Crime News

ಮಹಿಳೆ ಆತ್ಮಹತ್ಯೆ

ದಿನಾಂಕ 09/09/2020ರ ರಾತ್ರಿ ವೇಳೆ ಹುದಿಕೇರಿ ಬಳಿಯ ಹೈಸೊಡ್ಲೂರು ನಿವಾಸಿ ಕೆ.ಪಿ.ಬೋಪಣ್ಣ ಎಂಬವರ ಪತ್ನಿ ಭಾರತಿ ಎಂಬವರು ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಮೃತೆ ಭಾರತಿರವರು ದೀರ್ಘ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಈ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ವ್ಯಕ್ತಿ ಕಾಣೆ ಪ್ರಕರಣ

ದಿನಾಂಕ 09/09/2020ರಂದು ಸೋಮವಾರಪೇಟೆ ನಗರದ ವಲ್ಲಭಭಾಯಿ ರಸ್ತೆಯ ನಿವಾಸಿ ಮದನ್‍ ಎಂಬವರು ಅವರ ಬೈಕನ್ನು ದುರಸ್ಥಿಗೊಳಿಸಲು ಮೆಕ್ಯಾನಿಕ್‍ ಒಬ್ಬರನ್ನು ಕರೆದುಕೊಂಡು ಬರುವುದಾಗಿ ತಾಯಿಗೆ ಹೇಳಿ ಮನೆಯಿಂದ ಹೋಗಿದ್ದು ಇದುವರೆಗೂ ಮನೆಗೆ ಮರಳಿ ಬಾರದೆ ಕಾಣೆಯಾಗಿರುತ್ತಾರೆಂದು ನೀಡಲಾದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ ಪ್ರಕರಣ

ದಿನಾಂಕ 10/09/2020ರಂದು ಚಿಕ್ಕಮಗಳೂರಿನ ಮೂಡಿಗೆರೆ ಬಳಿಯ ಬಣಕಲ್ ನಿವಾಸಿ ಕೆ.ಟಿ.ಜಗದೀಶ್ ಎಂಬವರು ಸೋಮವಾರಪೇಟೆ ಬಳಿಯ ತಾಕೇರಿ ಗ್ರಾಮಕ್ಕೆ ಕುಟುಂಬದೊಂದಿಗೆ ಅವರ ಕಾರಿನಲ್ಲಿ ಬಂದು ಮರಳಿ ಹೋಗುತ್ತಿರುವಾಗ ಕಿಬ್ಬೆಟ್ಟ ಗ್ರಾಮದ ಬಳಿ ಶನಿವಾರಸಂತೆ ಕಡೆಯಿಂದ ಒಂದು ಬೈಕನ್ನು ಅದರ ಸವಾರ ಪ್ರದೀಪ್ ಎಂಬವರು ಆತಿ ವೇಗ ಮತ್ತು ಅಜಾಗರೂಕತೆಯಿಂಧ ಚಾಲಿಸಿಕೊಂಡು ಬಂದು ಜಗದೀಶ್‍ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಮತ್ತು ಬೈಕಿಗೆ ಹಾನಿಯುಂಟಾಗಿ ಬೈಕ್ ಸವಾರನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 10/09/2020ರಂದು ತಮಿಳುನಾಡಿನ ವೆಲ್ಲೂರಿನ ವಿರುಧಾನಗರ ನಿವಾಸಿ ಈಶ್ವರನ್ ಎಂಬವರು ದು ಲಾರಿಯನ್ನು ಚಾಲಿಸಿಕೊಂಡು ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿರುವಾಗ ಕೆದಕಲ್ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಕಾರನ್ನು ಅದರ ಚಾಲಕ ರಾಜು ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಮದು ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ರಾಜುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಅಪರಿಚಿತ ಶವ ಪತ್ತೆ

ದಿನಾಂಕ 10/09/2020ರಂದು ಭಾಗಮಂಡಲ ಬಳಿಯ ಕೋರಂಗಾಲ ಗ್ರಾಮದ ನಿವಾಸಿ ಎನ್‍.ಎನ್. ಹೇಮರಾಜು ಎಂಬವರು ಗದ್ದೆ ಕೆಲಸಕ್ಕೆಂದು ಹೋಗುವಾಗ ಸಮೀಪದ ಕಾವೇರಿ ಹೊಳೆಯಲ್ಲಿ ಸುಮಾರು 45-46 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವ ತೇಲುತ್ತಿರುವುದಾಗಿ ನೀಡಿದ ದುರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 09/09/2020ರಂದು ಅಮ್ಮತ್ತಿ ಗ್ರಾಮದ ಪಾಲಿಬೆಟ್ಟ ರಸ್ತೆ ನಿವಾಸಿ ಕವಿತಾ ಎಂಬವರು ಕೆಲಸ ಮುಗಿಸಿ ಅವರ ಸ್ಕೂಟರಿನಲ್ಲಿ ಸಿದ್ದಾಪುರದಿಂದ ಮನೆಗೆ ಹೋಗುತ್ತಿರುವಾಗ ಪುಲಿಯೇರಿ ಗ್ರಾಮದ ಇಂಜಿಲಗೆರೆ ಬಳಿ ಎದುರಿನಿಂದ ದು ಕಾರನ್ನು ಅದರ ಚಾಲಕ ಅಮೃತ್ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕವಿತಾರವರು ಚಾಲಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಕವಿತಾರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 10/09/2020ರಂದು ಮಡಿಕೇರಿಯ ದಾಸವಾಳ ರಸ್ತೆಯ ನಿವಾಸಿ ಸತೀಶ್‍ ಕುಮಾರ್ ಎಂಬವರು ಅವರ ಬೈಕಿನಲ್ಲಿ ನಗರದ ಜಿಲ್ಲಾಸ್ಪತ್ರೆಯ ಮುಂದಿನ ಮುಖ್ಯ ರಸ್ತೆಯಲ್ಲಿ ಹೋಗುತ್ತಿರುವಾಗ ಕಡಗದಾಳು ನಿವಾಶಿ ರಕ್ಷಿತ್‍ ಎಂಬವರು ಅಡ್ಡಗಟ್ಟಿ ಹಳೆಯ ದ್ವೇಷದಿಂದ ಸತೀಶ್‍ ಕುಮಾರ್‍ರವರನ್ನು ಕೊಲೆ ಮಾಡುವುದಾಗಿ ಹೇಳಿ ಚಾಕುವಿನಿಂದ ಕುತ್ತಿಗೆಯ ಹಿಂಭಾಗಕ್ಕೆ ಚುಚ್ಚಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.