News

ಬಾಲಕಾರ್ಮಿಕರಾಗಿ ದುಡಿಯುತ್ತಿದ್ದ ಅಪ್ರಾಪ್ತ ಮಕ್ಕಳ ರಕ್ಷಣೆ:

ದಿನಾಂಕ 08-09-2020 ರಂದು ಜಿಲ್ಲೆಯ ವಿರಾಜಪೇಟೆ ತಾಲೋಕಿನ ಬಾಡಗರಕೇರಿ ಗ್ರಾಮದಲ್ಲಿ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದ ನಾಲ್ಕು ಮಕ್ಕಳನ್ನು ಪೊಲೀಸ್ ಇಲಾಖೆಯ ಮಕ್ಕಳ ವಿಶೇಷ ಪೊಲೀಸ್ ಘಟಕ ಹಾಗು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿ ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ತರುವಾಯ ಸರಕಾರಿ ಬಾಲಮಂದಿರದಲ್ಲಿ ದಾಖಲಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಇಲಾಖೆಯ ಮಕ್ಕಳ ವಿಶೇಷ ಘಟಕದ ಸಿಬ್ಬಂದಿಯಾದ ಶ್ರೀಮತಿ ಎಂ.ಬಿ. ಸುಮತಿ ಹಾಗು ಇತರೆ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯವರು ಭಾಗಿಯಾಗಿದ್ದರು.

ಅಪ್ರಾಪ್ತ ಮಕ್ಕಳನ್ನು ಬಾಲ ಕಾರ್ಮಿಕರಾಗಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು ಅಂತಹ ಕೃತ್ಯಗಳು ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೇ 1098 ಮಕ್ಕಳ ಸಹಾಯವಾಣಿ ಸಂಖ್ಯೆ ದೂರವಾಣಿ ಮೂಲಕ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಲಾಗಿದೆ.

Crime News

ಕಳವು ಪ್ರಕರಣ

ದಿನಾಂಕ: 06-09-2020 ರಂದು ರಾತ್ರಿ ಮಡಿಕೇರಿ ತಾಲ್ಲೂಕು ಬಿಳಿಗೇರಿ ಗ್ರಾಮದ ನಿವಾಸಿ ರವಿಶಂಕರ್‍ ಎಂಬುವವರ ದ್ವಾರಕಾ ಎಸ್ಟೇಟ್‍ ನ ಸ್ಟೋರ್‍ ರೂಂನಲ್ಲಿದ್ದ ಅಂದಾಜು 3 ಲಕ್ಷ ಬೆಲೆಬಾಳುವ ತೋಟದ ಕೆಲಸಗಳಿಗೆ ಉಪಯೋಗಿಸುವ ಯಂತ್ರಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದಿನಾಂಕ: 15-09-2020 ರಂದು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ: 14-09-2020 ರಂದು ಸೋಮವಾರಪೇಟೆ ತಾಲ್ಲೂಕು ಕೂಡುಮಂಗಳೂರು ಗ್ರಾಮದ ನಿವಾಸಿ ದೇವಪ್ಪ ಎಂಬುವವರಿಗೆ ಅನಾರೋಗ್ಯವಿದ್ದು ಚಿಕಿತ್ಸೆ ಪಡೆದರೂ ಗುಣಮುಖವಾಗದೇ ಇದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಹಿಂಭಾಗದಲ್ಲಿ ಮರಕ್ಕೆ ನೇಣು ಬಿಗದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತರ ಪತ್ನಿ ನೀಡಿದ ದೂರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕ್‍ ಡಿಕ್ಕಿ, ಪಾದಚಾರಿಗೆ ಗಾಯ.

ದಿನಾಂಕ: 13-09-2020 ರಂದು ಸೋಮವಾರಪೇಟೆ ತಾಲ್ಲೂಕು ಮಣಗಲಿ ಗ್ರಾಮದ ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂಪತ್‍ ಎಂಬುವವರಿಗೆ ಕೆಎ-12-ವಿ-606 ರ ಬೈಕ್‍ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿಪಡಿಸಿದ ಪರಿಣಾಮ ಸಂಪತ್‍ ರವರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

ದಿನಾಂಕ: 15-09-2020 ರಂದು ಸೋಮವಾರಪೇಟೆ ತಾಲ್ಲೂಕು ಚಿನ್ನಳ್ಳಿ ಗ್ರಾಮದ ಬಳಿ ಮುಖ‍್ಯ ರಸ್ತೆಯಲ್ಲಿ ಕೆಎ-12-ಎಂಎ-7150 ರ ಕಾರನ್ನು ಅದರ ಚಾಲಕ ಕುಶಾಲಪ್ಪ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-46-ಇ-4294 ರ ಬೈಕ್‍ ಗೆ ಡಿಕ್ಕಿಪಡಿಸಿ ಪರಿಣಾಮ ಬೈಕ್‍ ಸವಾರ ಭುವನ್ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ  ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.