Crime news

ವ್ಯಕ್ತಿ ಮೇಲೆ ಹಲ್ಲೆ:

ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಲೆ ಗ್ರಾಮದ ರಾಜಾಪುರ ನಿವಾಸಿ ಪಿ.ಟಿ. ಬಾಲಕೃಷ್ಣ ಹಾಗು ಅವರ ಅಣ್ಣ ಪೂಣಚ್ಚನವರಿಗೆ ಜಾಗದ ದಾರಿ ವಿಚಾರದಲ್ಲಿ ತಕರಾರಿದ್ದು ಅದು ಬಗೆಹರಿದಿದ್ದು, ದಿನಾಂಕ       24-6-2018 ರಂದು ಆರೋಪಿಗಳಾದ ಶರಣು  ಮತ್ತು ಇತರರು ಸೇರಿ  ಪಿ.ಟಿ. ಬಾಲಕೃಷ್ಣರವರ ಮಗ ಕಾವೇರಪ್ಪ ಕಾಫಿತೋಟದಲ್ಲಿರುವ ಕಾಫಿ ಗಿಡಗಳ ಕೊಂಬೆಯನ್ನು ಮುರಿದ ವಿಚಾರದಲ್ಲಿ ಜಗಳ ಮಾಡುತ್ತಿದ್ದು ಜಗಳ ಬಿಡಿಸಲು ಹೋದ ಪಿ.ಟಿ. ಬಾಲಕೃಷ್ಣರವರ ಮೇಲೆ ಹಲ್ಲೆ ಮಾಡಿ ಗಾಯಪಡಿಸಿರುವುದಾಗಿ ಅಲ್ಲದೆ ಮಗ  ಕಾವೇರಪ್ಪ ಹಾಗು ಪತ್ನಿಯ ಮೇಲೂ ಸಹ ಹಲ್ಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆರೆಗೆ ಹಾರಿ ಆತ್ಮಹತ್ಯೆ:

ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ತಾಲೋಕು ಬಿರುನಾಣಿ ಗ್ರಾಮದಲ್ಲಿ ನಡೆದಿದೆ.  ಬಿರುನಾಣಿ ಗ್ರಾಮದ ನಿವಾಸಿ ನೆಲ್ಲೀರ ದತ್ತಾತ್ರೇಯ ಎಂಬವರ ಮಗ ನೆಲ್ಲೀರ ಬೋಜು @ ಮೊಣ್ಣಪ್ಪ ಎಂಬವರು ದಿನಾಂಕ 24-6-2018 ರಂದು ನೆಲ್ಲೀರ ಹರೀಶ ಎಂಬವರಿಗೆ ಸೇರಿದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ನೆಲ್ಲೀರ ದತ್ತಾತ್ರೇಯ ರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವಾಲಯದಿಂದ ವಿಗ್ರಹ ಕಳವು:

ಕುಟ್ಟ ಠಾಣಾ ವ್ಯಾಪ್ತಿಯಲ್ಲಿರುವ ಕುಟ್ಟ ನಗರದ ಶ್ರೀ ಕೃಷ್ಣ ದೇವಸ್ಥಾನಕ್ಕೆ ದಿನಾಂಕ 23-6-2018ರ ಬೆಳಗ್ಗೆ 6-30 ಗಂಟೆ ಹಾಗು ದಿನಾಂಕ 24-6-2018ರ ಬೆಳಗ್ಗೆ 9-00 ಗಂಟೆ ನಡುವೆ ಅವಧಿಯಲ್ಲಿ ಯಾರೋ ಕಳ್ಳರು ದೇವಸ್ಥಾನದ ಗರ್ಭಗುಡಿಯ ಬಾಗಿಲಿಗೆ ಹಾಕಿದ ಬೀಗವನ್ನು ಮೀಟಿ ಬಾಗಿಲಿಗೆ ಹಾಕಿದ ತಾಮ್ರದ ಚಿಲಕವನ್ನು ಮುರಿದು ಸುಮಾರು 20,000 ರೂ ಮೌಲ್ಯದ ಶ್ರೀ ಕೃಷ್ಣ ದೇವರ ವಿಗ್ರಹವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಸಂಬಂಧ ಕೆ.ಕೆ. ತಂಗರಾಜುರವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ.

ಮಡಿಕೇರಿ ನಗರದ ಕನ್ನಂಡಬಾಣೆಯಲ್ಲಿ ವಾಸವಾಗಿರುವ ಚಂದ್ರಶೇಖರ @ ಚಂದ್ರ ಎಂಬವರು ಮಡಿಕೇರಿ ನಗರದಲ್ಲಿ ಆಟೋ ರಿಕ್ಷಾವನ್ನು ಇಟ್ಟುಕೊಂಡಿದ್ದು ದಿನಾಂಕ 24-6-2018 ರಂದು ಮಡಿಕೇರಿಯಿಂದ ಮದೆನಡು ಕಡೆಗೆ ತಮ್ಮ ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕಾರೊಂದು ಡಿಕ್ಕಿಯಾಗಿ ಆಟೋ ರಿಕ್ಷಾ ಜಖಂ ಗೊಂಡು ಚಾಲಕ ಚಂದ್ರಶೇಖರ್ ರವರು ಗಾಯಗೊಂಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.