Crime News

ಅಪಘಾತ ಪ್ರಕರಣ

ದಿನಾಂಕ 18-06-018 ಜಾನ್ ಫಿಂಟೋ ಎಂಬುವವರು ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಚಾಲನೆ ಮಾಡಿಕೊಂಡು ಮಂಗಳೂರಿನಿಂದ ಮಡಿಕೇರಿಗೆ ಬರುತ್ತಿರುವಾಗ ಜೋಡುಪಾಲ ಬಳಿಯ ಅಬ್ಬಿಕೊಲ್ಲಿ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಕಾರನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿ ಪಡಿಸಿದ ಪರಿಣಾಮ ಕಾರು ಹಾಗೂ ಬಸ್ಸು ಜಖಂಗೊಂಡು ಕಾರಿನ ಚಾಲಕನಿಗೆ ಗಾಯವಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಟೋರಿಕ್ಷಾ ಅಪಘಾತ

ದಿನಾಂಕ 19-06-2018 ರಂದು ಸೋಮವಾರಪೇಟೆ ತಾಲೂಕಿನ ಚೇರಳ ಶ್ರೀಮಂಗಲ ಗ್ರಾಮದ ಕಂಡಕರೆಯ ನಿವಾಸಿಗಳಾದ  ಐಶಾಭಿ, ಫಾತಿಮ, ದೇವಕ್ಕಿ, ತಂಗಮ್ಮ ಮತ್ತು ಯಶೋಧರವರು ಅಭ್ಯಾಲಕ್ಕೆ ಕೆಲಸಕ್ಕೆ ಹೋಗಿದ್ದವರು ವಾಪಾಸ್ಸು ಆಟೋರಿಕ್ಷಾದಲ್ಲಿ ಬರುತ್ತಿರುವಾಗ ಪೊನ್ನತ್ ಮೊಟ್ಟೆ ಎಂಬಲ್ಲಿಗೆ ತಲುಪುವಾಗ ಆಟೋರಿಕ್ಷಾವನ್ನು ಚಾಲಕ ಜಗತ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ಆಟೋದಲ್ಲಿದ್ದವರಿಗೆ ಗಾಯಗಳಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಾಹನದ ಮೇಲೆ ಮರ ಬಿದ್ದು ವ್ಯಕ್ತಿಯ ದುರ್ಮರಣ

ದಿನಾಂಕ 19-06-2018 ರಂದು ಹುಣಸೂರು ತಾಲೂಕಿನ ಚೆಟ್ಟಳ್ಳಿ ಹಾಡಿಯ ನಿವಾಸಿಗಳಾದ ರಾಮು, ರಾಜು, ಸುನಿಲ್, ಬೋಜ, ಕಾಳಪ್ಪ, ಲೋಕೇಶ್, ಅಣ್ಣಯ್ಯ ಮತ್ತು ಇತರರು ಟಾಟಾ ಏಸ್ ವಾಹನದಲ್ಲಿ ಪಾಲಿಬೆಟ್ಟದ ದುಬಾರೆ ಕಾಫಿ ತೋಟಕ್ಕೆ ಕೂಲಿ ಕೆಲಸಕ್ಕೆ ಬಂದವರು ಕೆಲಸ ಮುಗಿಸಿ ವಾಪಾಸ್ಸು ಪಾಲಿಬೆಟ್ಟದ ತಿತಿಮತಿ ರಸ್ತೆಯಲ್ಲಿ ಹೋಗುತ್ತಿರುವಾಗ ವಾಹನದ ಮೇಲೆ ರಸ್ತೆಯ ಬದಿಯಲ್ಲಿದ್ದ  ಮರ ಬಿದ್ದ ಪರಿಣಾಮ ವಾಹನ ಜಖಂಗೊಂಡು ರಾಜುರವರಿಗೆ ತೀವ್ರ ತರಹದ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದು ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ; ವ್ಯಕ್ತಿಯ ದುರ್ಮರಣ

