Crime News

ವಂಚನೆ ಪ್ರಕರಣ

ಕುಶಾಲನಗರದ ಮಣಿಪಾಲ್‍ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಷನ್ ಮತ್ತು ಇತರೆ ಸಂಸ್ಥೆಗಳ ಸರ್ವರ್ ಯಂತ್ರಕ್ಕೆ ಇತ್ತೀಚೆಗೆ ಯಾರೋ ಅಪರಿಚಿತರು ರಾನ್ಸಂವೇರ್ ಎಂಬ ಕಂಪ್ಯೂಟರ್ ವೈರಸ್ ಅನ್ನು ಕಳಹಿಸುವ ಮೂಲಕ ಸಂಸ್ಥೆಯ ಮಾಹಿತಿಗಳು ಮತ್ತು ದತ್ತಾಂಶಗಳಿದ್ದ ಸರ್ವರ್‍ನ ಮಾಃಇತಿಗಳನ್ನು ಲಾಕ್ ಮಾಡಿ ಸದ್ರಿ ಮಾಹಿತಿಗಳನ್ನು ಮರಳಿ ಪಡೆಯಲು ಸುಮಾರು 980 ಡಾಲರ್‍ಗಳನ್ನು ನೀಡಬೇಕೆಂದು ಬೇಡಿಕೆ ಇಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿಯ ಸಿಇಎನ್‍ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕಿರುಕುಳ ಪ್ರಕರಣ

ಮಡಿಕೇರಿ ನಗರದ ಮಹಿಳೆಯೊಬ್ಬರಿಗೆ ನಗರದ ದಾಸವಾಳ ರಸ್ತೆಯ ನಿವಾಶಿ ಮಹಮದ್ ಮುದಾಸಿರ್ ಎಂಬಾತನು ಇಲ್ಲ ಸಲ್ಲದ ಸಂದೇಶಗಳನ್ನು ಮೊಬೈಲ್‍ ಮೂಲಕ ಕಳುಹಿಸಿ ಕಿರುಕುಳ ನೀಡಿರುವುದಾಗಿ ದೂರು ನೀಡಿದ್ದು ಅದೇ ರೀತಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ಮ್ಯೂಸಿಯಂ ಬಳಿ ನಗರದ ಶ್ರೀನಿವಾಸ್, ಸತ್ಯ ಮತ್ತು ಉಮೇಶ ಎಂಬವರು ಮಹಮದ್ ಮುದಾಸಿರ್‍ರವರ ಮೇಲೆ ಹಲ್ಲೆ ಮಾಡಿರುವುದಾಗಿ ಪ್ರತಿ ದೂರು ನೀಡಿದ್ದು ಮಡಿಕೇರಿ ನಗರ ಪೊಲೀಸರು ಎರಡೂ ದೂರುಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.