Crime News

ಅಕ್ರಮ ಗಾಂಜಾ ಸಾಗಾಟ ಪ್ರಕರಣ:

ದಿನಾಂಕ 23-9-2020 ರಂದು ವಿರಾಜಪೇಟೆ ಗ್ರಾಮಾಂತರ ಠಾಣೆಯ ಪಿಎಸ್ಐ ರವರಿಗೆ ಬಂದ ಖಚಿತ ಮಾಹಿತಿ ಆದಾರದ ಮೇರೆಗೆ ಠಾಣಾ ಸರಹದ್ದಿನ ಬಿಟ್ಟಂಗಾಲ ಗ್ರಾಮದಲ್ಲಿ ಗೋಣಿಕೊಪ್ಪ ಕಡೆಯಿಂದ ಬಿಟ್ಟಂಗಾಲ ಮಾರ್ಗವಾಗಿ ವಿರಾಜಪೇಟೆ ಕಡೆಗೆ ಮೋಟಾರ್ ಸೈಕಲಿನಲ್ಲಿ ಬರುತ್ತಿದ್ದ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಗೆ ಮಾರಾಟ ಮಾಡಲು ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿದ ವಿರಾಜಪೇಟೆ ಉಪ ವಿಭಾಗದ ಡಿವೈ.ಎಸ್.ಪಿ. ನೇತೃತ್ವದ ತಂಡ ಆರೋಪಿ ಕಿರಗೂರು ಗ್ರಾಮದ ಪೆಮ್ಮಂಡ ಯು. ಸೋಮಣ್ಣ @ ಸುಹಾಸ್ ಎಂಬವರನ್ನು ವಶಕ್ಕೆ ಪಡೆದು ಆತನಿಂದ 45 ಗ್ರಾಂ ತೂಕದ ಗಾಂಜಾ, ಒಂದು ಮೊಬೈಲ್ ಹಾಗು ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲನ್ನು ವಶಪಡಿಸಿಕೊಂಡಿರುತ್ತಾರೆ. ದಾಳಿ ಸಂದರ್ಭದಲ್ಲಿ ಮತ್ತೊಬ್ಬ ಆರೋಪಿ ಬಾಳುಗೋಡು ಗ್ರಾಮದ ಚೇಂದಂಡ ಬೋಪಣ್ಣ ಪರಾರಿಯಾಗಿರುತ್ತಾನೆ.

ಈ ಕಾರ್ಯಾಚರಣೆಯು ವಿರಾಜಪೇಟೆ ಉಪ ವಿಭಾಗದ ಡಿವೈ.ಎಸ್.ಪಿ. ಶ್ರೀ ಸಿ.ಟಿ. ಜಯಕುಮಾರ್ ರವರ ನೇತೃತ್ವದಲ್ಲಿ ನಡೆದಿದ್ದು, ಕಾರ್ಯಾಚರಣೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ವೀಣಾನಾಯಕ್, ಗೋಣಿಕೊಪ್ಪ ಠಾಣೆಯ ಎಎಸ್ಐ ಸುಬ್ರಮಣಿ ಸಿಬ್ಬಂದಿಗಳಾದ ವಿರಾಜಪೇಟೆ ಗ್ರಾಮಾಂತರ ಠಾಣೆಯ ರಾಮಪ್ಪ ಮತ್ತು ಚಂದ್ರಶೇಖರ ಹಾಗು ಪೊನ್ನಂಪೇಟೆ ಠಾಣೆಯ ಎಂ.ಡಿ.ಮನು ರವರು ಭಾಗವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪ್ರಶಂಸಿಸಲಾಗಿದೆ.

ಹಲ್ಲೆ ಪ್ರಕರಣ

ದಿನಾಂಕ: 22-09-2020 ರಂದು ಸೋಮವಾರಪೇಟೆ ತಾಲ್ಲೂಕು ಚಿಕ್ಕಭಂಡಾರ ಗ್ರಾಮದ ನಿವಾಸಿ ವಿಜಯಕುಮಾರ್‍ ಮತ್ತು ಅವರ ಪತ್ನಿಯವರಿಗೆ ಅದೇ ಗ್ರಾಮದ ನಿವಾಸಿಗಳಾದ ವಿಶ್ವನಾಥ ಮತ್ತು ರವಿ ಎಂಬುವವರು ವೈಯಕ್ತಿಕ ವೈಷಮ್ಯದಿಂದ ದಾರಿ ತಡೆದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿದ್ಯುತ್‍ ತಂತಿ ತಗುಲಿ ಜಾನುವಾರು ಸಾವು

ದಿನಾಂಕ: 22-09-2020 ರಂದು ವಿರಾಜಪೇಟೆ ತಾಲ್ಲೂಕು ಬಾಳೆಲೆ ದೇವನೂರು ಗ್ರಾಮದ ನಿವಾಸಿ ದಿನೇಶ ಎಂಬುವವರಿಗೆ ಸೇರಿದ 2 ಎಮ್ಮೆಗಳು ಮತ್ತು 1 ಕರು ಕೊಟ್ಟಿಗೆಗೆ ಹೋಗುವಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಷಗೊಂಡು ಮೃತಪಟ್ಟಿರುತ್ತವೆ. ಜಾನುವಾರುಗಳ ಸಾವಿಗೆ ವಿದ್ಯುತ್‍ ಇಲಾಖೆಯ ನಿರ್ಲಕ್ಷತೆ ಕಾರಣ ಎಂಬದಾಗಿ ಸೆಸ್ಕ್‍ ಅಧಿಕಾರಿಗಳ ವಿರುದ್ದ ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.