Crime News

ಕೊಲೆ ಪ್ರಕರಣ

ದಿನಾಂಕ 31/08/2020ರಂದು ರಾತ್ರಿ ವೇಳೆ ಕುಟ್ಟ ಬಳಿಯ ನಾಣಚ್ಚಿ ಗ್ರಾಮದ ಚಂದನಕೆರೆ ಹಾಡಿಯ ನಿವಾಸಿ ಪಣಿ ಎರವರ ಚಿಣ್ಣ ಎಂಬವರೊಂದಿಗೆ ಅದೇ ಹಾಡಿಯ ನಿವಾಸಿ ಬಾಬು ಎಂಬವರು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿದ್ದು ಗಂಭೀರವಾಗಿ ಗಾಯಗೊಂಡ ಚಿಣ್ಣರವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯೆ ಮೃತರಾಗಿರುವುದಾಗಿ ದೂರು ನೀಡಿದ್ದು ಅದೇ ರೀತಿ ಮೃತ ಪಣಿ ಎರವರ ಚಿಣ್ಣರವರು ಬಾಬುರವರೊಂದಿಗೆ ಜಗಳವಾಡಿ ಕತ್ತಿಯಿಂದ ಬಾಬುರವರ ಮೇಲೆ ಕಡಿದು ಹಲ್ಲೆ ಮಾಡಿ ಕೊಲೆ ಯತ್ನ ಮಾಡಿರುವುದಾಗಿ ಬಾಭುರವರ ಪತ್ನಿ ಸರಿತ ಎಂಬವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಎರಡೂ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ವ್ಯಕ್ತಿ ಕಾಣೆ ಪ್ರಕರಣ

ಪೊನ್ನಂಪೇಟೆ ಬಳಿಯ ಬೆಕ್ಕೆಸೊಡ್ಲೂರು ಗ್ರಾಮದ ನಿವಾಸಿ ಸುಬ್ರಮಣಿ ಎಂಬವರು ದಿನಾಂಕ 30/08/2020ರಂದು ಪೊನ್ನಂಪೇಟೆಯ ಪೆಟ್ರೋಲ್ ಬಂಕಿನಲ್ಲಿ ಕೆಲಸಕ್ಕೆಂದು ಹೋಗಿದ್ದು ಮರಳಿ ಮನೆಗೆ ಬಾರದೇ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ; ಇಬ್ಬರ ಸಾವು

ದಿನಾಂಕ 01/09/2020ರಂದು ವಿರಾಜಪೇಟೆ ಬಳಿಯ ಬೇಟೋಳಿ ಗ್ರಾಮದ ರಾಮನಗರ ನಿವಾಸಿ ಭರತ್ ಎಂಬವರು ಅವರ ಸ್ನೇಹಿತ ಶಿವು ಎಂಬವರನ್ನು ಕರೆದುಕೊಂಡು ಅವರ ಬೈಕಿನಲ್ಲಿ ವಿರಾಜಪೇಟೆಯಿಂದ ಮನೆಗೆ ಬರುತ್ತಿರುವಾಗ ರಾಮನಗರದ ಬಳಿ ರಾಮನಗರ ಕಡೆಯಿಂದ ಕೆಎ-12-ಬಿ-7470 ರ ಟಿಪ್ಪರ್ ಲಾರಿಯನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಭರತ್‍ರವರ ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಗಂಭೀರ ಗಾಯಗೊಂಡ ಭರತ್ ಹಾಗೂ ಶಿವುರವರು ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ಧಾರೆ.