Crime News

ಅಕ್ರಮ ವನ್ಯಪ್ರಾಣಿ ಬೇಟೆ ಯತ್ನ, ಪ್ರಕರಣ ದಾಖಲು

ದಿನಾಂಕ: 11-09-2020 ರಂದು ಸೋಮವಾರಪೇಟೆ ಅರಣ್ಯ ಸಂಚಾರಿ ದಳದ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಗಸ್ತು ಕರ್ತವ್ಯದಲ್ಲಿರುವಾಗ ಅನುಮಾನಾಸ್ಪದವಾಗಿ ಹೋಗುತ್ತಿದ್ದ ಕೆಎ-03-ಎಂಸಿ-2824 ರ ಮಾರುತಿ 800 ಕಾರನ್ನು ಸೋಮವಾರಪೇಟೆ ತಾಲ್ಲೂಕು ಬೇಳೂರು ಬಾಣೆ ಬಳಿ ತಡೆದು ನಿಲ್ಲಿಸಿ ಪರಿಶೀಲಿಸಿದಾಗ ವಾಹನದಲ್ಲಿ ಮೂರು ಕೋವಿ ಮತ್ತು 10 ಕೋವಿ ತೋಟಗಳು, ಹೆಡ್‍ ಟಾರ್ಚ್, ಕತ್ತಿ ಮತ್ತು ಟಾರ್ಪಲ್‍ ಗಳನ್ನು ಇಟ್ಟುಕೊಂಡು ಅಕ್ರಮವಾಗಿ ವನ್ಯಪ್ರಾಣಿ ಬೇಟೆಯಾಡಲು ಹೋಗಿರುವುದಾಗಿ ಕಂಡುಬಂದಿದ್ದರಿಂದ ಗೌಡಳ್ಳಿ ಹಿರಿಕರ ಗ್ರಾಮದ ಅಜಿತ್, ದೇವರಾಜು, ಧನಂಜಯ, ಹಾಗೂ ಗೌಡಳ್ಳಿ ಚನ್ನಪುರ ಗ್ರಾಮದ ದೀಪಕ್‍ ಎಂಬುವವರನ್ನು ವಶಕ್ಕೆ ಪಡೆದು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.