209 ರ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಗಾಯಗೊಂಡು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 25-08-2020 ರಂದು ಮೃತಪಟ್ಟಿದ್ದು ಈ ಬಗ್ಗೆ ಗಣಪತಿ ಎಂಬುವವರು ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ.

ದಿನಾಂಕ: 25-08-2020 ರಂದು ಸೋಮವಾರಪೇಟೆ ಉಪವಲಯ ಅರಣ್ಯಾಧಿಕಾರಿ ಚಂದ್ರೇಶ್‍ ಎಂಬುವವರಿಗೆ ದೊರೆತ ಖಚಿತ ಮಾಹಿತಿ ಮೇರೆ ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿಯವರಾದ ಲೋಕೇಶ್‍, ಪ್ರಸಾದ್‍, ತಿಮ್ಮಯ್ಯ ಮತ್ತು ನಂದೀಶ್ ಎಂಬುವವರೊಂದಿಗೆ ಕಾಜೂರು ಗ್ರಾಮದ ನಿವಾಸಿ ವಸಂತ @ರುದ್ರ ಎಂಬುವವರ ಮನೆಯ ಬಳಿ ಪರಿಶೀಲನೆಗೆ ತೆರಳಿದಾಗ ವನ್ಯಪ್ರಾಣಿ ಕಾಡುಹಂದಿಯನ್ನು ಬೇಟೆಯಾಡಿ ಕೊಂದು ಮಾಂಸ ಮಾಡಿ ಪಾತ್ರೆಯಲ್ಲಿ ಬೇಯಿಸಿಟ್ಟಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ಪರಿಶೀಲನೆ ಮಾಡುತ್ತಿರುವಾಗ ವಸಂತ @ ರುದ್ರ ರವರು ಏಕಾಏಕಿ ಅವಾಚ್ಯ ಪದಗಳಿಂದ ಬೈದು ಕತ್ತಿಯಿಂದ ಸಿಬ್ಬಂದಿಯವರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿ ಇಲಾಖಾ ಜೀಪಿಗೆ ಕಲ್ಲಿನಿಂದ ಹೊಡೆದು ಜಕಂ ಗೊಳಿಸಿ ಗಾಜುಗಳನ್ನು ಒಡೆದುಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

ದಿನಾಂಕ: 26-08-2020 ರಂದು ಸೋಮವಾರಪೇಟೆ ತಾಲ್ಲೂಕು ಮಾದಾಪುರ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಒಂದು ಟಾಟಾ ಏಸ್ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಎಉ ಹೋಗಿ ಕೆಎ-12-ಎ-4920 ರ ಆಟೋರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ಆಟೋ ರಕ್ಷಾ ರಸ್ತೆಯಲ್ಲಿ ಮಗುಚಿಬಿದ್ದ ಪರಿಣಾಮ ಪ್ರಯಾಣಿಕರಾದ ಅರ್ಜುನ್‍, ಜರೀನ, ಯಾಸ್ಮಿನ್‍ ಎಂಬುವವರು ಗಾಯಗೊಂಡಿರುತ್ತಾರೆ. ಡಿಕ್ಕಿಪಡಿಸಿದ ನಂತರ ಚಾಲಕ ಟಾಟಾ ಏಸ್‍ ವಾಹನವನ್ನು ನಿಲ್ಲಿಸದೇ ಹೋಗಿದ್ದು ಈ ಬಗ್ಗೆ ಆಟೋ ಚಾಲಕ ಶೇಖ್ರು ಹೇಸ್‍ ಎಂಬುವವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