Crime News

ಹಲ್ಲೆ ಪ್ರಕರಣ

ದಿನಾಂಕ 30/08/2020ರಂದು ಸೋಮವಾರಪೇಟೆ ಬಳಿಯ ಚೌಡ್ಲು ಗ್ರಾಮದ ನಿವಾಸಿ ಹರ್ಷ ಬವರಿಗೆ ತಲ್ತರೆ ಶೆಟ್ಟಳ್ಳಿ ಗ್ರಾಮದ ನಿವಾಸಿಗಳಾದ ದರ್ಶನ್ ಮತ್ತು ಕೀರ್ತಿ ಎಂಬವರು ಹಳೆ ವೈಷಮ್ಯದಿಂದ ಸೋಮವಾರಪೇಟೆ ನಗರದ ಶಫಾಲಿ ಬಾರ್ ಬಳಿ ಜಗಳವಾಡಿ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ದಿನಾಂಕ 02/09/2020ರಂದು ಸೋಮವಾರಪೇಟೆ ಬಳಿಯ ಬಿಳಿಗೇರಿ ಗ್ರಾಮದ ಪಣಿ ಎರವರ ಮುತ್ತ ಎಂಬವರು ಮನೆಯ ಬಾಗಿಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಮುತ್ತ ವಿಪರೀತ ಮದ್ಯವ್ಯಸನಿಯಾಗಿದ್ದು ಮದ್ಯಪಾನವನ್ನು ತ್ಯಜಿಸುವಂತೆ ಬುದ್ದಿ ಹೇಳಿದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ನೀಡಲಾದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಅಕ್ರಮ ಗಾಂಜಾ ಕೃಷಿ ಪತ್ತೆ

ಕುಶಾಲನಗರ ಬಳಿಯ ಮಾದಾಪಟ್ನ ಗ್ರಾಮದ ಗಫೂರ್ ಎಂಬವರ ಹೊಲದಲ್ಲಿ ನಾಗಣ್ಣ ಎಂಬವರು ಅಕ್ರಮವಾಗಿ ಬೆಳೆದಿದ್ದ ಸುಮಾರು ಐದು ಕೆ.ಜೆ.ಗಳಷ್ಟು ಹಸಿ ಗಾಂಜಾ ಗಿಡಗಳನ್ನು ದಿನಾಂಕ 03/09/2020ರಂದು ಕುಶಾಲನಗರ ಪಟ್ಟಣ ಠಾಣೆಯ ಪಿಎಸ್‍ಐ ಗಣೇಶ್‍ ನೇತೃತ್ವದ ತಂಡವು ಪತ್ತೆ ಹಚ್ಚಿ ನಾಗಣ್ಣನವರನ್ನು ಬಂಧಿಸಿ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಅಕ್ರಮ ಮದ್ಯ ಮಾರಾಟ

ದಿನಾಂಕ 03/09/2020ರಂದು ಶನಿವಾರಸಂತೆ ಬಳಿಯ ಗಂಗಾವರ ಗ್ರಾಮದ ಸಾರ್ವಜನಿಕ ಬಸ್‍ ತಂಗುದಾಣದ ಬಳಿ ಓರ್ವ ವ್ಯಕ್ತಿಯು ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಶನಿವಾರಸಂತೆ ಠಾಣೆಯ ಪಿಎಸ್‍ಐ ಹೆಚ್‍.ಈ.ದೇವರಾಜುರವರು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಅಕ್ರಮವಾಗಿ ಮದ್ಯ ಕುಡಿಯಲು ಅನುವು ಮಾಡಿಕೊಡುತ್ತಿದ್ದ ಗಂಗಾವರ ನಿವಾಸಿ ಜಿ.ಆರ್. ಷಣ್ಮುಗ ಎಂಬಾತನನ್ನು ಬಂಧಿಸಿ ಆತನಿಂದ 8 ಟೆಟ್ರಾ ಪ್ಯಾಕೆಟುಗಳಷ್ಟು ಮದ್ಯವನ್ನು ವಶಪಡಿಸಿಕೊಂಡು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹುಲ್ಲಿನ ರಾಶಿ ಬಿದ್ದು ವ್ಯಕ್ತಿ ಸಾವು

ದಿನಾಂಕ 02/09/2020ರಂದು ವಿರಾಜಪೇಟೆ ಬಳಿಯ ರುದ್ರಗುಪ್ಪೆ ಗ್ರಾಮದ ನಿವಾಸಿ ರವಿ ಎಂಬವರ ಮನೆಗೆ ಅತಿಥಿಯಾಗಿ ಬಂದಿದ್ದ ಜೇನುಕುರುಬರ ವಿನು ಎಂಬವರು ರಾತ್ರಿ ವೇಳೆ ವಿಪರೀತ ಮದ್ಯಪಾನ ಮಾಡಿ ಅಂಗಳದಲ್ಲಿದ್ದ ಭತ್ತದ ಹುಲ್ಲಿನ ರಾಶಿಯ ಬುಡದಲ್ಲಿ ಮಲಗಿದ್ದು ರಾತ್ರಿ ವೇಳೆ ವಿಪರೀತ ಮಳೆ ಮತ್ತು ಗಾಳಿಯ ಪರಿಣಾಮ ಹುಲ್ಲಿನ ರಾಶಿಯು ಮಲಗಿದ್ದ ವಿನುರವರ ಮೇಲೆ ಬಿದ್ದು ವಿನುರವರು ಉಸಿರುಗಟ್ಟಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 02/09/2020ರಂದು ಪೊನ್ನಂಪೇಟೆ ನಿವಾಶಿ ಕೆ.ಎಂ.ಸರ ಚಂಗಪ್ಪ ಎಂಬವರು ಪೊನ್ನಂಪೇಟೆಯ ಬಸ್ ನಿಲ್ದಾಣದ ಬಳಿ ಇರುವ ಔಷದಿ ಅಂಗಡಿಯ ಬಳಿ ನಿಂತುಕೊಂಡಿರುವಾಗ ಕಾನೂರು ಕಡೆಯಿಂದ ದು ಸ್ಕೂಟರನ್ನು ಅದರ ಸವಾರ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸರ ಚಂಗಪ್ಪನವರಿಗೆ ಡಿಕ್ಕಿಪಡಿಸಿ ನಿಲ್ಲಿಸದೇ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 03/09/2020ರಂದು ವಿರಾಜಪೇಟೆ ಬಳಿಯ ಕುಟ್ಟಂದಿ ನಿವಾಸಿ ಲವ ಬವರು ಅವರ ಸ್ನೇಹಿತರೊಂದಿಗೆ ತಿತಿಮತಿಯ ಮದ್ಯದಂಗಡಿಯೊಂದರಲ್ಲಿ ಮದ್ಯಪಾನ ಮಾಡುತ್ತಿರುವಾಗ ಅಲ್ಲಿಗೆ ತಿತಿಮತಿ ಗ್ರಾಮದ ನಾಗೇಶ, ಪುನೀತ, ಕುಟ್ಟ ಮತ್ತು ಆನಂದ ಎಂಬವರು ಬಂದು ಹಳೆ ವೈಷಮ್ಯದಿಂದ ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.