Crime News

ರಸ್ತೆ ಅಪಘಾತ

ದಿನಾಂಕ 25/09/2020ರ ರಾತ್ರಿ ವೇಳೆ ಮಡಿಕೇರಿ ಬಳಿಯ ಮೇಕೇರಿ ನಿವಾಸಿ ಭವನ್‍ ಶಂಕರ್ ಎಂಬವರು ಅವರ ಸ್ಕೂಟರಿನಲ್ಲಿ ಮೇಕೇರಿಯಿಂದ ಮನೆಗೆ ಹೋಗುತ್ತಿರುವಾಗ ಮೇಕೇರಿಯ ಭಗವತಿ ಕಾಫಿ ವರ್ಕ್ಸ್ ಬಳಿ ಮಡಿಕೇರಿ ಕಡೆಯಿಂದ ಒಂದು ಕಾರನ್ನು ಅದರ ಚಾಲಕ ಕಾಂತೂರು ಮೂರ್ನಾಡಿನ ನಿವಾಸಿ ನವೀನ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಭವನ್‍ ಶಂಕರ್‍ ರವರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಭವನ್‍ ಶಂಕರ್‍ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಗಾಂಜಾ ಮಾರಾಟಕ್ಕೆ ಯತ್ನ ಇಬ್ಬರ ಬಂಧನ

ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಿರಾಜಪೇಟೆ ಉಪ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಿನಾಂಕ 16-09-2020 ರಂದು ದೊರೆತ ಖಚಿತ ಮಾಹಿತಿ ಮೇರೆಗೆ ಗೋಣಿಕೊಪ್ಪ ಠಾಣಾ ಸರಹದ್ದಿನ ತಿತಿಮತಿ ಗ್ರಾಮದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುವ ಸಲುವಾಗಿ ಅಕ್ರಮವಾಗಿ ಮಾರುತಿ ವ್ಯಾನಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ದಾಳಿ ನಡೆಸಿದ ವಿರಾಜಪೇಟೆ ಪೊಲೀಸ್ ಉಪಾಧೀಕ್ಷಕರಾದ ಸಿ.ಟಿ ಜಯಕುಮಾರ್ ನೇತೃತ್ವದ ತಂಡ ಆರೋಪಿಗಳಾದ ಹೆಚ್.ಸಿ. ಸತೀಶ್ ಮತ್ತು ಪಂಜರಿ ಎರವರ ಶಿವು ಎಂಬವರನ್ನು ಮಾಲು ಸಮೇತ ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

 

ಕಾರ್ಯಾಚರಣೆಯಲ್ಲಿ ಸಿಪಿಐ ಎನ್.ಎನ್.ರಾಮರೆಡ್ಡಿ, ಪಿಎಸ್ಐ ಡಿ.ಕುಮಾರ್, ಎಎಸ್ಐ ಎಂ.ಎಸ್. ಸುಬ್ರಮಣಿ, ಸಿಬ್ಬಂದಿಗಳಾದ ಕೃಷ್ಣ, ಬಿ.ಎಂ.ರಾಮಪ್ಪ, ಎಂ.ಡಿ.ಮನು ಹಾಗೂ ಚಂದ್ರಶೇಖರ ರವರು ಭಾಗಿಯಾಗಿದ್ದರು.

 

ವ್ಯಕ್ಯಿ ಕಾಣೆ

ವಿರಾಜಪೇಟೆ ಬಳಿಯ ಕೋಟೂರು ನಿವಾಸಿ ಸುಮಾರು 78 ವರ್ಷ ಪ್ರಾಯದ ಪೆಮ್ಮಂಡ ಅಚ್ಚಯ್ಯ ಎಂಬವರು ದಿನಾಂಕ 23/09/2020ರಿಂದ ಮನೆಯಲ್ಲಿಲ್ಲದೇ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ; ಬೈಕ್ ಸವಾರನ ಮರಣ

ದಿನಾಂಕ 25/09/2020ರ ರಾತ್ರಿ ವೇಳೆ ಕುಶಾಲನಗರ ಬಳಿಯ ಮದಲಾಪುರ ನೀವಾಸಿ ರಾಮೇಗೌಡ ಎಂಬವರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಮದಲಾಪುರ ನಿವಾಸಿ ಮೂರ್ತಿ ಎಂಬವರು ಅವರ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಾಮೇಗೌಡರಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರ ಮೂರ್ತಿಯವರು ಕೆಳಗೆ ಬಿದ್ದು ಗಂಭೀರವಾದ ಗಾಯಗಳಿಂದ ಚಿಕಿತ್ಸೆಗಾಗಿ ಮೈಸೂರಿಗೆ ಕರೆದುಕೊಂಡು ಹೋಗುವಾಗ ದಾರಿ ನಡುವೆ ಮೂರ್ತಿರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ; ಗಾಯಾಳು ಸಾವು

ದಿನಾಂಕ 20/09/2020ರಂದು ಕುಶಾಲನಗರದ ಗುಡ್ಡೆಹೊಸೂರು ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ತೊರೆನೂರು ನಿವಾಸಿ ಅಣ್ಣಯ್ಯ ಚಾರಿ ಎಂಬವರಿಗೆ ಕುಶಾಲನಗರದ ಗಂಧದಕೋಟೆ ನಿವಾಸಿ ನವಾಜ್ ಎಂಬವರು ಸ್ಕೂಟರನ್ನು ಡಿಕ್ಕಿಪಡಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಅಣ್ಣಯ್ಯ ಆಚಾರಿಯವರು ದಿನಾಂಕ 25/09/2020ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.