Crime News

ಕೊಡಗು ಜಿಲ್ಲೆಯ ವಿವಿಧ ಭಾಗಗಳಿಗೆ ಅತ್ಯಾಧುನಿಕ ಮಾದಕ ವಸ್ತುಗಳನ್ನು ಸರಬರಾಜು ಮಾಡಲು ಹೊಂಚು ಹಾಕುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ.

ದಿನಾಂಕ: 28-08-2020 ರಂದು ಮಡಿಕೇರಿ ಗ್ರಾಮಾಂತರ ಪಿ.ಎಸ್.ಐ. ರವರ ನೇತೃತ್ವದ ತಂಡ ಮಾದಕ ವಸ್ತು ಸರಬರಾಜಿನ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವ ವೇಳೆಗೆ ಟಾಟಾ ಇಂಡಿಕಾ ಕಾರು ನಂ : ಕೆ.ಎ.50-9941 ನ್ನು ಮತ್ತು ಮಾರುತಿ ಸ್ವಿಫ್ಟ್ ವಾಹನವನ್ನು ತಡೆದು ಪರಿಶೀಲಿಸುತ್ತಿರುವ ವೇಳೆ ಎರಡು ವಾಹನದಲ್ಲಿದ್ದಆರೋಪಿಗಳು ಓಡಿ ಹೋಗಲು ಪ್ರಯತ್ನಿಸಿದ್ದು, ಅವರುಗಳ ಪೈಕಿ ಟಾಟಾ ಇಂಡಿಕಾ ಕಾರಿನಲ್ಲಿದ್ದ ಮೂರು ಜನ  ಆರೋಪಿಗಳನ್ನು ವಶಕ್ಕೆ ಪಡೆದು ಆರೋಪಿಗಳಿಂದ ಸುಮಾರು 300 ಗ್ರಾಂ ನಷ್ಟು ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಡಿಕೇರಿ

ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

.

ದಸ್ತಗಿರಿ ಮಾಡಲಾದ ಆರೋಪಿಗಳ ವಿವರ.

  1. ಮಜೀದ್,ಅಯ್ಯಂಗೇರಿ ಗ್ರಾಮ, ಕೊಡಗು ಜಿಲ್ಲೆ.
  2. ಶಿಯಾಬುದ್ದೀನ್, ಅಯ್ಯಂಗೇರಿ ಗ್ರಾಮ, ಕೊಡಗು ಜಿಲ್ಲೆ.
  3. ಮುಜಾಮಿಲ್, ಶಿವಾಜಿನಗರ, ಬೆಂಗಳೂರು.

 

ಈ ಕಾರ್ಯಾಚರಣೆಯಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆಯ ಪಿ.ಎಸ್.ಐ. ಚಂದ್ರ ಶೇಖರ್ ಇವರ ನೇತೃತ್ವದಲ್ಲಿ ಕೊಡಗು ಜಿಲ್ಲಾ ಪೊಲೀಸ್ ಅಪರಾಧ ಪತ್ತೆ

ದಳದ ಹಮೀದ್, ಎ.ಎಸ್.ಐ, ವೆಂಕಟೇಶ್, ಯೋಗೇಶ್ ಕುಮಾರ್ , ನಿರಂಜನ್, ವಸಂತ, ಅನಿಲ್ ಕುಮಾರ್, ಶರತ್, ಶಶಿಕುಮಾರ್, ಮಡಿಕೇರಿ ಗ್ರಾಮಾಂತರ

ಠಾಣೆಯ ದಿನೇಶ್, ಮಡಿಕೇರಿ ನಗರ ಠಾಣೆಯ ಪ್ರವೀಣ್, ಮತ್ತು ಸಿ.ಡಿ.ಆರ್. ಸೆಲ್ನ ರಾಜೇಶ್ ರವರು ಪಾಲ್ಗೊಂಡಿದ್ದು, ಈ ಪ್ರಕರಣವನ್ನು ಪತ್ತೆ ಹಚಿದ್ಚ  ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂಧಿಯವರ ಕಾರ್ಯವನ್ನು ಶ್ಲಾಗಿಸಲಾಗಿದೆ.

 

ಕೊಡಗು ಜಿಲ್ಲೆಗೆ ಹೊರ ಜಿಲ್ಲೆ, ಹೊರರಾಜ್ಯದಿಂದ ಗಾಂಜಾ ಮತ್ತು ಇತರೆ ಮಾದಕ ವಸ್ತುಗಳು ಸರಬರಾಜು ಆಗುತ್ತಿರುವ ಬಗ್ಗೆ ಮಾಹಿತಿ ಇದ್ದು, ಕೊಡಗಿನ ಯುವಕರು ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸ್‍ ಇಲಾಖೆಗೆ ಗೌಪ್ಯವಾಗಿ ಮಾದಕ ವಸ್ತುಗಳ ಸರಬರಾಜಿನ ಬಗ್ಗೆ, ಮಾರಾಟದ ಬಗ್ಗೆ ಮಾಹಿತಿ ನೀಡಲು ಕೋರಿದೆ.