Crime News

ಹಲ್ಲೆ ಪ್ರಕರಣ

ದಿನಾಂಕ 30/08/2020ರಂದು ಗೋಣಿಕೊಪ್ಪ ಬಳಿಯ ಈಚೂರು ಗ್ರಾಮದ ನಿವಾಸಿ ವಿ.ಆರ್.ಪಾರ್ವತಿ ಎಂಬವರ ತೋಟದೊಳಕ್ಕೆ ಅದೇ ಗ್ರಾಮದ ಸಣ್ಣಪ್ಪ ಮತ್ತು ಸೋಮಣ್ಣ ಎಂಬವರುಗಳು ಅಕ್ರಮವಾಗಿ ಪ್ರವೇಶಿಸಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಕೈಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.