Crime News

ನೇಣು ಬಿಗಿದುಕೊಂಡು ಆತ್ಮಹತ್ಯೆ

ದಿನಾಂಕ 21/09/2020ರಂದು ಸೋಮವಾರಪೇಟೆ ಬಳಿಯ ಚೌಡ್ಲು ನಿವಾಸಿ ವಿನೋದ್ ಕುಮಾರ್ ಎಂಬವರು ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಘಟನೆ ಸಂಬಂಧ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 22/09/2020ರಂದು ಕೊಡ್ಲಿಪೇಟೆ ಬಳಿಯ ಚಿಕ್ಕ ಭಂಡಾರ ನಿವಾಸಿ ವಿಶ್ವನಾಥ ಬವರ ಜೊತೆಗೆ ನೆರೆ ಮನೆಯ ವೆಂಕಟೇಶ ಶೆಟ್ಟಿ ಮತ್ತು ವಿಜಿ ಎಂಬವರು ಬೇಲಿಯ ವಿಷಯದಲ್ಲಿ ಜಗಳವಾಡಿ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಗೋಡೆ ಬಿದ್ದು ವೃದ್ದೆ ಸಾವು

ದಿನಾಂಕ 22/09/2020ರಂದು ಕುಟ್ಟ ಬಳಿಯ ಸಿಂಕೋನ ಕಾಲೋನಿ ನಿವಾಸ ಜೈನಬಿ ಎಂಬ 70 ವರ್ಷ ಪ್ರಾಯದ ಮಹಿಳೆಯ ಮೇಲೆ ವಿಪರೀತ ಮಳೆಯಿಂದಾಗಿ ತೇವವಾಗಿದ್ದ ಮನೆಯ ಅಡುಗೆ ಮನೆಯ ಗೋಡೆ ಬಿದ್ದು ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಅಕ್ರಮ ಗಾಂಜಾ ಪತ್ತೆ

ದಿನಾಂಕ 22/09/2020ರಂದು ಅಕ್ರಮವಾಗಿ ಕಾರಿನಲ್ಲಿ ಗಾಂಜಾ ಸಾಗಿಸುತ್ತಿರುವ ಸುಳಿವಿನ ಮೇರೆಗೆ ಪೊನ್ನಂಪೇಟೆ ಪಿಎಸ್‍ಐ ಡಿ.ಕುಮಾರ್‍ರವರು ಗೋಣಿಕೊಪ್ಪ ನಗರದ ಕೈಕೇರಿ ಬಳಿ ಒಂದು ಮಾರುತಿ ಕಾರಿನಲ್ಲಿ ಮಾರಾಟಕ್ಕೆಂದು ಗಾಂಜಾ ಸಾಗಿಸುತ್ತಿದ್ದ ಮಹಮದ್ ಸುಲೈಮಾನ್ ಅಲಿಯಾಸ್ ವಿನೋದ್ ಪೂಜಾರಿ ಎಂಬವನನ್ನು ಪತ್ತೆ ಹಚ್ಚಿ ಆತನಿಂದ ಗಾಂಜಾ ಮತ್ತು ಕಾರನ್ನು ವಶಪಡಿಸಿಕೊಂಡು ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.