Crime News

ವಾಹನ ಕಳವು ಪ್ರಕರಣ

ದಿನಾಂಕ: 19-09-2020 ರಂದು ರಾತ್ರಿ ಸೋಮವಾರಪೇಟೆ ತಾಲ್ಲೂಕು ಮಾದಾಪಟ್ಟಣ ಗ್ರಾಮದ ಕೆ.ಸಿ.ಪಿ ಬರ್ಡ್‍ ಕೋಳಿ ಅಂಗಡಿಯ ಮಾಲೀಕರಿಗೆ ಸೇರಿದ ಕೆಎ-45-8304 ರ ಪಿಕ್‍ ಅಪ್‍ ವಾಹನವನ್ನು ಅಂಗಡಿಯ ಮುಂದೆ ಚಾಲಕ ಸುರೇಶ್‍ ಎಂಬುವವರು ನಿಲ್ಲಿಸಿದ್ದು, ವಾಪಾಸ್ಸು ಬೆಳಿಗ್ಗೆ ಬಂದು ನೋಡಿದಾಗ ಯಾರೋ ಕಳ‍್ಳರು ವಾಹವನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ ಪ್ರಕರಣ

ದಿನಾಂಕ: 21-09-2020 ರಂದು ಸೋಮವಾರಪೇಟೆ ಪಟ್ಟಣದ ಕರ್ಕಳ‍್ಳಿ ರಸ್ತೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟ್‍ ಜೂಜಾಟವಾಡುತ್ತಿದ್ದ ಪ್ರಕರಣವನ್ನು ಸೋಮವಾರಪೇಟೆ ಠಾಣೆ ಪಿಎಸ್‍ಐ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ರಸ್ತೆ ಅಪಘಾತ ಪ್ರಕರಣ

ದಿನಾಂಕ: 21-09-2020 ರಂದು ವಿರಾಜಪೇಟೆ ತಾಲ್ಲೂಕು ಕೊಳ‍್ತೋಡು ಬೈಗೋಡು ಗ್ರಾಮದ ಬಳೀ ಮುಖ್ಯ ರಸ್ತೆಯಲ್ಲಿ ಕೆಎ-12-ಜೆಡದ-5728 ರ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎಲ್‍-59-ಬಿ-4070 ರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಸುತ್ತಿದ್ದ ಚಾಲಕ ಬಿಜೇಶ್ ಮತ್ತು ಅವರ ಪತ್ನಿ ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಕಾಣೆ ಪ್ರಕರಣ

ದಿನಾಂಕ: 19-09-2020 ರಂದು ಬೆಳಿಗ್ಗೆ ಸೋಮವಾರಪೇಟೆ ತಾಲ್ಲೂಕು ಅಬ್ಬೂರುಕಟ್ಟೆ ಗ್ರಾಮದ ನಿವಾಸಿ ಸುಬ್ರಮಣಿ ಎಂಬುವವರು ಮನೆಯಿಂದ ಚೌಡ್ಲು ಗ್ರಾಮದ ಕಲ್ಲುಕೋರೆಗೆ ಕೆಲಸಕ್ಕೆ ಹೋಗಿದ್ದು ನಂತರ ಕೆಲಸಕ್ಕೆ ಹೋಗದೇ ವಾಪಸ್ಸು ಮನೆಗೂ ಬಾರದೇ ಕಾಣೆಯಾಗಿದ್ದು ಈ ಬಗ್ಗೆ ಸುಬ್ರಮಣಿ ರವರ ಪತ್ನಿ ನೀಡಿದ ದೂರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರರಕಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ಸೋಮವಾರಪೇಟೆ ತಾಲ್ಲೂಕು ಕ್ಯಾತೆ ಗ್ರಾಮದ ನಿವಾಸಿ ಕುಮಾರ ಎಂಬುವವರಿಗೆ ವಿಪರೀತ ಮದ್ಯಪಾನ ಮಡುವ ಅಭ್ಯಾಸವಿದ್ದು ಅನಾರೋಗ್ಯವಿದ್ದ ವಿಚಾರಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 21-09-2020 ರಂದು ಮನೆಯಲ್ಲಿ ನೇಣು ಬಿಗದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತರ ತಾಯಿ ನೀಡಿದ ದೂರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.