Crime News

ಅಕ್ರಮ ಮದ್ಯ ಮಾರಾಟ ಪ್ರಕರಣ

ದಿನಾಂಕ: 12-09-2020 ರಂದು ಸೋಮವಾರಪೇಟೆ ತಾಲ್ಲೂಕು ಅಂಕನಹಳ್ಳಿ  ಗ್ರಾಮದ  ಹಾಲಿನ ಡೈರಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡಿ ಮದ್ಯ ಸೇವನೆಗೆ ಅವಕಾಶ ಮಾಡುತ್ತಿದ್ದ ಪ್ರಕರಣವನ್ನು ಶನಿವಾರಸಂತೆ ಠಾಣೆ ಪಿಎಸ್‍ಐ ದೇವರಾಜು ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಗಂಗಾವರ ಗ್ರಾಮದ ನಿವಾಸಿ ಷಣ್ಮುಖ ಎಂಬುವವರ ವಿರುದ್ದ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಬೈಕ್‍ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು.

ದಿನಾಂಕ: 04-08-2020 ರಂದು ಸೋಮವಾರಪೇಟೆ ತಾಲ್ಲೂಕು ಆನೆಕಾಡು ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-12-ಹೆಚ್‍-8493 ರ ಬೈಕ್ನ್ನು ಅದರ ಸವಾರ ಜಾನ್‍ ಕಾರ್ಕಡ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಬೈಕ್‍ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬಿದ್ದುದರಿಂದ ಗಾಯಗೊಂಡಿದ್ದು ನಂತರ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅವರ ಮಗ ಮೈಕೆಲ್ ಕ್ರಿಪ್ಟನ್‍ ರವರ ಕಾರ್ಕಳದ ಸಾಣೂರಿನ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದರು. ಗಾಯಗೊಂಡಿದ್ದ ಜಾನ್‍ ಕರ್ಕಡ ರವರು ದಿನಾಂಕ: 12-09-2020 ರಂದು ಮೃತಪಟ್ಟರುವ ಬಗ್ಗೆ ಕುಶಾಲನಗರ ಚರ್ಚ್ ಫಾದರ್‍ ಅಮೃತ್‍ ರಾಜ್‍ ಎಂಬುವವರು ನೀಡಿದ ದೂರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.