Crime News
ಅಕ್ರಮ ಗಾಂಜಾ ಸಾಗಾಟ ಪ್ರಕರಣ
ದಿನಾಂಕ: 01-10-2020 ರಂದು ಸೋಮವಾರಪೇಟೆ ಠಾಣೆ ಪಿಎಸ್ಐ ಶಿವಶಂಕರ್ ರವರಿಗೆ ದೊರೆತ ಖಚಿತ ಮಾಹಿತಿ ಮೇರೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಕುಶಾಲನಗರದಿಂದ ಸೋಮವಾರಪೇಟೆಗೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ನಿದೀಶ್ ಮತ್ತು ವಿನಯ್ ಎಂಬುವವರನ್ನು ವಶಕ್ಕೆ ಪಡೆದು 20,000 ರೂ ಮೌಲ್ಯದ ಗಾಂಜಾವನ್ನು ಸಾಗಾಟ ಮಾಡಲು ಉಪಯೋಗಿಸಿದ ವಾಹನದೊಂದಿಗೆ ಅಮಾನತ್ತುಪಡಿಸಿಕೊಂಡು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ವಿದ್ಯುತ್ ಅವಗಢ, ಸೆಸ್ಕ್ ನೌಕರ ಸಾವು.
ದಿನಾಂಕ: 01-10-2020 ರಂದು ಸೋಮವಾರಪೇಟೆ ತಾಲ್ಲೂಕು ಶಾಂತಪುರ ಗ್ರಾಮದಲ್ಲಿ ಸೆಸ್ಕ್ ವಿದ್ಯತ್ ಲೈನ್ ಮ್ಯಾನ್ ಉಲ್ಲಾಸ್ ಎಂಬುವವರು ದುರಸ್ಥಿಗೊಂಡಿದ್ದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕೆಲಸ ಮಾಡುತ್ತಿರುವಾಗ ಅಜಾಗರೂಕತೆಯಿಂದ ಟ್ರಾನ್ಸ್ ಫಾರ್ಮರ್ ಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದು ಈ ಬಗ್ಗೆ ಮೃತರ ಸಹೋದರ ದರ್ಶನ್ ಎಂಬುವವರು ಸೆಸ್ಕ್ ಜೆ.ಇ ರವರು ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸದೆ ನಿರ್ಲಕ್ಷತೆ ಮಾಡಿರುವ ಬಗ್ಗೆ ನೀಡಿಸ ಪುಕಾರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಬೈಕ್ ಗೆ ಕಾರು ಡಿಕ್ಕಿ, ಸವಾರರಿಗೆ ಗಾಯ.
ದಿನಾಂಕ: 01-10-2020 ರಂದು ವಿರಾಜಪೇಟೆ ತಾಲ್ಲೂಕು ಕಡಂಗ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-01-ಎಂಡಿ-8311 ರ ಕಾರನ್ನು ಅದರ ಚಾಲಕ ರವಿ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರರಿಬ್ಬರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವಂಚನೆ ಪ್ರಕರಣ
ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪ ನಿವಾಸಿ ಶ್ರೀಮತಿ ಎಂಬುವವರು ಶ್ರೀಮತಿ ಜ್ಯೋತಿ ಎಂಬುವವರಿಗೆ 1,40,000 ಹಣ ಸಾಲ ನೀಡಿ ಬದಲಿಯಾಗಿ ಚೆಕ್ ಪಡೆದುಕೊಂಡಿದ್ದರು. ದಿನಾಂಕ: 11-05-2020 ರಂದು ನಗದೀಕರಣಕ್ಕಾಗಿ ಚೆಕ್ಕನ್ನು ಬ್ಯಾಂಕ್ ಗೆ ನೀಡಿದಾಗ ಖಾತೆಯಲ್ಲಿ ಹಣವಿಲ್ಲದ್ದರಿಂದ ತಿರಸ್ಕೃತಗೊಂಡಿರುತ್ತದೆ. ನಂತರ ದಿನಾಂಕ: 29-05-2020 ರಂದು ಜ್ಯೋತಿ ರವರು ಬೇರೊಂದು ಚೆಕ್ ನೀಡಿದ್ದು ನಗದೀಕರಣಕ್ಕೆ ಬ್ಯಾಕ್ ಗೆ ಹೋದಾಗ ಚೆಕ್ ನಲ್ಲಿ ಸಹಿ ವ್ಯತ್ಯಾಸವಿರುವುದಾಗಿ ತಿಳಿದುಬಂದಿರುತ್ತದೆ. ಜ್ಯೋತಿ ರವರು ಅವರ ಗಂಡ ಮಹೇಶ್ ಎಂಬುವವರ ಚೆಕ್ ಗೆ ಆಕೆಯ ಸಹಿ ಮಾಡಿ ಕೊಟ್ಟು ವಂಚನೆ ಮಾಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.