Crime News

ಕಡಂಜದ ಹುಳು ಕಚ್ಚಿ ವ್ಯಕ್ತಿ ಸಾವು

ದಿನಾಂಕ: 8-09-2020 ರಂದು ವಿರಾಜಪೇಟೆ ತಾಲ್ಲೂಕು ನಾಲ್ಕೇರಿ ಗ್ರಾಮದ ನಿವಾಸಿ ಸುಬ್ರಮಣಿ ಎಂಬುವವರು ಕಾಫಿ ತೋಟದ ಕೆಲಸ ಮುಗಿಸಿ ವಾಪಾಸ್ಸು ಮನೆಗೆ ಹೋಗುತ್ತಿರುವಾಗ ಏಕಾಏಕಿ ಕಡಂಜದ ಹುಳುಗಳು (ಕಡಜದ ಹುಳು ಅಥವಾ ಕಣಜದ ಹುಳು) ಕಚ್ಚಿ ಅಸ್ವಸ್ಥಗೊಂಡಿದ್ದು ಕೂಡಲೇ ಜೊತೆಯಲ್ಲಿದ್ದವರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸುಬ್ರಮಣಿ ರವರು ಮೃತಪಟ್ಟಿದ್ದು ಈ ಬಗ್ಗೆ ಮೃತರ ಸಹೋದರಿ ನೀಡಿದ ದೂರಿನ ಮೇರೆ ಕುಟ್ಟ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸರ್ಕಾರದ ಪರಿಹಾರ ಧನ ದುರುಪಯೋಗ ಪ್ರಕರಣ

ಸೋಮವಾರಪೇಟೆ ತಾಲ್ಲೂಕು ತಾಕೇರಿ ಗ್ರಾಮದ ನಿವಾಸಿ ಪೂವಯ್ಯ ಎಂಬುವವರ ವಾಸದ ಮನೆ 2018-19 ನೇ ಸಾಲಿನಲ್ಲಿ ಮಳೆಯಿಂದ ಹಾನಿಗೊಳಗಾಗಿದ್ದರಿಂದ ಪರಿಹಾರಕ್ಕಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ ಮೇರೆ ಮನೆ ನಿರ್ಮಾಣಕ್ಕಾಗಿ 4 ಹಂತಗಳಲ್ಲಿ ಒಟ್ಟು 9,80,000 ಹಣ ಸರ್ಕಾರದಿಂದ ಬಿಡುಗಡೆಯಾಗಿರುತ್ತದೆ. ಮನೆ ನಿರ್ಮಾಣದ ಬಗ್ಗೆ ಕಂದಾಯ ಇಲಾಖೆ ಪರಿವೀಕ್ಷಕರು ಪರಿಶೀಲಿಸಿದಾಗ ಪೂವಯ್ಯ ರವರು ಮನೆ ನಿರ್ಮಾಣ ಮಾಡದೇ ಕಂದಾಯ ಇಲಾಖೆ ಅಧಿಕಾರಿಗಳಿಗೆ  ಬೇರೆ ಬೇರೆ ಮನೆಗಳನ್ನು ತೋರಿಸಿ ಸರ್ಕಾರದ ಪರಿಹಾರ ಹಣ ಪಡೆದು ವಂಚನೆ ಮಾಡಿದ್ದು ಈ ಬಗ್ಗೆ ಕಂದಾಯ ಪರಿವೀಕ್ಷಕರಾದ ವಿನು ಬಿ.ಎನ್‍ ಎಂಬುವವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.