ದಿನಾಂಕ 18-06-2018 ರಂದು ವಿರಾಜಪೇಟೆ ತಾಲೂಕಿನ ಈಸ್ಟ್ ನೆಮ್ಮಲೆ ಗ್ರಾಮದ ನಿವಾಸಿಯಾದ ಕುಪ್ಪಣಮಾಡ ಗಣೇಶ್ ಎಂಬುವವರು ಪೊನ್ನಂಪೇಟೆಯ ಬಾಲಕಿಯರ ವಸತಿ ನಿಲಯದ ಮುಂದಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾವುದೋ ವಾಹನ ಡಿಕ್ಕಿಪಡಿಸಿ ನಿಲ್ಲಿಸದೇ ಹೋಗಿದ್ದು, ಗಣೇಶರವರ ತಲೆಗೆ ತೀವ್ರ ತರಹದ ಗಾಯವಾದ ಕಾರಣ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮೈಸೂರಿಗೆ ಕರೆದುಕೊಂಡು ಹೋಗುತ್ತಿರುವಾಗ ಮೃತಪಟ್ಟಿದ್ದು ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈಜಲು ಹೋಗಿ ವ್ಯಕ್ತಿಯ ಸಾವು

ದಿನಾಂಕ 19-06-2018 ರಂದು ವಿರಾಜಪೇಟೆ ತಾಲೂಕಿನ ಕೆ. ಬಾಡಗ ಗ್ರಾಮದ ನಿವಾಸಿಗಳಾದ ಪಣಿಯರವರ ಗಂಗೆಯವರು ಗಂಡ ಸುರೇಶ ಮತ್ತು ಮಕ್ಕಳೊಂದಿಗೆ ಅದೇ ಗ್ರಾಮದಲ್ಲಿ ವಾಸವಿರುವ ಮಾವ ಚಮಯರವರಲ್ಲಿಗೆ ಹೋಗಿದ್ದು, ಊಟ ಆದ ನಂತರ ಪಕ್ಕದಲ್ಲಿಯೇ ಇದ್ದ ಕೆರೆಯಲ್ಲಿ ಗಂಗೆಯವರು ಬಟ್ಟೆ ತೊಳೆಯುತ್ತಿರುವಾಗ ಸುರೇಶರವರು ಈಜುತ್ತಾ ಕೆರೆಯ ಮದ್ಯಕ್ಕೆ ಹೋದವರು ಮುಳುಗಿ ಮೃತಪಟ್ಟಿದ್ದು ಈ ಬಗ್ಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ವ್ಯಕ್ತಿಯ ದುರ್ಮರಣ

ದಿನಾಂಕ 18-06-2018 ರಂದು ಸುಂಟಿಕೊಪ್ಪದ ನಾಕೂರು ಶಿರಂಗಾಲ ಗ್ರಾಮದ ನಿವಾಸಿಯಾದ ಆನಂದ ಎಂಬುವವರು ತನ್ನ ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ ಶಾಂತಿಗಿರಿ ಕ್ರಾಸ್ ತಲುಪುವಾಗ ಎದುರುಗಡೆಯಿಂದ ಬಂದ ಕಾರನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಆನಂದರವರಿಗೆ ತೀವ್ರ ತರಹದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದವರು ದಿನಾಂಕ 19-06-2018 ರಂದು ಮೃತಪಟ್ಟಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಮೇಲೆ ಹಲ್ಲೆ

ದಿನಾಂಕ 18-06-2018 ರಂದು ಶನಿವಾರಸಂತೆಯ ವಿನಾಯಕ ನಗರದ ನಿವಾಸಿಯಾದ ಲೋಕೇಶರವರು ಶನಿವಾರಸಂತೆಯ ವಿನಾಯಕ ಬಾರ್ ನಲ್ಲಿ ಮನು ಮತ್ತು ಪ್ರದೀಪರವರೊಂದಿಗೆ ಮದ್ಯ ಕುಡಿಯುತ್ತಾ ಇರುವಾಗ ಲೋಕೇಶರವರ ಮನೆಗೆ ಪೇಯಿಂಟ್ ಮಾಡುವ ವಿಚಾರದಲ್ಲಿ ಜಗಳವಾಗಿ ಮನು ಮತ್ತು ಪ್ರದೀಪರವರು ಲೋಕೇಶರವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಲೋಕೇಶರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಾಲುಜಾರಿ ಬಿದ್ದು ಗಾಯಗೊಂಡ ವ್ಯಕ್ತಿಯ ಮರಣ

ಕುಶಾಲನಗರ ನಿವಾಸಿ 70 ವರ್ಷ ಪ್ರಾಯದ ನಾರಾಯಣ ಗೌಡ ಎಂಬುವವರು ಸುಮಾರು 10 ತಿಂಗಳ ಹಿಂದೆ ಕೂಡ್ಲೂರು ಗ್ರಾಮದಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡವರು ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ದಿನಾಂಕ 17-06-2018 ರಂದು ಮೃತಪಟ್ಟಿದ್ದು  ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ.